ಬ್ರೇಕಿಂಗ್ ನ್ಯೂಸ್
06-06-23 05:54 pm Bangalore Correspondent ಕರ್ನಾಟಕ
ಬೆಂಗಳೂರು, ಜೂ.06: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾದಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರ ಕಾರನ್ನು ತಡೆದ ಟೋಲ್ ಸಿಬ್ಬಂದಿ, ನಿಮಗೆ ಹೈವೆಯಲ್ಲಿ ಹೋಗೋದಕ್ಕೆ ಬಿಟ್ಟಿಯಾಗಿ ಬಿಡ್ತೀವಿ. ನಾವು ಕಳಿಸಿದಾಗ ಹೋಗಬೇಕು, ಎಂದು ಅವಾಜ್ ಹಾಕಿದ್ದಾರೆ.
ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ಶಾಸಕರು, ಸಚಿವರು, ಸಂಸದರು ಹಾಗೂ ಕೆಲವು ಜನಪ್ರತಿನಿಧಿಗಳಿಗೆ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವಿದೆ. ಆದರೆ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಬೆಂಗಳೂರಿನಿಂದ ಮಳವಳ್ಳಿಗೆ ಹೋಗುವಾಗ ಬೆಂಗಳೂರು ಹೊರವಲಯದ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್ ದಾಟಿ ಹೋಗುವ ಮುನ್ನ ಶಾಸಕರ ಪಾಸ್ ಕೂಡ ತೋರಿಸಲಾಗಿದೆ. ಆದರೂ, ನಿಮ್ಮನ್ನ ಬಿಟ್ಟಿಯಾಗಿ ಹೈವೇಯಲ್ಲಿ ಹೋಗೋಕೆ ಬಿಡ್ತೀವಿ ನಾವು ಅನುಮತಿ ಕೊಟ್ಟಾಗಲೇ ನೀವು ಟೋಲ್ ದಾಟಿ ಹೋಗಬೇಕು ಎಂದು ಶಾಸಕರಿಗೆ ಅವಾಜ್ ಹಾಕಿದ್ದಾನೆ.
ಪಾಸ್ ಇದ್ದರೂ ಶಾಸಕರ ಕಾರು ತಡೆದು ನಿಲ್ಲಿಸಿದ ಸಿಬ್ಬಂದಿ:
ಬೆಂಗಳೂರು- ದಶಪಥ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿಗಳ ಕಿರಿಕ್ ಹೆಚ್ಚಾಗುತ್ತಿದೆ. ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವೇಳೆ ಜನಸಾಮಾನ್ಯರ ಜೊತೆಗೆ ಮಾತ್ರವಲ್ಲದೇ ಈಗ ಶಾಸಕರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಜೊತೆ ಭಾನುವಾರ ಸಂಜೆ ಟೋಲ್ ಸಿಬ್ಬಂದಿ ಕ್ಯಾತೆ ತೆಗೆದು ಶಾಸಕರಿಗೇ ಅವಾಜ್ ಹಾಕಿದ್ದಾರೆ. ಬೆಂಗಳೂರಿನಿಂದ ಮಳವಳ್ಳಿ ಕಡೆ ಹೋಗ್ತಿದ್ದ ಶಾಸಕ ನರೇಂದ್ರ ಸ್ವಾಮಿಗೆ ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಸಿಬ್ಬಂದಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನಲ್ಲಿ ಶಾಸಕರ ವಾಹನ ಪಾಸ್ ಇದ್ರೂ, ತಡೆದು ನಿಲ್ಲಿಸಿದ್ದ ಟೋಲ್ ಸಿಬ್ಬಂದಿಗೆ ಶಾಸಕರು ಪ್ರಶ್ನೆ ಮಾಡಿದ್ದಾರೆ.
ನಾನು ನೋಡದ ಪೊಲೀಸಾ, ಯಾರು ಬರ್ತಾರೋ ಬರಲಿ:
ಈ ವೇಳೆ ಟೋಲ್ ಸಿಬ್ಬಂದಿ ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಪೋಲಿಸರು ಬರಲಿ ಎಂದ ಶಾಸಕ ನರೇಂದ್ರ ಸ್ವಾಮಿ ಹೇಳಿದ್ದಕ್ಕೆ ಯಾವ ಪೋಲಿಸರು ಬೇಕಾದರೆ ಬರಲಿ, ನಾನು ನೋಡಿರದ ಪೋಲಿಸಾ ಎಂದು ಏಕವಚನದಲ್ಲೇ ಟೋಲ್ ಸಿಬ್ಬಂದಿ ಶಾಸಕರಿಗೆ ಅವಾಜ್ ಹಾಕಿದ್ದಾರೆ. ನಿಮ್ಮನ್ನ ಹೈವೆಯಲ್ಲಿ ಬಿಟ್ಟಿ, ಫ್ರೀಯಾಗಿ ಬಿಡ್ತಾ ಇದ್ದೀವಿ ಎಂದು ನೀವೂ ಬಂದ್ವಾ ಹೋದ್ವಾ ಅನ್ನೋದನ್ನು ಕಲೀಬೇಕು ಎಂದು ಶಾಸಕರಿಗೆ ಏರು ಧ್ವನಿಯಲ್ಲೇ ಟೋಲ್ ಸಿಬ್ಬಂದಿ ಅವಾಜ್ ಹಾಕಿದ್ದಾನೆ. ಜೊತೆಗೆ, ಟೋಲ್ ಸಿಬ್ಬಂದಿ ಶಾಸಕರಿಗೆ ಕೈ ತೋರಿಸುತ್ತಾ ಶಾಸಕ ನರೇಂದ್ರ ಸ್ವಾಮಿ ಜೊತೆ ಅನುಚಿತ ವರ್ತನೆ ತೋರಿದ್ದಾನೆ.
Malavalli Congress MLA PM Narendra Swamy was reportedly ill-treated by a toll plaza employee on the Bengaluru-Mysuru expressway on Sunday. The incident took place when Narendra Swamy was travelling from Mysuru to Bengaluru.
11-02-25 10:34 pm
HK News Desk
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
Mysuru stone pelting, Rahul Gandhi: ದೆಹಲಿ ಫಲಿ...
11-02-25 12:37 pm
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm