ಬ್ರೇಕಿಂಗ್ ನ್ಯೂಸ್
02-06-23 04:56 pm HK News Desk ಕರ್ನಾಟಕ
ಬೆಂಗಳೂರು, ಜೂನ್ 2: ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿನ ತಿಂಗಳಿನಿಂದಲೇ ಜಾರಿ ಮಾಡುವುದಾಗಿ ಘೋಷಣೆ ಮಾಡಿದೆ. ಶುಕ್ರವಾರ ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪ್ರಮುಖ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದರು.
ಗೃಹ ಜ್ಯೋತಿ ಯೋಜನೆ
ಒಂದು ಮನೆಯಲ್ಲಿ ಹಿಂದಿನ 12 ತಿಂಗಳಲ್ಲಿ ಬಳಸಿದ ವಿದ್ಯುತ್ ನ ಸರಾಸರಿಗೆ ಹತ್ತು ಶೇಕಡಾ ಹೆಚ್ಚಿಸಿ 200 ಯುನಿಟ್ ವರೆಗಿನ ಪ್ರಮಾಣದ ವಿದ್ಯುತ್ ಉಚಿತ. ಜುಲೈ 1ರಿಂದ ಎಲ್ಲಾ ಜನರಿಗೆ ವಿದ್ಯುತ್ ಉಚಿತದ ಸೌಲಭ್ಯ ಸಿಗಲಿದೆ. ಇದಕ್ಕೆ ಬೇರೆ ಷರತ್ತು ಇರುವುದಿಲ್ಲ. ಈಗಾಗಲೇ ಪಾವತಿ ಬಾಕಿ ಉಳಿದಿರುವುದನ್ನು ಆತನೇ ಕಟ್ಟಬೇಕು.
ಗೃಹ ಲಕ್ಷ್ಮೀ ಯೋಜನೆ
ಮನೆಯ ಯಜಮಾನಿಯ ಖಾತೆಗೆ ತಿಂಗಳಿಗೆ 2000 ರೂ. ಜಮೆ ಮಾಡಲಾಗುವುದು. ಬಿಪಿಎಲ್ – ಎಪಿಎಲ್ ಎಂಬ ಭೇದ ಇರುವುದಿಲ್ಲ. ಈ ಯೋಜನೆ ಎಲ್ಲರಿಗೂ ಅನ್ವಯವಾಗಲಿದೆ. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಜೊತೆಗೆ ಜೂನ್ 15ರಿಂದ ಜುಲೈ 15ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಆಗಸ್ಟ್ 15ರಂದು ಮೊದಲ ಕಂತಿನ ಹಣ ಜಮೆ ಮಾಡಲಾಗುತ್ತದೆ. ವಿಧವಾ ವೇತನ, ವೃದ್ಯಾಪ್ಯ ವೇತನ ಪಡೆಯುತ್ತಿರುವ ಮಹಿಳೆಯರಿಗೂ ಈ ಯೋಜನೆ ಸಿಗಲಿದೆ.
ಅನ್ನಭಾಗ್ಯ ಯೋಜನೆ
ಜುಲೈ 1ರಿಂದ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ತಲಾ ಹತ್ತು ಕೆಜಿ ಆಹಾರ ಧಾನ್ಯ ಉಚಿತ. ಇದಕ್ಕೆ ಬೇರೆ ಷರತ್ತು ಇರುವುದಿಲ್ಲ.
ಮಹಿಳಾ ಶಕ್ತಿ ಯೋಜನೆ
ಎಲ್ಲಾ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೇರಿ ರಾಜ್ಯದಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಹಿತ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ.ಇದೇ ಜೂನ್ 11ರಿಂದ ಯೋಜನೆ ಜಾರಿಗೆ ಬರಲಿದೆ. ಕರ್ನಾಟಕ ರಾಜ್ಯದೊಳಗೆ ಮಾತ್ರ ಉಚಿತ ಪ್ರಯಾಣ. ಎಷ್ಟು ದೂರ ಪ್ರಯಾಣ ಎಂಬ ಷರತ್ತು ವಿಧಿಸಿಲ್ಲ. ಎಸಿ ಬಸ್ ಮತ್ತು ಲಕ್ಸುರಿ ಬಸ್ ಹೊರತು ಪಡಿಸಿ ಯಾವುದೇ ಬಸ್ ನಲ್ಲೂ ಸಂಚರಿಸಬಹುದು.
ನಿರುದ್ಯೋಗಿಗಳಿಗೆ ಯುವ ನಿಧಿ
2022-23ರಲ್ಲಿ ವ್ಯಾಸಂಗ ಮಾಡಿ ಯಾವುದೇ ಪದವಿ ಪಡೆದವರಿಗೆ 24 ತಿಂಗಳ ವರೆಗೆ ಪ್ರತಿ ತಿಂಗಳಿಗೆ 3000 ರೂ. ಯುವ ನಿಧಿ ಹೆಸರಲ್ಲಿ ಹಣ ಜಮಾವಣೆ. ಡಿಪ್ಲೊಮಾ ಮಾಡಿದವರಿಗೆ 1500 ನೀಡಲಾಗುವುದು. ಈ ಎರಡು ವರ್ಷದೊಳಗೆ ಉದ್ಯೋಗ ಪಡೆದರೆ ಹಣ ನಿಲ್ಲಿಸಲಾಗುವುದು. ತೃತೀಯ ಲಿಂಗಿಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಅರ್ಹರು ಅರ್ಜಿ ಸಲ್ಲಿಸಬೇಕಾಗುತ್ತದೆ. ಯೋಜನೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಆರು ತಿಂಗಳ ವರೆಗೆ ಅವಕಾಶವಿದೆ
After chairing the cabinet meeting, Karnataka Chief Minister Siddaramaiah on Friday said that the cabinet has decided to fulfill all five guarantees in the current financial year. Karnataka Chief Minister Siddaramaiah announced on Friday that his cabinet decided the government will begin providing 200 units of free electricity from July 1 all five poll guarantees will be implemented in the present financial year.
11-02-25 03:40 pm
HK News Desk
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
Mysuru stone pelting, Rahul Gandhi: ದೆಹಲಿ ಫಲಿ...
11-02-25 12:37 pm
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 04:50 pm
Mangalore Correspondent
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm