ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಸುಳಿವು ; ವಿಪಕ್ಷಗಳ ನೇತೃತ್ವ ವಹಿಸಲು ದೇವೇಗೌಡರ ನಿರಾಕರಣೆ  

06-06-23 10:28 pm       Bangalore Correspondent   ಕರ್ನಾಟಕ

ಲೋಕಸಭೆ ಚುನಾವಣೆಯ ವೇಳೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಕುರಿತು ಮಾಜಿ ಪ್ರಧಾನಿ ದೇವೇಗೌಡ ಸುಳಿವು ನೀಡಿದ್ದಾರೆ.

ಬೆಂಗಳೂರು, ಜೂನ್ 6: ಲೋಕಸಭೆ ಚುನಾವಣೆಯ ವೇಳೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಕುರಿತು ಮಾಜಿ ಪ್ರಧಾನಿ ದೇವೇಗೌಡ ಸುಳಿವು ನೀಡಿದ್ದಾರೆ.

ಚುನಾವಣೆ ಸೋಲಿನ ಕುರಿತ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಈ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ದೇಶದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಇದ್ದವರು ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಕೂಡ ಬಿಜೆಪಿ ಜೊತೆಗೆ ಆ ರೀತಿಯ ಸಂಬಂಧ ಇರಿಸಿಕೊಂಡಿತ್ತು ಎಂದು ಹೇಳಿದ್ದಾರೆ.

Bengal BJP prepares for rural polls with an eye one Lok Sabha elections

ಬಿಜೆಪಿ ವಿರುದ್ಧ ವಿಪಕ್ಷಗಳು ಒಂದಾದಲ್ಲಿ ನೇತೃತ್ವ ವಹಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ನಿರಾಕರಿಸಿದ ಗೌಡರು, ಬಿಜೆಪಿ ಜೊತೆಗೆ ಎಲ್ಲ ಪಕ್ಷಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧ ಇರಿಸಿಕೊಂಡಿವೆ. ಅದು ಎಲ್ಲರಿಗೂ ಗೊತ್ತಿರುವಂಥದ್ದೇ. ಅದು ಕರ್ನಾಟಕದಲ್ಲಿಯೂ ಆಗಿರುವಂಥದ್ದೇ ಎಂದು ಹೇಳಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲಾಯ್ತೆಂದು ನೋವು ಪಟ್ಟುಕೊಳ್ಳುವ ಅಗತ್ಯವಿಲ್ಲ. ಎಲ್ಲಿ ತಪ್ಪಾಗಿದೆ ಅನ್ನುವುದನ್ನು ಪತ್ತೆ ಮಾಡಿ, ಯಶಸ್ಸು ದಕ್ಕಿಸಿಕೊಳ್ಳುತ್ತೇವೆ. ಹೋರಾಟದಿಂದ ಮತ್ತೆ ಗೆಲುವಿನ ಹಾದಿ ಕಂಡುಕೊಳ್ಳುತ್ತೇವೆ ಎಂದರು.

K'taka Dy CM DK Shivakumar asks BBMP chief to suspend officials involved in  illegal lake work - India Today

ಬಿಜೆಪಿ ಪ್ರತಿಭಟನೆ - ಜನ ಮೂರ್ಖರಲ್ಲ

ಡಿಸಿಎಂ ಡಿಕೆ ಶಿವಕುಮಾರ್, ಯುದ್ಧ ಬೇಡ, ಗೆಳೆತನ ಸಾಧಿಸುತ್ತೇವೆ ಎಂದು ಹೇಳಿರುವ ಮಾತಿಗೆ ಉತ್ತರಿಸಿದ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯಾವುದೇ ರೀತಿಯ ಗೆಳೆತನದ ಸಂಬಂಧ ಇರಿಸಿಕೊಳ್ಳಲು ಬಯಸೋದಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದೇ ಇರುತ್ತೇವೆ. ಹಾಗಂತ, ಕೈಕಟ್ಟಿ ಕೂರುವ ಜಾಯಮಾನ ನಮ್ಮದಲ್ಲ ಎಂದರು. ಬಿಜೆಪಿಯವರು ವಿದ್ಯುತ್ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತ ಪ್ರಶ್ನೆಗೆ, ಬಿಜೆಪಿ ಸರಕಾರ ಇರುವಾಗಲೇ ವಿದ್ಯುತ್ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿತ್ತು. ಈ ರೀತಿಯ ಗಿಮಿಕ್ ಬಗ್ಗೆ ತಿಳಿದುಕೊಳ್ಳದ ಮೂರ್ಖರಲ್ಲ ಜನ. ಈಗ ಪ್ರತಿಭಟನೆ ನಡೆಸಿ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನದಲ್ಲಿದ್ದಾರೆ ಎಂದರು.

JD(S) supremo and former prime minister H G Deve Gowda maintained an enigmatic silence on whether his party will tie-up with BJP for next year’s Lok Sabha polls and instead asked which party has not done business with BJP. Gowda, who attended a review meeting of the party performance in the assembly polls in the party office in Bengaluru on Tuesday, claimed that all parties, including Congress, have had understanding with BJP and they have done in Karnataka too.