ಬ್ರೇಕಿಂಗ್ ನ್ಯೂಸ್
06-06-23 10:38 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 6: ಪಕ್ಷದ 13 ಮಂದಿ ಸಂಸದರ ವಿರುದ್ಧ ವ್ಯವಸ್ಥಿತ ರೀತಿಯ ಅಪಪ್ರಚಾರ ನಡೆದಿದೆ. ನಮಗೆಲ್ಲ ವಯಸ್ಸಾಗಿದೆ, ಅನಾರೋಗ್ಯದ ಕಾರಣ ನೀಡಿ ಟಿಕೆಟ್ ನಿರಾಕರಣೆಯ ಸುದ್ದಿ ಹಬ್ಬಿಸಲಾಗುತ್ತಿದೆ. ಇದಕ್ಕೆಲ್ಲ ರಾಷ್ಟ್ರೀಯ ನಾಯಕರು ತೆರೆ ಎಳೆಯಬೇಕಾಗಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿದೆ. ಇದರ ನಡುವಲ್ಲೇ ಚುನಾವಣೆ ಸೋಲಿನ ನೆಪದಲ್ಲಿ ನಾಯಕರ ಮನೋ ಸ್ಥೈರ್ಯವನ್ನು ಕುಗ್ಗಿಸುವ ಯತ್ನ ನಡೆದಿದೆ. ಪಕ್ಷದ ನಾಯಕರನ್ನು ನಿರ್ವೀರ್ಯಗೊಳಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ರಾಷ್ಟ್ರೀಯ ನಾಯಕರು ಸ್ಪಷ್ಟನೆ ನೀಡಬೇಕಾಗಿದೆ ಎಂದರು.
ಈ ರೀತಿಯ ಸುದ್ದಿಯನ್ನು ಯಾರು ಹರಿಯಬಿಟ್ಟಿದ್ದಾರೋ ಗೊತ್ತಿಲ್ಲ. ಪಕ್ಷದ 25 ಸಂಸದರ ಪೈಕಿ 13 ಮಂದಿ ಕೆಲಸವನ್ನೇ ಮಾಡಿಲ್ಲ. ಮುದುಕರಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಾವೆಲ್ಲ ಜನರಿಂದ ಗೆದ್ದು ಬಂದವರು. ಈ ಗೊಂದಲಗಳಿಗೆ ಸ್ಪಷ್ಟನೆ ನೀಡಬೇಕಾದವರು ಮಾತನಾಡುತ್ತಿಲ್ಲ. ಹೀಗಾದಲ್ಲಿ ಬೇರೆ ರೀತಿಯ ಸಂದೇಶ ಹೋಗುತ್ತದೆ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನಿರೀಕ್ಷಿತ. ಕಾಂಗ್ರೆಸಿಗೆ ರಾಜ್ಯದ ಜನತೆ ಜನಾದೇಶ ನೀಡಿದ್ದಾರೆ. ನಾವು ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಿಂದೆಲ್ಲ ಆತ್ಮಾವಲೋಕನ ನಡೆಯುತ್ತಿತ್ತು. ಈಗೆಲ್ಲ ಆತ್ಮಾವಲೋಕನ ಮಾಡಲು ಆತ್ಮಗಳೇ ಇಲ್ಲದಾಗಿವ ಎಂದು ಮಾರ್ಮಿಕವಾಗಿ ನುಡಿದರು.
ಸೋಲು ಹೊಸದಲ್ಲ. ಹಿಂದೆ ವಾಜಪೇಯವರು ಕೂಡ ಚುನಾವಣೆ ಸೋತಿದ್ದಾರೆ. ಆನಂತರ ಗೆದ್ದು ಬಂದಿದ್ದಾರೆ. ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ. ತಾತ್ಕಾಲಿಕ ಹಿನ್ನಡೆಯಾಗಿದೆ. ಕಾರ್ಯಕರ್ತರ ಮನೋಬಲ ಕುಸಿಯದಂತೆ ನಾಯಕರು ನೋಡಿಕೊಳ್ಳಬೇಕಾಗಿದೆ ಎಂದು ಡಿವಿ ಹೇಳಿದ್ದಾರೆ.
Taking exception to reports in a section of the media that 13 incumbent MPs of the BJP may not get the ticket this time, the former Chief Minister D.V. Sadananda Gowda has urged the party’s State and central leadership to intervene and counter such reports. Addressing a press conference here on Tuesday, a visibly upset Mr. Gowda wondered, “How do these media persons know that the party is not giving the ticket to 13 MPs? Are they party spokespersons?”
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm