ಬ್ರೇಕಿಂಗ್ ನ್ಯೂಸ್
26-05-23 04:46 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 26 : ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಹಣಬಲದಿಂದ ಸೋಲಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ದಿನ ಬೆಳಗಿನ ಜಾವ ಕಾಂಗ್ರೆಸ್ ಅಭ್ಯರ್ಥಿ ಗಿಫ್ಟ್ ಕೂಪನ್ ಹಂಚಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದು ಎರಡು ದಿನಗಳ ಬಳಿಕ ಇದು ನನಗೆ ಸಿಕ್ಕಿದೆ. ನಮ್ಮ ಕಡೆಯವರು ಬಂದು ಈ ರೀತಿ ಕೂಪನ್ ಹಂಚಿದ್ದು ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ರಾಮನಗರದಲ್ಲಿ ನಿಖಿಲ್ ಅವರನ್ನು ಸೋಲಿಸಿದ್ದಾರೆ ಅಂತಾರಲ್ಲ ಅವರನ್ನು ಸೋಲಿಸಿದ್ದು ಇದೇ ಎಂದು ಕೂಪನ್‌ಗಳನ್ನು ತೋರಿಸಿದರು.
ಇದೇ ಆ ಕೂಪನ್ ಗೆದ್ದಮೇಲೆ ಕೊಡ್ತೀವಿ ಎಂದು ಹೇಳಿದ್ದಾರೆ. ನ್ಯಾಯಯುತವಾಗಿ ಅವರು ನಮ್ಮನ್ನು ಸೋಲಿಸಿಲ್ಲ, 20-30 ಕೋಟಿ ರುಪಾಯಿ ಎಲ್ಲಿಂದ ತರ್ತೀರಾ ಇವರಿಗೆ ಕೊಡೋಕೆ, ಇದಕ್ಕೆಲ್ಲಾ ದುಡ್ಡು ಎಲ್ಲಿ ಬರುತ್ತೆ ಎಂದು ಕಿಡಿ ಕಾರಿದರು.

ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡ್ತಾರ, ಸರ್ಕಾರದ ಗ್ಯಾರಂಟಿ ಕಾರ್ಯಕ್ರಮ ಬಿಡಿ ಇದಕ್ಕೆ ದುಡ್ಡು ಎಲ್ಲಿ ಬರುತ್ತೆ. ಕಮಿಷನ್ ದುಡ್ಡು ಹೊಡೆದ್ರೆ ಅಲ್ವಾ ಶಾಸಕರಿಗೆ ಹಣ ಬರೋದು, ಯೋಜನೆಗಳ ಹೆಸರಿನಲ್ಲು ಹಣ ಲೂಟಿ ಮಾಡೋಕೆ ನೀವು ಆದೇಶ ಕೊಡಬೇಕಲ್ವಾ ಈಗ, 40 ಪರ್ಸೆಂಟ್ ಮಾಡ್ತೀರೊ 80 ಪರ್ಸೆಂಟ್ ಮಾಡ್ತಿರೊ? ನಿಮ್ಮ ರಾಜೀವ್ ಗಾಂಧಿಯವರೇ ಹೇಳಿದ್ರಲ್ಲಾ, ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೊಟ್ಟರೆ 85 ಪರ್ಸೆಂಟ್ ಹಣ ದುರ್ಬಳಕೆ ಆಗ್ತದೆ ಎಂದು ಹೇಳಿದ್ದರು. ಅದನ್ನು ನೀವು ಕಾರ್ಯರೂಪಕ್ಕೆ ತರ್ತೀರಾ ಸಿದ್ದರಾಮಯ್ಯನರವೇ ಎಂದು ಪ್ರಶ್ನೆ ಮಾಡಿದರು.
ನಮ್ಮ ಪಕ್ಷವನ್ನು ವಿಸರ್ಜನೆ ಮಾಡಬೇಕು, ಅಂತ್ಯ ಸಂಸ್ಕಾರ ಮಾಡಬೇಕು ಅಂತೀರಾ ನಿಮಗೆ ಕೇರ್ ಮಾಡ್ತೀನಾ? ದೇವೇಗೌಡರು ಇನ್ನೂ ಬದುಕಿದ್ದಾರೆ, ನನ್ನ ಕಾರ್ಯಕರ್ತರು ಇನ್ನೂ ಬದುಕಿದ್ದಾರೆ. ಇದಕ್ಕಿಂತ ಕೆಟ್ಟ ಅನುಭವ ನಮ್ಮ ರಾಜಕೀಯ ಜೀವನದಲ್ಲಾಗಿದೆ, ಅವತ್ತೂ ಹೆದರಿಲ್ಲ, ಇವತ್ತೂ ಹೆದರಲ್ಲಿ ಹೋರಾಟಕ್ಕೆ ತಯಾರಾಗಿದ್ದೇವೆ ಎಂದು ಹೇಳಿದರು.
ಪಾರ್ಲಿಮೆಂಟ್ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಇರಬೇಕೊ ಬೇಡವೋ ಎನ್ನುವ ನಿರ್ಧಾರ ನೀವು ಮಾಡಬೇಕಾಗುತ್ತದೆ ಎಚ್ಚರಿಕೆಯಿಂದ ಇರಿ ಎಂದು ಖಡಕ್ಕಾಗಿಯೇ ಹೇಳಿದರು.
ರಾಮನಗರದಲ್ಲಿ ಕೂಪನ್ ಹಂಚಿಕೆ ವಿಚಾರವನ್ನು ಇಲ್ಲಿಗೇ ಬಿಡಲ್ಲ ಕಾನೂನು ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯನವರು ಈಗ ಹಲವಾರು ತನಿಖೆಗೆ ಆದೇಶ ಮಾಡ್ತಿದ್ದಾರೆ, ಕೂಪನ್ ಹಂಚಿದ ಚುನಾವಣೆ ಕರ್ಮಕಾಂಡದ ಬಗ್ಗೆ ತನಿಖೆ ನಡೆಸ್ತೀರಾ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.
My son Nikil lost because of Congress Money Power, Congress Coupon power has brought them victory slams Kumaraswamy.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
24-09-26 11:10 am
HK News Staffer
bus fire, Greater Noida: ಚಲಿಸುತ್ತಿದ್ದ ಸ್ಲೀಪರ್...
24-09-26 10:09 am
ಶಿರ್ವದಲ್ಲಿ ಭಾರೀ ಪ್ರಮಾಣದ ಗಾಂಜಾ, ಡ್ರಗ್ಸ್ ವಶಕ್ಕೆ...
23-09-26 09:28 pm
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm