ಸಿಗ್ನಲ್ ದೋಷ, ವ್ಯವಸ್ಥೆಯಲ್ಲಿ ಗಂಭೀರ ವೈಫಲ್ಯ ; ಮೂರು ತಿಂಗಳ ಹಿಂದೆಯೇ ರೈಲ್ವೇಗೆ ಪತ್ರ ಬರೆದಿದ್ದ ಉನ್ನತ ಅಧಿಕಾರಿ! ಇಲಾಖೆಯ ನಿರ್ಲಕ್ಷ್ಯವೇ ರೈಲು ದುರಂತಕ್ಕೆ ಕಾರಣವೇ ?  

04-06-23 10:36 pm       HK News Desk   ಕರ್ನಾಟಕ

ಒಡಿಶಾ ರೈಲು ದುರಂತಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಆಗಿರುವ ಲೋಪ ಕಾರಣ ಎಂದಿದ್ದರೆ, ರೈಲ್ವೇ ಮಂಡಳಿ ಒಟ್ಟು ಘಟನೆಯ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಬೆಂಗಳೂರು, ಜೂನ್ 4: ಒಡಿಶಾ ರೈಲು ದುರಂತಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಆಗಿರುವ ಲೋಪ ಕಾರಣ ಎಂದಿದ್ದರೆ, ರೈಲ್ವೇ ಮಂಡಳಿ ಒಟ್ಟು ಘಟನೆಯ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದರ ನಡುವಲ್ಲೇ ನೈರುತ್ಯ ರೈಲ್ವೇ ವಲಯದಲ್ಲಿ ಸಿಗ್ನಲಿಂಗ್ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಗಂಭೀರ ವೈಫಲ್ಯ ಎದುರಾಗಿರುವ ಬಗ್ಗೆ ಉನ್ನತ ಅಧಿಕಾರಿಯೊಬ್ಬರು ಕಳೆದ ಫೆಬ್ರವರಿ ತಿಂಗಳಲ್ಲೇ ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದರು ಎನ್ನುವುದು ಈಗ ಸಂಚಲನ ಮೂಡಿಸಿದೆ.

ಸೌತ್ ವೆಸ್ಟರ್ನ್ ರೈಲ್ವೇ ವಲಯದ ಮುಖ್ಯ ಆಪರೇಟಿಂಗ್ ಮೆನೇಜರ್ ಆಗಿದ್ದ ಅಧಿಕಾರಿ ಫೆಬ್ರವರಿ 9ರಂದು ಪತ್ರ ಬರೆದಿದ್ದು, ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಗಂಭೀರ ತೊಂದರೆ ಎದುರಾಗಿರುವ ಬಗ್ಗೆ ಇಲಾಖೆಯ ಗಮನ ಸೆಳೆದಿದ್ದರು. ಮೈಸೂರು ವಲಯದ ಬೀರೂರು- ಚಿಕ್ಕಜಾಜೂರು ವಿಭಾಗದ ಹೊಸದುರ್ಗ ರೈಲು ಹಳಿಯಲ್ಲಿ 2023ರ ಫೆ.8ರಂದು ಸಂಜೆ 5.45ರ ಸುಮಾರಿಗೆ ಸಿಗ್ನಲ್ ವ್ಯವಸ್ಥೆಯಲ್ಲಿ ಗಂಭೀರ ವೈಫಲ್ಯ ಉಂಟಾಗಿದ್ದರಿಂದ ಭಾರೀ ಅವಘಡ ಸ್ವಲ್ಪದರಲ್ಲಿ ತಪ್ಪಿ ಹೋಗಿತ್ತು. ಬಿಪಿಎಸಿ ಸಿಗ್ನಲ್ ಕೌಂಟರ್ ಅನಿರೀಕ್ಷಿತವಾಗಿ ಬಂದ್ ಆಗಿದ್ದರಿಂದ ಸಮಸ್ಯೆ ಆಗಿತ್ತು. ಆ ಸಂದರ್ಭದಲ್ಲಿ ಅದೇ ಹಳಿಯಲ್ಲಿ ಬರುತ್ತಿದ್ದ ರೈಲು ಸಂಖ್ಯೆ – 12649 ಹೆಸರಿನ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಸಿಗ್ನಲ್ ತೊಂದರೆ ಆಗಿದ್ದನ್ನು ಮನಗಂಡು ರೈಲನ್ನು ನಿಲ್ಲಿಸಿದ್ದರು. ಇದರಿಂದ ದೊಡ್ಡ ಅವಘಡ ತಪ್ಪಿ ಹೋಗಿತ್ತು. ಆನಂತರ, ಪರಿಶೀಲನೆ ನಡೆಸಿದಾಗ ಆ ರೈಲಿಗೆ ಇನ್ನೊಂದು ಲೈನಲ್ಲಿ ಹೋಗಲು ತಪ್ಪಾಗಿ ಪಿಎಲ್ ಸಿಟಿ ಕ್ಲಿಯರೆನ್ಸ್ ನೀಡಿತ್ತೆಂಬುದು ಕಂಡುಬಂದಿತ್ತು.

