ಬ್ರೇಕಿಂಗ್ ನ್ಯೂಸ್
24-05-23 03:54 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 24 : ನನಗೆ ವಾರ್ನ್ ಮಾಡಿಲ್ಲ, ನಾನು ಯಾರಿಗೂ ವಾರ್ನ್ ಮಾಡೋದು ಇಲ್ಲ. ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ನಾನಲ್ಲ ಎಂದು ನೂತನ ಸಚಿವ ಎಂ.ಬಿ.ಪಾಟೀಲ್ ಡಿಕೆ ಬ್ರದರ್ ಗೆ ಟಕ್ಕರ್ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು 6 ಬಾರಿ ಶಾಸಕನಾಗಿದ್ದೇನೆ, ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ-ತಾಯಿನೇ ಒಂದೂ ದಿನ ನನಗೆ ವಾರ್ನ್ ಮಾಡಿಲ್ಲ. ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ವಾರ್ನಿಂಗ್ ಕೊಡ್ತೇವೆ ವಿನಃ ನಾವು ತೆಗೆದುಕೊಳ್ಳಲ್ಲ. ಎಂ.ಬಿ.ಪಾಟೀಲ್ ಯಾರಿಗೂ ಹೆದರಲ್ಲ, ನಾನು ವಿಜಯಪುರದವನು ಎಂದಿದ್ದಾರೆ.
ವಿಧಾನಸೌಧದಲ್ಲಿ ಬಹಳ ಪ್ರೀತಿಯಿಂದ ಎಂ.ಬಿ.ಪಾಟೀಲ್ರೇ ಅಂತಾ ಸಂಸದ ಡಿ.ಕೆ.ಸುರೇಶ್ ಕರೆದಿದ್ದು ನಿಜ. ಅವರ ಮತ್ತು ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಕಚೇರಿಯೊಳಗೆ ಬನ್ನಿ ಮಾತಾಡೋಣ ಅಂತಾ ಹೇಳಿ ಹೋದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಐದು ವರ್ಷ ಸಿದ್ದರಾಮಯ್ಯರೇ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ. ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಎನ್ನುವ ಮಾತೇ ಇಲ್ಲ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಸಚಿವ ಎಂ.ಬಿ ಪಾಟೀಲ್ ಆಡಿದ ಈ ಮಾತುಗಳು ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ಸಂಸದ ಡಿಕೆ ಸುರೇಶ್ ಅವರು ಎಂಬಿ ಪಾಟೀಲ್ಗೆ ನೇರವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದರು.
ಮಾಧ್ಯಮಗಳ ಜೊತೆ ಹೇಳಿಕೆ ನೀಡಿದ್ದ ಡಿಕೆ ಸುರೇಶ್, ಇದೆಲ್ಲ ಬೇಡ ಅಂತ ಸಚಿವ ಎಂ.ಬಿ.ಪಾಟೀಲ್ಗೆ ಹೇಳಿ ಎಂದು ಖಡಕ್ ಎಚ್ಚರಿಕೆ ನೀಡಿದ್ರು.
ಎಂ.ಬಿ.ಪಾಟೀಲ್ಗೆ ಹೇಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಳಿ ಮಾತನಾಡಿ. ಎಂ.ಬಿ.ಪಾಟೀಲ್ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ ನೀಡಲು ಬರುತ್ತೆ. ಆದರೆ ಈಗಲೇ ಅದೆಲ್ಲ ಬೇಡ ಎಂದರು. ಈ ಮೂಲಕ ಬಹಿರಂಗವಅಗಿಯೇ ಎಂಬಿ ಪಾಟೀಲ್ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರಿಸಿದರು.
Denying talks about power sharing and speculations that Deputy Chief Minister D K Shivakumar will take over as CM after two-and-half years or after 2024 Lok Sabha polls, Minister M B Patil on Monday evening said Siddaramaiah will remain the Chief Minister for a full five year term.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am