ಬ್ರೇಕಿಂಗ್ ನ್ಯೂಸ್
31-05-23 11:56 am Bangalore Correspondent ಕರ್ನಾಟಕ
ಬೆಂಗಳೂರು, ಮೇ 31: ಬೆಂಗಳೂರು ನಗರಕ್ಕೆ ನೂತನ ಕಮಿಷನರ್ ಆಗಿ ಬಿ ದಯಾನಂದ್ ನೇಮಕವಾಗಿದ್ದು ಇಂದು ಬೆಳಗ್ಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿ.ದಯಾನಂದ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವರಾಗಿದ್ದು ಈ ಹಿಂದೆ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದಾರೆ.
ಇವರು 1994ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು ಹಲವು ಉನ್ನತ ಹುದ್ದೆಗಳನ್ನ ನಿರ್ವಹಿಸಿರುವ ಹಿರಿಯ ಅಧಿಕಾರಿಯಾಗಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತರಾಗಿ, ಬೆಂಗಳೂರಿನಲ್ಲಿ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ, ಸಂಚಾರ ವಿಭಾಗದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇವರಿಗಿದ್ದು ಪ್ರಸ್ತುತ ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿಯಾಗಿದ್ದರು. ಸದ್ಯ ನಗರದ ನೂತನ ಪೊಲೀಸ್ ಆಯುಕ್ತರನ್ನಾಗಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ನೂತನ ಪೊಲೀಸ್ ಕಮಿಷನರ್ ದಯಾನಂದ್ ಅಧಿಕಾರ ವಹಿಸಿಕೊಂಡ ತಕ್ಷಣವೇ ಹೇಳಿಕೆ ನೀಡಿದ್ದು “ಈಗ ತೆರೆ ಮುಂದೆ ಬಂದು ಮಾತನಾಡುವ ಅವಕಾಶ ಸಿಕ್ಕಿದೆ. ಬೆಂಗಳೂರು ಒಂದು ಗ್ಲೋಬ್ಲಲ್ ಡೆಸ್ಟಿನೇಷನ್. ಈ ಒಂದು ನಗರದಲ್ಲಿ ಕೆಲಸ ಮಾಡುವುದಾಗಿ ಪೊಲೀಸ್ ಮುಖ್ಯಸ್ಥನಾಗಿ ಅವಕಾಶ ಸಿಕ್ಕಿದೆ. ನನಗೆ ಈ ಅವಕಾಶ ಕೊಟ್ಟಿದ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳಿಗೆ ಧನ್ಯವಾದ ಹೇಳ್ತೀನಿ.
ನದರದಲ್ಲಿ ಪ್ರಜ್ಞಾವಂತ ನಾಗರಿಕರು ಪೊಲೀಸರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ನಂಬಿಕೆ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ. ಬೆಂಗಳೂರು ನಗರ ನಾನು ಹುಟ್ಟಿ ಬೆಳೆದ ಸ್ಥಳ. ನಾನು ಬೆಂಗಳೂರಿನವನು ಎಂದು ಹೇಳ್ತೀನಿ. ಇಲ್ಲಿ ಬಹಳಷ್ಟು ಚಾಲೆಂಜ್ ಇದೆ. ಅದೆಲ್ಲವನ್ನು ಎದುರಿಸಿಲು ನಮ್ಮ ಸಿಬ್ಬಂದಿಗಳ ಜೊತೆ ಸೇರಿ ಕೆಲಸ ಮಾಡ್ತೀನಿ. ಬದಲಾವಣೆ ಪ್ರಕೃತಿಯ ನಿಯಮ. ಭದ್ರ ಬುನಾದಿಮೇಲೆ ನಮ್ಮ ಇಲಾಖೆ ಇದೆ. ಇಷ್ಟು ದಿನಗಳು ಇದ್ದಂತಹ ಅಧಿಕಾರಿಗಳು ಜನರಿಗಾಗಿ ಕೆಲಸ ಮಾಡಿದ್ದಾರೆ ನಾವು ಸಹ ಜನರಿಗಾಗಿ ಕೆಲಸ ಮಾಡ್ತೀವಿ.” ಎಂದು ಹೇಳಿದ್ದಾರೆ.
