ಚಿತ್ರದುರ್ಗ ; ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್​ , ಮೂವರು ಸಾವು, ಶವ ಕೊಂಡೊಯ್ಯುತ್ತಿದ್ದವರು ಮಸಣ ಸೇರಿದರು

08-06-23 03:36 pm       HK News Desk   ಕರ್ನಾಟಕ

ಆಂಬ್ಯುಲೆನ್ಸ್​ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಬಳಿ ನಡೆದಿದೆ.

ಚಿತ್ರದುರ್ಗ, ಜೂ.8: ಆಂಬ್ಯುಲೆನ್ಸ್​ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಬಳಿ ನಡೆದಿದೆ.

ಅಪಘಾತದಲ್ಲಿ ತಮಿಳುನಾಡಿನ ತಿರುನಾಳವೇಲಿಯ ಕನಕಮಣಿ(72), ಆಕಾಶ್ (17), ಗುಜರಾತ್​ ಮೂಲದ ಆ್ಯಂಬುಲೆನ್ಸ್​ ಚಾಲಕ ಮೃತಪಟ್ಟಿದ್ಧಾರೆ. ಜ್ಞಾನಶೇಖರ್​(51), ಮೌಳಿ ರಾಜನ್​(45) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಪರಶುರಾಮ್​ ತಮಿಳುನಾಡು ಮೂಲದ ಕನಕಮಣಿ ಮತ್ತು ಕುಟುಂಬಸ್ಥರು ಅಹಮದಾಬಾದ್​ನಲ್ಲಿ ನೆಲೆಸಿದ್ದಾರೆ. ಕುಟುಂಬದ ಸದಸ್ಯರೊಬ್ಬರು ಅಕಾಲಿಕ ನಿಧನದಿಂದಾಗಿ ಅವರ ಮೃತದೇಹವನ್ನು ಗುಜರಾತಿನಿಂದ ತಮ್ಮ ತವರೂರಿಗೆ ಕೊಂಡೊಯ್ಯುತ್ತಿದ್ದರು.

ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಆಂಬ್ಯುಲೆನ್ಸ್​ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ನಿರಂತರವಾಗಿ ಪ್ರಯಾಣಿಸುತ್ತಿದ್ದ ಕಾರಣ ಆ್ಯಂಬುಲೆನ್ಸ್​ ಚಾಲಕ ನಿದ್ದೆಗೆ ಜಾರಿದ ಪರಿಣಾಮ ಅಪಘಾತ ಸಂಭವಿಸಿದೆ.

ವೇಗವಾಗಿ ಆ್ಯಂಬುಲೆನ್ಸ್​ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೀಯೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಪರಶುರಾಮ್​ ತಿಳಿಸಿದ್ದಾರೆ.

Three people were killed when an ambulance carrying a body to Tamil Nadu rammed into a truck parked on the national highway in Chitradurga Rural police station limits of the district on Thursday. The deceased have been identified as 72-year-old Kanakamani and 17-year-old Akash. The identity of the driver who also succumbed is yet to be ascertained. The injured — Jnanashekar and Mouli Rajan — have been shifted to the Chitradurga district government hospital.