ಬ್ರೇಕಿಂಗ್ ನ್ಯೂಸ್
31-05-23 10:03 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 31: ಎನ್ಐಎ ಅಧಿಕಾರಿಗಳು ಬುಧವಾರ ಏಕಕಾಲದಲ್ಲಿ ಕೇರಳ, ಕರ್ನಾಟಕ ಮತ್ತು ಬಿಹಾರದಲ್ಲಿ 25ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ಬಿಹಾರ ರಾಜಧಾನಿ ಪಾಟ್ನಾದ ಫುಲ್ವಾರಿಷರೀಫ್ ಎಂಬಲ್ಲಿ ಕಳೆದ ವರ್ಷ ಮೋದಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಂಚು ನಡೆಸಿದ ಪ್ರಕರಣದ ಬೆನ್ನುಹತ್ತಿದ ಅಧಿಕಾರಿಗಳಿಗೆ ಪಿಎಫ್ಐ ಕುರಿತು ಶಾಕಿಂಗ್ ಮಾಹಿತಿಗಳು ತಿಳಿದುಬಂದಿದ್ದವು. ಅದೇ ಪ್ರಕರಣದ ಜಾಡು ಹಿಡಿದು ಇದೀಗ ದಕ್ಷಿಣ ಕನ್ನಡ, ಶಿವಮೊಗ್ಗ, ಬಿಹಾರದ ಕತಿಹಾರ್, ಕೇರಳದ ಕಾಸರಗೋಡು, ಕೋಜಿಕ್ಕೋಡ್, ಮಲಪ್ಪುರಂ, ತಿರುವನಂತಪುರ ಜಿಲ್ಲೆಗಳಲ್ಲಿ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಶಂಕಿತರಿಂದ ಡಿಜಿಟಲ್ ಸಾಕ್ಷ್ಯಗಳು, ಮೊಬೈಲ್ ಫೋನ್ ಗಳು, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಸಿಮ್ ಕಾರ್ಡ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ಸಂದರ್ಭದಲ್ಲಿ 17.50 ಲಕ್ಷ ರೂಪಾಯಿ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಫುಲ್ವಾರಿಷರೀಫ್ ಪ್ರಕರಣ ಸಂಬಂಧಿಸಿ ಈವರೆಗೆ ದೇಶದ 85 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್ಐಎ ದೆಹಲಿ ವಿಭಾಗದಿಂದ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ 2022ರ ಜುಲೈ 11ರಂದು ಬಾಡಿಗೆ ಕೊಠಡಿಯಲ್ಲಿ ಉಳಿದುಕೊಂಡಿದ್ದ ಅತ್ತಾರ್ ಪರ್ವೇಜ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ದಾಳಿ ಸಂದರ್ಭದಲ್ಲಿ ಪಿಎಫ್ಐ ಸಂಘಟನೆಗೆ ಸಂಬಂಧಿಸಿದ ಪುಸ್ತಕ, ಕರಪತ್ರಗಳು ಸಿಕ್ಕಿದ್ದವು. 2047ರಲ್ಲಿ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸುವ ಗುರಿಯನ್ನು ಸಂಘಟನೆಗೆ ನೀಡಲಾಗಿದ್ದ ಪುಸ್ತಕವನ್ನೂ ವಶಕ್ಕೆ ಪಡೆಯಲಾಗಿತ್ತು. ಆಂತರಿಕ ಮಾಹಿತಿ, ಹೊರಗಡೆ ಪ್ರಸಾರಕ್ಕೆ ಅಲ್ಲ ಎಂದು ಅದರಲ್ಲಿ ಬರೆಯಲಾಗಿತ್ತು. ಪಾಟ್ನಾಕ್ಕೆ ಮೋದಿ ಭೇಟಿ ನೀಡುವ ಸಂದರ್ಭದಲ್ಲಿ ಗಲಭೆ ಎಬ್ಬಿಸಲು ಅತ್ತಾರ್ ಪರ್ವೇಜ್ ಮತ್ತು ಇನ್ನಿತರರು ಸಂಚು ನಡೆಸುತ್ತಿದ್ದುದು ತನಿಖೆಯಲ್ಲಿ ಪತ್ತೆಯಾಗಿತ್ತು.