Red flags ignored? 'Serious flaws' in railway signal system raised 3 months  prior to Odisha train accident | Mint

Opposition condoles loss of lives, blames signaling system failure in Odisha  train crash

ರೈಲು ಒಮ್ಮೆ ಹೊರಟ ಬಳಿಕ ಈ ರೀತಿ ಸಿಗ್ನಲ್ ವ್ಯವಸ್ಥೆಯನ್ನು ಬದಲಿಸುವುದು, ಹೋಗುವ ಹಳಿಯನ್ನು ಬದಲು ಮಾಡುವುದು ದೊಡ್ಡ ಅವಘಡಕ್ಕೆ ಕಾರಣವಾಗುತ್ತದೆ. ಇದರಿಂದ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗುತ್ತದೆ. ಈ ರೀತಿಯಾದಲ್ಲಿ ಮುಂದಕ್ಕೆ ದೊಡ್ಡ ಅವಘಡ ಉಂಟಾಗಬಹುದು. ಇದು ವ್ಯವಸ್ಥೆಯೊಳಗಿನ ಗಂಭೀರ ವೈಫಲ್ಯ ಎಂದು ಚೀಫ್ ಆಪರೇಟಿಂಗ್ ಆಫೀಸರ್ ಪತ್ರ ಬರೆದು ರೈಲ್ವೇ ಇಲಾಖೆಯ ಗಮನಕ್ಕೆ ತಂದಿದ್ದರು. ಹೀಗಾಗಿ ಈ ರೀತಿ ವ್ಯತ್ಯಾಸ ಆಗಲು ಯಾರು ಕಾರಣ ಎಂಬುದನ್ನು ಪತ್ತೆ ಮಾಡಬೇಕು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ನೈರುತ್ಯ ರೈಲ್ವೇ ವಲಯದಲ್ಲಿ ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳಬೇಕು ಎಂದು ಪತ್ರ ಬರೆದಿದ್ದರು.

Odisha train tragedy: 'Serious flaws in signalling system' were flagged 3  months ago - India Today

Red signals for the Railways

ಒಡಿಶಾದ ಬಾಲಾಸೋರ್ ನಲ್ಲಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ದೋಷ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಲೋಪ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಉನ್ನತ ಅಧಿಕಾರಿಯ ಪತ್ರದ ಅಂಶಗಳನ್ನು ನೋಡಿದರೆ, ಈ ರೀತಿ ಆಗುವುದಕ್ಕೆ ನಿರ್ದಿಷ್ಟ ಶಕ್ತಿಗಳೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಇದರ ನಡುವಲ್ಲೇ ರೈಲ್ವೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಮೂರು ತಿಂಗಳ ಹಿಂದೆ ವ್ಯವಸ್ಥೆಯ ವೈಫಲ್ಯದ ಬಗ್ಗೆ ರೈಲ್ವೇ ಇಲಾಖೆಗೆ ಪತ್ರ ಬರೆದಿರುವುದು ಲೀಕ್ ಆಗಿದ್ದು, ಇಂಡಿಯಾ ಟುಡೇಯಲ್ಲಿ ಬಂದಿದೆ. ಹೀಗಾಗಿ ಓಡಿಶಾ ರೈಲು ದುರಂತಕ್ಕೆ ರೈಲ್ವೇ ಇಲಾಖೆಯೊಳಗಿನ ವೈಫಲ್ಯ ಕಾರಣವೇ ಎಂಬ ಅನುಮಾನ ಕೇಳಿಬಂದಿದೆ.

Warnings ignored': Flaws in signalling system flagged 3 months before  Odisha train accident, odisha train tragedy top railway official  highlighted flaws in signalling system three months ago

Signalling issue, why no Kavach: Odisha train tragedy decoded - India Today

ಒಡಿಶಾ ರೈಲು ದುರಂತದಲ್ಲಿ ಭಾನುವಾರ ಸಂಜೆಯ ವರೆಗೆ 294 ಮಂದಿ ಸಾವು ಕಂಡಿದ್ದಾರೆ. ಹೆಚ್ಚಿನ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಅಪಘಾತದಲ್ಲಿ ಮುಖ, ಶರೀರ ಭೀಭತ್ಸ ಆಗಿರುವುದರಿಂದ ಮತ್ತು ರೈಲಿನಲ್ಲಿ ದೇಶದ ಹಲವೆಡೆಯ ಜನರು ಇದ್ದುದರಿಂದ ಗುರುತು ಪತ್ತೆ ಸವಾಲಾಗಿದೆ. ಶವಗಳ ಫೋಟೋಗಳನ್ನು ರೈಲ್ವೇ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು ಆಮೂಲಕ ಸಾರ್ವಜನಿಕರು ಗುರುತು ಪತ್ತೆಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. 

While Union Railway Minister Ashwini Vaishnaw has attributed 'change in electronic interlocking' as the reason behind the Odisha train tragedy that has claimed nearly 300 lives, the chief operating manager of the South Western Railway Zone had warned about 'serious flaws in the system' three months ago. He had raised concerns about failure of the interlocking system in February and highlighted the need for safety measures to be taken.