ಸಿದ್ದರಾಮಯ್ಯ ಸಂಪುಟ ಭರ್ತಿ ; ಖಾತೆಗಳ ಮರು ಹಂಚಿಕೆ, ಪಟ್ಟು ಬಿಡದ ಡಿಕೆಶಿ, ಉಳಿಕೆ ಖಾತೆ ಮುಖ್ಯಮಂತ್ರಿ ಹೆಗಲಿಗೆ 

29-05-23 05:14 pm       Bangalore Correspondent   ಕರ್ನಾಟಕ

ಕಳೆದ ಎರಡು ದಿನಗಳಿಂದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಪಟ್ಟಿಯೊಂದು ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಕಾಂಗ್ರೆಸ್ ಇದು ನಕಲಿ ಎಂದು ಸ್ಪಷ್ಟಪಡಿಸಿತ್ತು. ಹಂಚಿಕೆ ಮಾಡಲಾಗಿದ್ದ ಖಾತೆಗಳ ಬಗ್ಗೆ ಸಚಿವರಿಗೆ ಅಸಮಾಧಾನ ಇದ್ದುದರಿಂದ ಮರು ಹಂಚಿಕೆ ಮಾಡಲಾಗಿದೆ.

ಬೆಂಗಳೂರು, ಮೇ 29 : ಕಳೆದ ಎರಡು ದಿನಗಳಿಂದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಪಟ್ಟಿಯೊಂದು ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಕಾಂಗ್ರೆಸ್ ಇದು ನಕಲಿ ಎಂದು ಸ್ಪಷ್ಟಪಡಿಸಿತ್ತು. ಹಂಚಿಕೆ ಮಾಡಲಾಗಿದ್ದ ಖಾತೆಗಳ ಬಗ್ಗೆ ಸಚಿವರಿಗೆ ಅಸಮಾಧಾನ ಇದ್ದುದರಿಂದ ಮರು ಹಂಚಿಕೆ ಮಾಡಲಾಗಿದೆ. 

ಇದೀಗ ಕರ್ನಾಟಕ ರಾಜ್ಯಪತ್ರದ ಮೂಲಕ ಅಧಿಕೃತವಾಗಿ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿರುವುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

  • 1. ಮುಖ್ಯಮಂತ್ರಿ ಸಿದ್ದರಾಮಯ್ಯ : ಹಣಕಾಸು, ಸಂಸದೀಯ ಕ್ಯಾಬಿನೆಟ್ ವ್ಯವಹಾರಗಳು, ಸಿಬ್ಬಂದಿ ಇಲಾಖೆ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಮಾಹಿತಿ, ಐಟಿ ಮತ್ತು ಬಿಟಿ 
  • 2. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್: ಜನಸಂಪನ್ಮೂಲ ಮತ್ತು ಬೆಂಗಳೂರು ನಗರ ಅಭಿವೃದ್ಧಿ
  • 3. ಡಾ.ಜಿ ಪರಮೇಶ್ವರ್: ಗೃಹ ಇಲಾಖೆ 
  • 4. ಎಚ್ ಕೆ ಪಾಟೀಲ್ : ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ
  • 5. ಕೆ.ಎಚ್ ಮುನಿಯಪ್ಪ : ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ
  • 6. ರಾಮಲಿಂಗಾರೆಡ್ಡಿ : ಸಾರಿಗೆ ಮತ್ತು ಮುಜರಾಯಿ
  • 7. ಎಂ.ಬಿ. ಪಾಟೀಲ್ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ
  • 8. ಕೆ ಜೆ ಜಾರ್ಜ್ : ಇಂಧನ
  • 9. ದಿನೇಶ್ ಗುಂಡೂರಾವ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • 10. ಡಾ.ಎಚ್ ಸಿ ಮಹದೇವಪ್ಪ : ಸಮಾಜ ಕಲ್ಯಾಣ
  • 11. ಸತೀಶ್ ಜಾರಕಿಹೊಳಿ: ಲೋಕೋಪಯೋಗಿ
  • 12. ಕೃಷ್ಣ ಭೈರೇಗೌಡ: ಕಂದಾಯ 
  • 13. ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
  • 14. ಶಿವಾನಂದ ಪಾಟೀಲ: ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ
  • 15. ಜಮೀರ್ ಅಹ್ಮದ್ ಖಾನ್: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ
  • 16. ಶರಣಬಸಪ್ಪ ದರ್ಶನಾಪುರ: ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ಯಮಗಳು
  • 17. ಈಶ್ವರ ಖಂಡ್ರೆ: ಅರಣ್ಯ, ಜೈವಿಕ ಮತ್ತು ಪರಿಸರ
  • 18. ಎನ್. ಚಲುವರಾಯಸ್ವಾಮಿ: ಕೃಷಿ
  • 19. ಎಸ್.ಎಸ್ ಮಲ್ಲಿಕಾರ್ಜುನ : ಗಣಿ ಮತ್ತು ಭೂಮಿ ವಿಜ್ಞಾನ, ತೋಟಗಾರಿಕೆ
  • 20. ರಹೀಮ್ ಖಾನ್: ಪೌರಾಡಳಿತ, ಹಜ್,
  • 21. ಸಂತೋಷ್ ಎನ್. ಲಾಡ್: ಕಾರ್ಮಿಕ
  • 22. ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್: ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ
  • 23. ತಿಮ್ಮಾಪುರ ರಾಮಪ್ಪ ಬಾಳಪ್ಪ: ಅಬಕಾರಿ 
  • 24. ಕೆ. ವೆಂಕಟೇಶ್: ಪಶು ಸಂಗೋಪನೆ ಮತ್ತು ರೇಷ್ಮೆ
  • 25. ತಂಗಡಗಿ ಶಿವರಾಜ್ ಸಂಗಪ್ಪ: ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ
  • 26. ಡಿ ಸುಧಾಕರ್: ಯೋಜನೆ ಮತ್ತು ಅಂಕಿ ಅಂಶಗಳು
  • 27. ಬಿ ನಾಗೇಂದ್ರ: ಯುವಜನ ಸೇವೆಗಳ, ಕ್ರೀಡೆ ಮತ್ತು ಎಸ್‌ಟಿ ಕಲ್ಯಾಣ
  • 28. ಕ್ಯಾತಸಂದ್ರ ಎನ್ ರಾಜಣ್ಣ: ಸಹಕಾರ ಮಾರುಕಟ್ಟೆ (ಕೃಷಿ ಹೊರತುಪಡಿಸಿ)
  • 29. ಸುರೇಶ್ ಬಿ ಎಸ್: ನಗರಾಭಿವೃದ್ದಿ ಮತ್ತು ಪಟ್ಟಣ ಯೋಜನೆ 
  • 30. ಲಕ್ಷ್ಮಿ ಆರ್ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ
  • 31. ಮಂಕಾಳ್ ವೈದ್ಯ: ಮೀನುಗಾರಿ, ಬಂದರು ಮತ್ತು ಒಳನಾಡು ಸಾರಿಗೆ
  • 32. ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • 33. ಡಾ. ಎಂ.ಸಿ ಸುಧಾಕರ್: ಉನ್ನತ ಶಿಕ್ಷಣ
  • 34. ಎನ್. ಎಸ್ ಬೋಸರಾಜು: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ

 

A notification dated May 28 on behalf of the Governor of Karnataka, Thaawarchand Gehlot, announced the portfolios allocated to all 34 ministers in the newly formed state Cabinet. Chief Minister Siddaramaiah has kept the Finance minister portfolio for himself, while his deputy DK Shivakumar will preside over Irrigation and Bengaluru City Development departments.