ಚಿಕ್ಕಮಗಳೂರು ; ತಾನೇ ಸೆರೆಹಿಡಿದ ನಾಗರನ ಕಡಿತಕ್ಕೊಳಗಾಗಿ ಸ್ನೇಕ್ ನರೇಶ್ ಸಾವು ! 

30-05-23 06:06 pm       HK News Desk   ಕರ್ನಾಟಕ

ಚಿಕ್ಕಮಗಳೂರಿನಲ್ಲಿ ನಾಗರ ಹಾವಿನ ಕಡಿತಕ್ಕೊಳಗಾದ ಉರಗತಜ್ಞ ಸ್ನೇಕ್ ನರೇಶ್ (51) ದುರಂತ ಸಾವು ಕಂಡಿದ್ದಾರೆ. 

ಚಿಕ್ಕಮಗಳೂರು, ಮೇ 30 : ಚಿಕ್ಕಮಗಳೂರಿನಲ್ಲಿ ನಾಗರ ಹಾವಿನ ಕಡಿತಕ್ಕೊಳಗಾದ ಉರಗತಜ್ಞ ಸ್ನೇಕ್ ನರೇಶ್ (51) ದುರಂತ ಸಾವು ಕಂಡಿದ್ದಾರೆ. 

ಸಾವಿರಾರು ಹಾವುಗಳನ್ನು ಸೆರೆಹಿಡಿದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ನೇಕ್ ನರೇಶ್ ಎಂದೇ ಖ್ಯಾತಿ ಹೊಂದಿದ್ದ ನರೇಶ್ ಇಂದು ಮಧ್ಯಾಹ್ನ ಹಾವನ್ನು ಹಿಡಿದು ಕೊಂಡೊಯ್ಯುವ ಯತ್ನದಲ್ಲಿ ಕಡಿತಕ್ಕೊಳಗಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿದ್ದು ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಒಂದು ನಾಗರ ಹಾವನ್ನು ಹಿಡಿದು ಸ್ಕೂಟರ್ ಡಿಕ್ಕಿಯಲ್ಲಿ ಹಾಕ್ಕೊಂಡು ಬಂದಿದ್ದರು. ಮತ್ತೊಂದು ಹಾವು ಹಿಡಿದು ಹಾವಿನ ಚೀಲ ತೆರೆಯಲು ಡಿಕ್ಕಿ ಓಪನ್ ಮಾಡಿದ್ದರು.‌ ಅಷ್ಟರಲ್ಲೇ ಹಾವು ಕಡಿದಿದ್ದು ವಿಷ ದೇಹಕ್ಕೆ ಆವರಿಸಿತ್ತು. 

ಹಾವು ಹಿಡಿಯುವುದರಲ್ಲಿ ಖ್ಯಾತಿ ಹೊಂದಿದ್ದ ಸ್ನೇಕ್ ನರೇಶ್, 2013ರಲ್ಲಿ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.‌ ಶಾಲಾ ಮಕ್ಕಳಿಗೆ ಹಾವುಗಳ ಬಗ್ಗೆ  ಜಾಗೃತಿ ಮೂಡಿಸುತ್ತಿದ್ದರು. ವಿಷ ರಹಿತ ಹಾವುಗಳ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬುತ್ತಿದ್ದರು. ಇಂದು ಮಧ್ಯಾಹ್ನ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಹಾವು ಹಿಡಿಯಲು ಹೋದ ಸಂದರ್ಭದಲ್ಲಿ ದುರಂತ ಸಾವು ಕಂಡಿದ್ದಾರೆ.

Chikkamagaluru Snake Suresh dies after deadly cobra attack. The Snake which he himself rescued has caused his death.