ಅತ್ತಾರ್ ಪರ್ವೇಜ್ ಜೊತೆಗೆ ಮಹಮ್ಮದ್ ಜಲಾಲುದ್ದೀನ್ ಖಾನ್, ಅರ್ಮಾನ್ ಮಲಿಕ್ ಅಲಿಯಾಸ್ ಇಂತಿಯಾಜ್ ಅನ್ವರ್, ನೂರುದ್ದೀನ್ ಜಂಗಿ ಅಲಿಯಾಸ್ ಅಡ್ವಕೇಟ್ ನೂರುದ್ದೀನ್ ಎಂಬವರನ್ನು ಅಧಿಕಾರಿಗಳು ಬಂಧಿಸಿದ್ದರು. ಇವರ ಬಗ್ಗೆ 2023ರ ಜನವರಿ 7ರಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಆನಂತರ ದೇಶ ವಿರೋಧಿ ಕೃತ್ಯ ಮತ್ತು ವಿದೇಶಗಳಿಂದ ಅಕ್ರಮವಾಗಿ ಹಣ ಸಂಗ್ರಹಿಸಿ ಬೇನಾಮಿ ಖಾತೆಗಳಿಗೆ ರವಾನೆ ಮಾಡುತ್ತಿದ್ದ ಆರೋಪದಲ್ಲಿ ಹತ್ತು ಮಂದಿಯನ್ನು ಬಂಧಿಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಇವರು ವಿವಿಧ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಭಯೋತ್ಪಾದಕ ಕೃತ್ಯ ನಡೆಸುವುದು, ಗಲಭೆ ನಡೆಸಲು ಯುವಕರನ್ನು ಪ್ರೇರಣೆ ನೀಡಲು ವಿಡಿಯೋಗಳನ್ನು ಪ್ರಸಾರ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಕೃತ್ಯದಲ್ಲಿ ತೊಡಗಿಕೊಂಡವರು ಅಂತಾರಾಷ್ಟ್ರೀಯ ಲಿಂಕ್ ಹೊಂದಿರುವುದು ಮತ್ತು ಪಿಎಫ್ಐ ಸಿದ್ಧಾಂತವನ್ನು ಹರಡುವ ಗುರಿಯನ್ನು ಹೊಂದಿದ್ದರು.
ಅದೇ ಪ್ರಕರಣ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದು, ಭಯೋತ್ಪಾದಕ ಕೃತ್ಯಗಳಿಗೆ ಪ್ರೇರಣೆ ನೀಡುವುದು, ಬೇನಾಮಿ ಖಾತೆಗಳಿಗೆ ಫಂಡಿಂಗ್ ಮಾಡುವ ಕೃತ್ಯದಲ್ಲಿ ತೊಡಗಿಕೊಂಡಿದ್ದ ಶಂಕಿತರನ್ನು ಗುರುತಿಸಿ ದಾಳಿ ನಡೆಸಿದ್ದಾರೆ. ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ 15ಕ್ಕೂ ಹೆಚ್ಚು ಕಡೆ ದಾಳಿ ನಡೆದಿತ್ತು ಎನ್ನಲಾಗಿತ್ತು. ಶಿವಮೊಗ್ಗದಲ್ಲಿ ಎಲ್ಲಿ ದಾಳಿಯಾಗಿದೆ ಎನ್ನುವುದನ್ನು ದೃಢಪಡಿಸಿಲ್ಲ. ಕೇರಳದ ಹಲವು ಕಡೆಗಳಲ್ಲಿ ದಾಳಿ ನಡೆದಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯಾವುದೇ ಆರೋಪಿಗಳ ಬಂಧನದ ಬಗ್ಗೆ ಅಧಿಕಾರಿಗಳ ತಂಡ ಖಚಿತ ಪಡಿಸಿಲ್ಲ.
Hawala racket, NIA raids 25 locationa including Kerala, Bihar and Karnataka, 17.50 lakhs cash seized of PFI network. Searches were conducted at the premises of suspects in Katihar district of Bihar; Dakshina Kannada, and Shimoga districts of Karnataka; and Kasaragod, Malappuram, Kozhikode & Thiruvananthapuram districts of Kerala. A slew of digital devices, including mobile phones, hard disk, SIM cards, pen-drives, data cards, etc, incriminating documents and materials related to the banned organisation were seized during the raids. Indian currency of the face value of Rs. 17,50,100/- has also been seized.
11-02-25 03:40 pm
HK News Desk
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
Mysuru stone pelting, Rahul Gandhi: ದೆಹಲಿ ಫಲಿ...
11-02-25 12:37 pm
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 04:50 pm
Mangalore Correspondent
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm