ಬ್ರೇಕಿಂಗ್ ನ್ಯೂಸ್
26-05-23 06:17 pm HK News Desk ಕರ್ನಾಟಕ
ಚಿಕ್ಕಮಗಳೂರು, ಮೇ 26 : ಮೂಡಿಗೆರೆ ತಾಲೂಕಿನ ಬಣಕಲ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ. ಮುಸ್ಲಿಂ ಯುವತಿಯ ಜೊತೆ ಸ್ನೇಹ ಬೆಳೆಸಿದ ಆರೋಪದಲ್ಲಿ ಬಿಜೆಪಿ, ಭಜರಂಗದಳದ ಕಾರ್ಯಕರ್ತ ಅಜಿತ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೋ ಮಾಹಿತಿ ಬಹಿರಂಗವಾಗಿದ್ದು, ಯುವತಿ ಮನೆಯಲ್ಲೇ ಅಜಿತ್ ಸಿಕ್ಕಿಬಿದ್ದಿದ್ದ. ಯುವತಿಯ ಮನೆಯ ಕಬೋರ್ಡ್ನಲ್ಲಿ ಅವಿತು ಕುಳಿತಿದ್ದ ಎಂಬ ವಿಚಾರ ಬಯಲಾಗಿದೆ.
ಅಜಿತ್ ಕಬೋರ್ಡ್ನಲ್ಲಿ ಅವಿತು ಕುಳಿತಿರುವುದು ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಯುವತಿಯ ಮನೆಯಲ್ಲಿ ಸಿಕ್ಕಿಬಿದ್ದ ಅಜಿತ್ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿತ್ತು. ಅನ್ಯಕೋಮಿನ ಯುವತಿಯೊಂದಿಗೆ ಸ್ನೇಹ ಮಾಡಿದ್ದಕ್ಕೆ ತನ್ನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಅಜಿತ್ ಆರೋಪಿಸಿದ್ದ.
ಈ ಮಧ್ಯೆ, ಬಿಜೆಪಿ ಕಾರ್ಯಕರ್ತ ಅಜಿತ್ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಅಜಿತ್ಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್ಗಿರಿಗೆ ಅವಕಾಶ ಇಲ್ಲ, ಹೀಗೆ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಇತ್ತೀಚೆಗೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು. ಬಳಿಕ ಅಧಿಕಾರಿಗಳು ಕೂಡ ನೈತಿಕ ಪೊಲೀಸ್ ಗಿರಿ ನಡೆಸುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇದಾದ ಬೆನ್ನಲ್ಲೆ ಚಿಕ್ಕಬಳ್ಳಾಪುರ ನಗರದ ಗೋಪಿಕಾ ಚಾಟ್ಸ್ ಬಳಿ ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಹೋಟೆಲ್ ಹೋಗಿದಕ್ಕೆ ಮುಸ್ಲಿಂ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ನಡೆಸಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ.
A group of 30 people attacked a Bajrang Dal activist for being friends with a Muslim young woman in Chikkamagaluru district on Friday, said police on Friday. The victim has been identified as Ajith. He was seriously injured in the incident and has been admitted to a hospital.The incident took place in the limits of Banakal police station limits in Mudigere taluk. The group attacked Ajith, when he was going with the young woman. He was dragged over the road and assaulted, police said.
02-12-25 06:29 pm
Bangalore Correspondent
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
Bangalore Suicide: ಎರಡು ವರ್ಷದ ಹಿಂದೆ ಗಂಡನ ಸಾವು...
01-12-25 08:18 pm
Honnavar, Mysuru Bus Accident, student death:...
01-12-25 03:03 pm
01-12-25 10:18 pm
HK News Desk
ಡಿಜಿಟಲ್ ಅರೆಸ್ಟ್ ಪ್ರಕರಣ ಹೆಚ್ಚಳ ; ಗಂಭೀರ ಪರಿಗಣಿಸ...
01-12-25 09:28 pm
ಇಡುಕ್ಕಿ ಸ್ಕೈ ಡೈನ್ ವೈಫಲ್ಯ ; 120 ಅಡಿ ಎತ್ತರದಲ್ಲಿ...
30-11-25 10:59 pm
Puttur Honey Gains National Attention, PM Mod...
30-11-25 03:53 pm
WhatsApp, Telegram, Snapchat, ShareChat, Cybe...
30-11-25 03:37 pm
01-12-25 09:25 pm
Mangalore Correspondent
ಕ್ರಿಸ್ಮಸ್ ವೇಳೆಗೆ ಮಂಗಳೂರು- ಮುಂಬೈ ನಡುವೆ ವಾರದ ಎಲ...
01-12-25 03:08 pm
Kapu Accident, Udupi, Five Killed: ಕಾಪು ಬಳಿ...
30-11-25 06:03 pm
DK Trasnsport Mangalore, Joel: ಡಿಕೆ ಟ್ರಾನ್ಸ್...
29-11-25 10:01 pm
Moodushedde, Mangalore, Daughter Assaults Mot...
29-11-25 04:26 pm
02-12-25 06:37 pm
Mangalore Correspondent
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm
ಗಿಫ್ಟ್ ಕೊಡಲಿಕ್ಕಿದೆಯೆಂದು ಸ್ವರ್ಣ ಜುವೆಲ್ಲರಿಯಿಂದ...
29-11-25 10:57 pm
Davanagere, Police Steal Gold: ದಾವಣಗೆರೆಯಲ್ಲಿ...
28-11-25 06:23 pm