ಬ್ರೇಕಿಂಗ್ ನ್ಯೂಸ್
26-05-23 01:28 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 26 : ಚುನಾವಣೆಗೆ ಮುಂಚೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಸಹಿಯುಳ್ಳ ಗ್ಯಾರಂಟಿ ಕಾರ್ಡ್ಗಳನ್ನು ರಾಜ್ಯದ ಪ್ರತಿ ಮನೆಗೆ ವಿತರಿಸಿ, ಕಾಂಗ್ರೆಸ್ ಅಧಿಕಾರವಹಿಸಿಕೊಂಡ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಐದು ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಿಸಿದ್ದರು.ಈಗ ಅದನ್ನು ಪಾಲಿಸಲೇಬೇಕು ಎಂದು ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ. ಐದು ಉಚಿತ ಗ್ಯಾರಂಟಿಗಳನ್ನು ಕೊಡಮಾಡಲಿದೆ. ದಯವಿಟ್ಟು ಕಾಂಗ್ರೆಸ್ನವರು ಹೇಳಿದ್ದನ್ನು ಜನರು ಫಾಲೋ ಮಾಡಬೇಕು.ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೊದಲ ಸಚಿವ ಸಂಪುಟ ಸಭೆಯೂ ಆಗಿರುವ ಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸ್ವತಃ ಹೇಳಿದಂತೆಯೇ ಯಾರೊಬ್ಬರೂ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲಿ. ನಾನು ಕಟ್ಟಲ್ಲ, ನೀವೂ ಕಟ್ಟಬೇಡಿ ಎಂದು ಅವರಿಬ್ಬರು ಹೇಳಿದ್ದಾರೆ. ಹೀಗಾಗಿ ಕರೆಂಟ್ ಬಿಲ್ ಕಟ್ಟಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಅವಮಾನಿಸಬಾರದು ಎಂದು ರಾಜ್ಯದ ಜನರಿಗೆ ಆರ್.ಅಶೋಕ್ ಉಚಿತ ಸಲಹೆ ನೀಡಿದರು.
ಆರ್ಎಸ್ಎಸ್ ನಿಷೇಧವಲ್ಲ, ಸಂಘದ ಒಂದು ಶಾಖೆಯನ್ನು ಕಾಂಗ್ರೆಸ್ಗೆ ತಾಕತ್ತಿದ್ದರೆ ಮುಟ್ಟಲಿ ನೋಡೋಣ. ಹಿಂದುಗಳ ಧ್ವನಿಯಾಗಿರುವ ಆರ್ಎಸ್ಎಸ್, ಭಜರಂಗದಳ ತಂಟೆಗೆ ಹೋದರೆ ಮೂರು ತಿಂಗಳಲ್ಲಿ ಪತನವಾಗಲಿದೆ ಎಂದು ಆರ್.ಅಶೋಕ್ ಎಚ್ಚರಿಸಿದರು.
ಐದು ಗ್ಯಾರಂಟಿಗಳನ್ನು ಈಡೇರಿಸಲು ಜನರು ಪಟ್ಟು ಹಿಡಿದು ಒತ್ತಡ ಹೇರಲಾರಂಭಿಸಿದ್ದು, ವಿಷಯಾಂತರ ಮಾಡಲು ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಮುತ್ತಾತ, ಅಜ್ಜಿಗೂ ಆರ್ಎಸ್ಎಸ್ ತಂಟೆಗೆ ಹೋಗಲಾಗಿಲ್ಲ. ನಿಷೇಧದ ಬಗ್ಗೆ ಸದನದಲ್ಲಿ ಧಮ್ಮಿದ್ದರೆ ಬಿಲ್ ತರಲಿ ಎಂದು ಸೆಡ್ಡು ಹೊಡೆದರು.
ಸಿದ್ದರಾಮಯ್ಯ ಅವರು 13 ಬಾರಿ ಬಜೆಟ್ ಮಂಡಿಸಿದವರು. ಉಚಿತ ಗ್ಯಾರಂಟಿ ಹೇಗೆ ಜಾರಿ ಮಾಡಬೇಕು, ಅವರಿಗೆ ಎಲ್ಲ ಮಾಹಿತಿಯಿದೆ, ಹೇಳಿದಂತೆ ನಡೆಯುತ್ತಾರೆ. ಡಬಲ್ ಸ್ಟೇರಿಂಗ್ ಸರ್ಕಾರದಲ್ಲಿ ಮಂತ್ರಿ ಪದವಿ, ಮಂತ್ರಿಯಾದವರಿಗೆ ಖಾತೆ ಗ್ಯಾರಂಟಿಯೇ ಸಿಕ್ಕಿಲ್ಲ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.
Let Congress touch one office of the RSS if they have guts slams R. Ashok, says don't pay the electricity bill. Even am not going pay the bill he slammed.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm