ಬ್ರೇಕಿಂಗ್ ನ್ಯೂಸ್
03-06-23 11:55 am HK News Desk ಕರ್ನಾಟಕ
ಚಿಕ್ಕಮಗಳೂರು, ಜೂನ್ 3: ಒಡಿಸ್ಸಾದಲ್ಲಿ ದುರಂತಕ್ಕೀಡಾದ ರೈಲಿನಲ್ಲಿ ಕಳಸ, ಹೊರನಾಡು ಮೂಲದ 110 ಮಂದಿ ಜೈನ ಸಮುದಾಯದ ಯಾತ್ರಿಕರಿದ್ದು ಯಾವುದೇ ಅಪಾಯಕ್ಕೀಡಾಗದೆ ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಲಭಿಸಿದೆ.
ಬೆಂಗಳೂರಿನಿಂದ ಹೊರಟಿದ್ದ ಯಶವಂತಪುರ - ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮೇದ್ ಸಿಖರ್ಜಿ ಯಾತ್ರೆಗೆಂದು 110 ಮಂದಿ ಪ್ರಯಾಣ ಬೆಳೆಸಿದ್ದರು. ಶುಕ್ರವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ತಂಡ ಬೆಂಗಳೂರಿನಿಂದ ಹೊರಟಿತ್ತು. 24ನೇ ಜೈನ ತೀರ್ಥಂಕರರು ಮೋಕ್ಷ ಹೊಂದಿದ್ದ ಸುಮೇದ್ ಶಿಖರ್ಜಿ ಎಂಬ ಪುಣ್ಯ ಕ್ಷೇತ್ರಕ್ಕೆ ತೆರಳುತ್ತಿದ್ದರು. ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಮಂದಿ ತಂಡದಲ್ಲಿದ್ದರು. ರೈಲು ಶುಕ್ರವಾರ ಸಂಜೆ ಒಡಿಸ್ಸಾದ ಬಾಲೇಶ್ವರ ತಲುಪಿದಾಗ, ಅದಾಗಲೇ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದ ಪಶ್ಚಿಮ ಬಂಗಾಳ ಮೂಲದ ಬಾಲಾಸೋರ್ ಎಕ್ಸ್ ಪ್ರೆಸ್ ರೈಲಿಗೆ ಸರಣಿ ಡಿಕ್ಕಿಯಾಗಿದೆ.
ಘಟನೆ ಬಗ್ಗೆ ರೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ವ್ಯಕ್ತಿಯ ಸಹೋದರ ಮಾಳ ಹರ್ಷವರ್ಧನ ಜೈನ್ ಹೇಳಿಕೆ ನೀಡಿದ್ದಾರೆ. ಮೇ 31 ರಂದು ಶೃಂಗೇರಿ, ಹೊರನಾಡಿನಿಂದ ಜೈನ ಸಮಾಜದ 110 ಮಂದಿ ಶಿಕರ್ಜಿ ಕ್ಷೇತ್ರಕ್ಕೆ ಹೊರಟಿದ್ದರು. ಅಜಿತ್ ಕುಮಾರ್ ಜೈನ್ ನೇತೃತ್ವದಲ್ಲಿ ಶ್ರಾವಕ ಶ್ರಾವಕಿಯರು ಯಾತ್ರೆಗೆ ತೆರಳಿದ್ದರು. ನನ್ನ ಅಣ್ಣ ಮಾಳ ಪ್ರಕಾಶ್ ಜೈನ್, ಅತ್ತಿಗೆ ಲಾವಣ್ಯ 110 ಯಾತ್ರಿಕರೊಂದಿಗೆ ತೆರಳಿದ್ದರು. ರೈಲು ಬೆಂಗಳೂರಿನಿಂದ ಹೊರಡುವಾಗಲೇ ಎರಡು ಗಂಟೆ ತಡವಾಗಿ ಹೊರಟಿತ್ತು. ಎಸ್-5, ಎಸ್-6 ಮತ್ತು ಎಸ್-7 ಕೊನೆಯ ಮೂರು ಬೋಗಿಗಳಲ್ಲಿ ನಮ್ಮ ತಂಡದ 110 ಜನ ಪ್ರಯಾಣಿಸುತ್ತಿದ್ದರು. ನಡುವೆ, ಇಂಜಿನ್ ಚೇಂಜ್ ಆದಾಗ ಕೊನೆಯಲ್ಲಿದ್ದ ಮೂರು ಬೋಗಿಗಳು ಮೊದಲ ಮೂರು ಬೋಗಿಗಳಾಗಿದ್ದವು. ಡಿಕ್ಕಿಯ ಸಂದರ್ಭದಲ್ಲಿ ಜೋರಾಗಿ ಶಬ್ದವಾಯಿತು, ಆನಂತರ ರೈಲಿನಲ್ಲಿ ಮೇಲೆ ಮಲಗಿದ್ದವರು ಕೆಳಗೆ ಬಿದ್ದರು ಎಂದು ನನ್ನ ಅತ್ತಿಗೆ ತಿಳಿಸಿದ್ದಾರೆ. ಹೊರಗೆ ಬಂದು ನೋಡಿದಾಗ ಅಪಾರ ಸಾವು ನೋವು ಉಂಟಾಗಿತ್ತು. ನಮ್ಮ ತಂಡದ 110 ಮಂದಿಯೂ ಸುರಕ್ಷಿತವಾಗಿದ್ದಾರೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಉಳಿದ ಬೋಗಿಗಳನ್ನು ಬೇರ್ಪಡಿಸಿ ಯಾತ್ರೆ ಮುಂದುರಿಸಿದ್ದಾರೆ. ಈಗ ಶಿಕರ್ಜಿಯತ್ತ ಎಲ್ಲರೂ ಪ್ರಯಾಣ ಬೆಳೆಸಿದ್ದಾರೆ ಎಂದು ಮಾಳ ಹರ್ಷವರ್ಧನ್ ಜೈನ್ ಹೇಳಿಕೆ ನೀಡಿದ್ದಾರೆ. ಇವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಾಳ ಪ್ರಕಾಶ್ ಜೈನ್ ಅವರ ಸಹೋದರನಾಗಿದ್ದಾರೆ.
Odisha train accident, 110 people of Chikkamagaluru traveling via Howrah Express are safe. The family to belong to Jain community. At least 238 people were killed and around 900 were injured in a horrific three-train collision in Odisha's Balasore, officials said Saturday, the country's deadliest rail accident in more than 20 years. Railway Minister Ashwini Vaishnaw said a high-level committee will be set up to investigate the train crash.
11-02-25 03:40 pm
HK News Desk
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
Mysuru stone pelting, Rahul Gandhi: ದೆಹಲಿ ಫಲಿ...
11-02-25 12:37 pm
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 04:50 pm
Mangalore Correspondent
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm