ಬ್ರೇಕಿಂಗ್ ನ್ಯೂಸ್
29-05-23 08:11 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 29 : ಬಹುಭಾಷಾ ನಟ, ಕಾಂತಾರ ಖ್ಯಾತಿಯ ಕಿಶೋರ್ ತಮ್ಮ ನೇರ ನಡೆ ನುಡಿಯಿಂದ ಕೆಲವೊಮ್ಮೆ ಚರ್ಚೆಗೆ ಗ್ರಾಸವಾಗುತ್ತಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ, ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ಕರ್ನಾಟಕದ ಹಿಜಾಬ್ ವಿವಾದ ಕುರಿತಾಗಿ ನಟ ಕಿಶೋರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ತೀಕ್ಷ್ಣ ನುಡಿಗಳಿಂದಾಗಿ ಪರ- ವಿರೋಧ ಚರ್ಚೆ ಎಬ್ಬಿಸಿದ್ದಾರೆ.
"ಹಿಜಾಬು ಮತ್ತು ಕುಸ್ತಿ ಅಖಾಡದಲ್ಲಿ ಮನುವಾದಿ ಮಸಲತ್ತು ಭಯದ ಮತ್ತು ಬಹುಸಂಖ್ಯಾವಾದಿ ರಾಜಕಾರಣ" ಎಂದು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಕಿಶೋರ್ ಪೋಸ್ಟ್ ಮಾಡಿದ್ದಾರೆ. "ಯಾವ ಮುಸಲ್ಮಾನ ಮಹಿಳೆ, ಪುರುಷ ಪ್ರಾಬಲ್ಯದ ಸಂಕೇತವಾದ ಹಿಜಾಬನ್ನು ವಿರೋಧಿಸಿಯೂ ವಿರೋಧಿಸದಂತೆ ಮೆಲ್ಲ ಮೆಲ್ಲನೆ ಅದರಿಂದ ಸ್ವತಂತ್ರಳಾಗಿ ಶಿಕ್ಷಿತಳೂ ಸಶಕ್ತಳೂ ಆಗುತ್ತಿದ್ದಳೋ ಅವಳನ್ನು ಅಡ್ಡಗಟ್ಟಿ ಅವಳಲ್ಲಿ ಭಯ ಹುಟ್ಟಿಸಿ, ಆಕೆ ತನ್ನ ಆತ್ಮರಕ್ಷಣೆಗಾಗಿ ತನ್ನ ಅಸ್ಮಿತೆಯ ಹುಡುಕಾಟದಲ್ಲಿ ತನ್ನನ್ನು ಬಂಧನದಲ್ಲಿಟ್ಟಿದ್ದ ಅದೇ ಹಿಜಾಬಿನ ಮೊರೆ ಹೋಗುವ ಹಾಗೆ ಮಾಡಿದ ಮನುವಾದಿಗಳ ಹಿಜಾಬು ಬ್ಯಾನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿತ್ತು.
ಒಂದು ಹೆಣ್ಣು ಶಿಕ್ಷಣ ಪಡೆದರೆ ಅವಳ ಮುಂದಿನ ಇಡೀ ಪೀಳಿಗೆ ಶಿಕ್ಷಣ ಪಡೆಯುತ್ತದೆ. ಸರಕಾರಿ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಇಂದೂ ಸಹ ನೂರರಲ್ಲಿ ಹದಿನಾಲ್ಕು ಮುಸ್ಲಿಂ ಹೆಣ್ಣು ಮಕ್ಕಳು ಮಾತ್ರ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗಿದೆ, ಇಂಥಾ ಕಾಲದಲ್ಲಿ ಅದನ್ನೂ ತಡೆದು ಬಿಟ್ಟರೆ.. ಮುಸಲ್ಮಾನರನ್ನು ಮುಖ್ಯ ವಾಹಿನಿಯಿಂದ ಹೊರಗಿಡುವ ಷಡ್ಯಂತ್ರ ಯಶಸ್ವಿಯಾದಂತೆಯೇ ಸರಿ.
