ಜನರು ಜೂನ್ ತಿಂಗಳ ನಂತರ ವಿದ್ಯುತ್ ಬಿಲ್ ಕಟ್ಟಬಾರದು ; ಕಾಂಗ್ರೆಸ್‌ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಪ್ರತಿಭಟನೆ ಪಕ್ಕ ಎಂದ ಪ್ರತಾಪ್‌ಸಿಂಹ  

25-05-23 05:08 pm       HK News Desk   ಕರ್ನಾಟಕ

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಜೂನ್‌ನಿಂದಲೇ ಪ್ರತಿಭಟನೆ ನಡೆಸುತ್ತೇನೆ ಎಂದು ಸಂಸದ ಪ್ರತಾಪ್‌ಸಿಂಹ ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು, ಮೇ, 25: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಜೂನ್‌ನಿಂದಲೇ ಪ್ರತಿಭಟನೆ ನಡೆಸುತ್ತೇನೆ ಎಂದು ಸಂಸದ ಪ್ರತಾಪ್‌ಸಿಂಹ ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮಣಿಪಾಲ ಆಸ್ಪತ್ರೆ ಬಳಿ ಇರುವ ಜಂಕ್ಷನ್ ಪರಿಶೀಲಿಸಿ ಮಾತನಾಡಿದ ಅವರು, ಜನರು ಜೂನ್ ತಿಂಗಳ ನಂತರ ವಿದ್ಯುತ್ ಬಿಲ್ ಕಟ್ಟಬಾರದು. ಅಲ್ಲದೆ, ಮನೆಯ ಪ್ರತಿ ಯಜಮಾನಿಗೆ 2 ಸಾವಿರ ರೂಪಾಯಿ ಕೊಡಬೇಕು. ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್‌ಗಳನ್ನು ನೀಡಬೇಕು. ಇಲ್ಲದಿದ್ದರೆ ಜೂನ್ ತಿಂಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.

ನಾನು ಮೈಸೂರು, ಕೊಡಗು ಜಿಲ್ಲೆಗಳ ಅಭಿವೃದ್ಧಿಗಾಗಿ ಯಾರ ಹತ್ತಿರ ಬೇಕಾದರೂ ಹೋಗುವೆ. ಮೈಸೂರು ಕೊಡಗಿಗೆ ಒಳ್ಳೆಯದು ಆಗಬೇಕೆಂಬುದು ಅಷ್ಟೇ ನನ್ನ ಉದ್ದೇಶವಾಗಿದೆ. ಬೇಡಿಯಾದರೂ ಅನುದಾನ ತರುವೆ. ನಾನೊಬ್ಬ ಸೇವಕ, ಆದ್ದರಿಂದ ಜಿಲ್ಲೆಯ ಜನರಿಗೋಸ್ಕರ ಅಂಗಲಾಚುವೆ. ಸಿದ್ದರಾಮಯ್ಯ ಅವರಿಗೆ ಮೈಸೂರಿನ ಬಗ್ಗೆ ಪ್ರೀತಿಯಿದೆ. ರಾಜಕೀಯ ಚುನಾವಣೆಗಷ್ಟೆ. ಉಳಿದ ದಿನ ಅಭಿವೃದ್ಧಿ ಕೆಲಸ ಮಾಡಲು ನಾನು ಬಯಸುತ್ತೇನೆ, ಸಹಕಾರ ಕೊಟ್ಟರೆ ಅಭಿವೃದ್ಧಿ, ಇಲ್ಲದಿದ್ದರೆ ಹೋರಾಟ ಮಾಡುವೆ ಎಂದರು.

ಪೊಲೀಸರಿಗೆ ದಮ್ಕಿ ಹಾಕಬೇಡಿ ;

ಇವತ್ತು ಸರ್ಕಾರ ಐದು ವರ್ಷ ಇರುತ್ತದೆ. ಮತ್ತೊಮ್ಮೆ ಬದಲಿಗೆ ಸರ್ಕಾರ ಬರುತ್ತದೆ. ಆದರೆ, ಪೊಲೀಸ್ ವ್ಯವಸ್ಥೆ ಯಾವತ್ತಿದ್ದರೂ ಒಂದೇ ರೀತಿ ಇರುತ್ತದೆ. ಪೊಲೀಸ್ ವ್ಯವಸ್ಥೆಗೆ ಧಮ್ಕಿ ಹಾಕಬೇಡಿ. ಹಾಗೆಯೆ ಸಿದ್ದರಾಮಯ್ಯ ವಿರುದ್ಧ ಅಶ್ವತ್ಥ್‌ ನಾರಾಯಣ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಬಾಯಿ ತಪ್ಪಿನಿಂದ ಆಗಿದ್ದು, ಹಾಗಂತ ಈಗ ಎಫ್‌ಐಆರ್ ಯಾಕೆ? ಹಾಕಲಾಗಿದೆ ಎಂದು ಪ್ರಶ್ನಿಸಿದರು.

Mysuru MP Prathap Simha warns of protest if congress doesn't fulfill gaurnatees by end of June. He has alos requested people not to pay thier electricity bills after june.