ದಯಾನಂದ್, ಐಪಿಎಸ್ ಪ್ರೊಫೈಲ್ ;
1994ನೇ ಐಪಿಎಸ್ ಬ್ಯಾಚ್ ನಲ್ಲಿ ಪಾಸ್ ಆಗಿದ್ದ ಬಿ ದಯಾನಂದ್, 1998ರಲ್ಲಿ ಪುತ್ತೂರು ಸಬ್ ಡಿವಿಸನ್ ಎ ಎಸ್ ಪಿಯಾಗಿ ಕರ್ತವ್ಯ ಆರಂಭ ಮಾಡಿದ್ದರು. 1990ರಿಂದ 2008ರವರೆಗೂ ಬಿಜಾಪುರ, ಬೆಳಗಾಂ, ಚಿತ್ರದುರ್ಗ, ದಕ್ಷಿಣ ಕನ್ನಡ, ಕೋಲಾರ, ಈ ಐದು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. 2008ರಲ್ಲಿ ಡಿಐಜಿಯಾಗಿ ಪ್ರಮೋಷನ್ ಲಭಿಸಿತ್ತು.
ಬೆಂಗಳೂರು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದ ಇವರು ನಂತರ ಸಿಐಡಿ ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 2013-15ರವರೆಗೆ ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತರಾಗಿದ್ದ ಇವರು 2015-16 ಮೈಸೂರು ಕಮಿಷನರ್ ಆಗಿ ನೇಮಕಗೊಂಡಿದ್ದರು. 2016-17ರವರೆಗೆ ರಾಜ್ಯ ಗುಪ್ತಚರ ಇಲಾಖೆ ಐಜಿಯಾಗಿ ಕೆಲಸ ನಿರ್ವಹಣೆ ಮಾಡಿದ್ದು 2017-18ರವರೆಗೆ ಸಾರಿಗೆ ಆಯುಕ್ತರಾಗಿ (ರಸ್ತೆ ಸುರಕ್ಷಿತ) ಕೆಲಸ ಮಾಡಿದ್ದರು. ನಂತರ 2018-19ರವರೆಗೆ ಕೇಂದ್ರ ವಲಯದ ಐಜಿಪಿಯಾಗಿದ್ದು 2019-20ರವರೆಗೆ ಸಿಐಡಿ ಆರ್ಥಿಕ ವಿಭಾಗದ ಎಡಿಜಿಪಿಯಾಗಿ ಪ್ರಮೋಷನ್ ಲಭಿಸಿತ್ತು. 2020ರಿಂದ ಇಂದಿನವರೆಗೂ ಗುಪ್ತಚರ ಇಲಾಖೆಯ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದ ಇವರನ್ನು ಇದೀಗ ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
Ips Dayanand B takes charge as Bangalore City Police Commissioner. Dayanand is a 1994 batch ips officer who hails from Haveri, Karnataka. Speaking to media Persons, Bangalore is a Global city, filled with various challenges but we will face them with the help of our colleagues he added.
01-02-25 05:12 pm
HK News Desk
ಕಾಂಗ್ರೆಸ್ ನಿಂದ ಬಿಜೆಪಿ ಹೋದವರಿಗೆ ಅಲ್ಲಿ ಯಾವ ಸ್ಥಾ...
31-01-25 10:10 pm
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
SC directive for patients, Karnataka Health D...
31-01-25 06:07 pm
Cheque bounce, Snehamahi Krishna: ಮುಡಾ ಹಗರಣ ಹ...
31-01-25 02:02 pm
01-02-25 09:51 pm
HK News Desk
ಎರ್ನಾಕುಲಂ ಜಿಲ್ಲೆಯಲ್ಲಿ ಒಂದೇ ದಿನ 27 ಬಾಂಗ್ಲಾ ದೇಶ...
01-02-25 09:35 pm
2025ರ ಕೇಂದ್ರ ಬಜೆಟ್ ಗುಂಡಿನ ಗಾಯಕ್ಕೆ ಹಾಕಿದ ಬ್ಯಾಂ...
01-02-25 05:51 pm
ಕೇಂದ್ರ ಬಜೆಟ್ ಮಂಡನೆ ; ಕೃಷಿಕರು, ಮಧ್ಯಮ ವರ್ಗಕ್ಕೆ...
01-02-25 02:10 pm
Sonia Gandhi, president Murmu: ರಾಷ್ಟ್ರಪತಿ ಬಗ್...
31-01-25 09:10 pm
01-02-25 07:47 pm
Mangalore Correspondent
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
Mangalore builder Jitendra Kottary, prasanna...
31-01-25 11:05 pm
Mangalore Prasad attavar, RTI Snehamayi Krish...
31-01-25 10:49 pm
Ullal Panchyath, Mangalore; ಉಳ್ಳಾಲ ನಗರಸಭೆ ಸೀಲ...
31-01-25 09:49 pm
01-02-25 10:11 pm
Mangalore Correspondent
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm
Mangalore News, Crime, Court: 14 ವರ್ಷದ ಬಾಲಕಿಯ...
28-01-25 05:17 pm