ತನ್ನ ಮನೆ, ಸಂಬಂಧಿಕರು, ಮತ, ಸಂಪ್ರದಾಯವಾದ ಎಲ್ಲವನ್ನೂ ದಾಟಿ ಬಂದು ಕೊನೆಯ ಹಂತದಲ್ಲಿ ಶಿಕ್ಷಣ ವಂಚಿತಳಾಗುವುದಕ್ಕೆ ಕಾರಣ ಕೂಡ ಸ್ವಯಂ ಅವಳೇ ಆಗಿಬಿಟ್ಟರೆ ?? ದೇಶದ ಮುಖ್ಯವಾಹಿನಿಯಿಂದ ಮುಸ್ಲಿಂ ಮಹಿಳೆ ಮತ್ತು ಜನಾಂಗ ಎರಡೂ ಹೊರಗೆ... ಅದೂ ತನ್ನ ಕಾಲ ಮೇಲೆ ತಾನೇ ಕೊಡಲಿ ಹಾಕಿಕೊಂಡು.. ಇದಲ್ಲವೇ ಮಾಸ್ಟರ್ ಸ್ಟ್ರೋಕ್.
ಜಂತರ್ ಮಂತರ್ ನಲ್ಲಿ ಲೈಂಗಿಕ ದೌರ್ಜನದ ವಿರುದ್ಧ ಧರಣಿ ಕುಳಿತ ಹೆಣ್ಣುಮಕ್ಕಳು, ಅತ್ಯಾಚಾರಿಯ ಹೂಂಕಾರ, ಆಗಾಗ ಆ ಹೆಣ್ಣುಮಕ್ಕಳ ಮೇಲೇ ತನ್ನ ಶಕ್ತಿ ತೋರಿಸುವ ನರಸತ್ತ ಪೊಲೀಸ್, ಕಮಕ್ ಕಿಮಕ್ ಅನ್ನದೇ ಅತ್ಯಾಚಾರಿಗೆ ಪರೋಕ್ಷ ಬೆಂಬಲ ಕೊಟ್ಟು ಕುಳಿತ ಏಕವ್ಯಕ್ತಿ ಸರ್ಕಾರವಾದ ಪ್ರಧಾನಿ... ಆಗ ಹೊರಟದ್ದು .... ವಿಶ್ವಮಟ್ಟದ ತಾರೆಯರಿಗೇ ಹೀಗಾದರೆ ನಮ್ಮಂಥ ಸಾಮಾನ್ಯರಿಗಾದರೆ ಹೇಗೆ ಎಂಬ ಜನಸಾಮಾನ್ಯರ ಉದ್ಗಾರ.
ಇಷ್ಟು ಸಾಲದೇ, ಶತಮಾನಗಳು ಹೋರಾಡಿ ವಿಶ್ವದ ಉತ್ತುಂಗಕ್ಕೇರಿದ ಹೆಣ್ಣು ಮಕ್ಕಳನ್ನು, ಅವರ ಬೆಂಗಾವಲಾಗಿ ನಿಂತ ದೇಶದ ತಾಯಿ ತಂದೆಯರೇ ಮತ್ತೆ ಮನುವಿನ ಕಲ್ಪನೆಯ ನಾಲ್ಕು ಗೋಡೆಗಳ ಕೂಪಕ್ಕೆ ತಳ್ಳಲು. ಭಾರತಾಂಬೆ ಅಂದು ಹಿಜಾಬಿನಲ್ಲಿ, ಇಂದು ಜಂತರ್ ಮಂತರ್ ಅಖಾಡದಲ್ಲಿ ಮನುವಾದಿಗಳಿಗೆ ಸವಾಲೆಸೆಯುತ್ತಲೇ ಬಂದಿದ್ದಾಳೆ. ಜೈ ಭಾರತಾಂಬೆ" ಎಂದು ಕಿಶೋರ್ ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ.
Multi-lingual actor Kishore , like many actors of the genre, is not politically correct, but shares his opinion clearly and bluntly on issues that he is not familiar with. Actor Kishore, who is a clear opponent of those who use religion for politics , has been criticizing the actions of BJP, RSS and some pro Hindu organizations (Pro Hindu Activists). Now he has shared his opinion in detail about the protests and riots in the state regarding Hijab.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm