ಬ್ರೇಕಿಂಗ್ ನ್ಯೂಸ್
25-05-23 05:15 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 25: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಬಿಜೆಪಿ ನಾಯಕರನ್ನು ಗುರಿಯಾಗಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್, ಹರೀಶ್ ಪೂಂಜ ಮೇಲೆ ಹಿಂದಿನ ವಿಚಾರಕ್ಕೆ ಈಗ ಎಫ್‌ಐಆರ್ ಹಾಕಿದ್ದಾರೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಾ? ಕಾರ್ಯಕರ್ತರನ್ನು, ಮುಖಂಡರನ್ನು ಧಮಕಿ ಹಾಕಿ ಬಾಯಿ ಮುಚ್ಚಿಸ್ತೀರಾ? ಇಷ್ಟಕ್ಕೇ ಹೆದರಿಸಲು ಸಾಧ್ಯವಾ? ಕೆಲವು ರೌಡಿಗಳು ಪೊಲೀಸರಿಗೆ ಧಮಕಿ ಹಾಕುವುದನ್ನು ನೋಡಿದ್ದೇವೆ. ಅನುಭವಿ ಅಧಿಕಾರಿಗಳಿಗೆ ಧಮಕಿ ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಅವರ ಬಾಯಿ ಮುಚ್ಚಿಸೋ ಕೆಲಸ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆಯ ಕೇಸರೀಕರಣ ಅಂತ ಹೇಳುತ್ತಿದ್ದೀರಿ. ಅವರು ಎಂದಾದ್ರೂ ಕೇಸರಿ ಡ್ರೆಸ್ ಹಾಕೋದನ್ನು ನೋಡಿದ್ರಾ? ಪೊಲೀಸರ ಮೇಲೆ ಹಗೆತನ ತೋರುವುದು ಸರಿಯಲ್ಲ. ನೀವು ಜನರನ್ನು ವಂಚಿಸಿ, ತೇಜೋವಧೆ ಮಾಡಿ ಮತ ಪಡೆಯುವ ಕೆಲಸ ಮಾಡಿದ್ದೀರಿ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆಯಲ್ಲಿ 40% ಕಮಿಷನ್ ಪಡೆದಿದ್ದಾರೆ. ಅಂಥವರನ್ನೆಲ್ಲಾ ಜೈಲಿಗೆ ಕಳಿಸ್ತೀನಿ ಅಂತ ಎಂಬಿ ಪಾಟೀಲ್ ಹೇಳಿದ್ದಾರೆ. ಅವರೇನು ನೀರಾವರಿ ಮಂತ್ರಿನಾ? ಅದರ ಅರ್ಥ ಅವರಿಗೆ ನೀರಾವರಿ ಮಂತ್ರಿಗಿರಿ ಬೇಕು ಅಂತ ಅಲ್ಲವೇ? ಮತ್ತೊಬ್ಬ ಸಚಿವರು ಆರ್ಎಸ್ಎಸ್, ಜರಂಗದಳ ಬ್ಯಾನ್ ಮಾಡ್ತೀನಿ ಅಂತಾರೆ. ಅದರ ಅರ್ಥ ಹೋಮ್ ಮಿನಿಸ್ಟರ್ ಬೇಕು ಅಂತ ಅಷ್ಟೆ. ಖಾತೆಗಳ ಹಂಚಿಕೆ ಆಗಿಲ್ಲ, ಆದ್ರೆ ನಾನೇ ಅದರ ವಾರಸುದಾರ ಅಂತ ಹೇಳುತ್ತಿದ್ದಾರೆ. ನಿಮ್ಮ ಈ ಬೆದರಿಕೆಗೆ ಬಿಜೆಪಿ ಸೊಪ್ಪು ಹಾಕಲ್ಲ ಎಂದು ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ವಾಮ ಮಾರ್ಗವನ್ನು ಜನರಿಗೆ ತೋರಿಸಿದ್ದೀರಿ. ನೀವು ಯಾವ ಮಟ್ಟಕ್ಕೆ ಇಳಿದಿದ್ದೀರಿ ಅಂತ ಜನಕ್ಕೆ ತೋರಿಸಿದ್ದೀರಿ. ನೀವು ಮಾಡುವ ತಪ್ಪಿಗೆ ಲೈನ್ ಮ್ಯಾನ್, ಕಂಡಕ್ಟರ್ಗಳಿಗೆ ಸಮಸ್ಯೆ ಮಾಡಬೇಕಾ ಎಂದು ಅವರು ಕಾಂಗ್ರೆಸ್ನವರನ್ನು ಪ್ರಶ್ನಿಸಿದ್ದಾರೆ.
Congress trying to fix old cases on Ashwath Narayan and Harish Poonja, top Police officer's threatned by Congress leaders says chalavadi narayanaswamy.
11-02-25 12:37 pm
HK News Desk
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
Hubballi Dead Man Ambulance: ಆಸ್ಪತ್ರೆಯಲ್ಲಿ ಸತ...
10-02-25 07:01 pm
13th edition Kumbh Mela, Triveni Sangama, T N...
10-02-25 05:18 pm
10-02-25 05:48 pm
HK News Desk
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
10-02-25 11:09 pm
Mangalore Correspondent
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm