CM Siddaramaiah: ಸಿದ್ದು ಕಾಲ್ಗುಣದಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ; ಉಡುಪಿ-ಮಂಗಳೂರಲ್ಲಿ ನೀರಿಲ್ಲ, ಶುರುವಾಗಿದೆ ಬೆಂಗಳೂರಿಗೆ ಜಲಕಂಟಕ, ಕಾಗೆ ಹಾರಿಸದೆ, ರಾಜ್ಯಕ್ಕೆ ಉತ್ತರ ಕೊಡಿ ಎಂದು ಬಿಜೆಪಿ ಟಾಂಗ್ 

09-06-23 03:50 pm       Bangalore Correspondent   ಕರ್ನಾಟಕ

ಕರ್ನಾಟಕ ರಾಜ್ಯಕ್ಕೆ ಮುಂಗಾರು ಆಗಮನ ತಡವಾಗಿದೆ ಕಂಡು ಕೇಳರಿಯದ ಬಿಸಿಲಿನ ಕಾರಣ ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ.

ಬೆಂಗಳೂರು, ಜೂನ್ 9: ಕರ್ನಾಟಕ ರಾಜ್ಯಕ್ಕೆ ಮುಂಗಾರು ಆಗಮನ ತಡವಾಗಿದೆ ಕಂಡು ಕೇಳರಿಯದ ಬಿಸಿಲಿನ ಕಾರಣ ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ.

ಅತಿಯಾದ ಬಿಸಿಲು ಇದ್ದ ಕಾರಣ ನೀರು ತ್ವರಿತವಾಗಿ ಖಾಲಿಯಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಬಿಸಿಲು ಹೆಚ್ಚಾಗಿದ್ದು, ನದಿ, ಹೊಳೆಗಳಲ್ಲಿ ಕೂಡ ನೀರಿಲ್ಲದಂತಾಗಿದೆ. ಮಂಗಳೂರು ನಗರದಲ್ಲಿ ನೀರಿನ ಕೊರತೆಯಿಂದಾಗಿ ಶಾಲಾ-ಕಾಲೇಜುಗಳಿಗೂ ರಜೆ ಕೊಡುವಂತ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎನ್ನುವ ಅರ್ಥದಲ್ಲಿ ಬಿಜೆಪಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದು, ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನೆ ಮಾಡಿದೆ.

ಸಿದ್ದುಕಾಲ ಎಂದರೆ ಬರಗಾಲ ಎಂದ ಬಿಜೆಪಿ ;

ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ "ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಸಿದ್ದುಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ, ಮುಂಗಾರು ಓಡಿಹೋಯಿತೇ! ಸಿದ್ದರಾಮಯ್ಯನವರೇ?" ಎಂದು ಪ್ರಶ್ನೆ ಮಾಡಿದೆ.

"ಬರಿದಾಯ್ತು ಘಟಪ್ರಭಾ, ಮಲಪ್ರಭಾ. ಬತ್ತಿ ಹೋಗುತ್ತಿದೆ ಕೆಆರ್‌ಎಸ್. ಶುರುವಾಗಿದೆ ಬೆಂಗಳೂರಿಗೆ ಜಲಕಂಟಕ. ಉಡುಪಿ-ಮಂಗಳೂರಲ್ಲಿ ನೀರಿಲ್ಲ, ಕಾಲೇಜು, ಹೋಟೆಲ್‌ಗಳು ಬಂದ್ !, ಸಿಗಂದೂರಿನ ಹಿನ್ನೀರು ಸಂಪೂರ್ಣ ಖಾಲಿ. ಕೃಷ್ಣ, ತುಂಗೆಯೂ ಬರಿದು. ತಳಕಂಡ ನಾರಾಯಣಪುರ ಬಲದಂಡೆ. ಆದರೂ ತಾವು ಮೌನವಾಗಿದ್ದೀರಿ" ಎಂದು ಸಿದ್ದರಾಮಯ್ಯ ಅವರನ್ನು ಕೇಳಿದೆ.

"ರಾಜ್ಯದಲ್ಲಿ ಕ್ಷಾಮ ಪಕ್ಷದ ಕಾಲ್ಗುಣದಿಂದ ಉಂಟಾದ ಈ ಘನಘೋರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ, ಹೇಗೆ 'ಸಿದ್ದ' ರಾಗಿದ್ದೀರಿ?" ಕಾಗೆ ಹಾರಿಸದೆ, ರಾಜ್ಯಕ್ಕೆ ಉತ್ತರ ಕೊಡಿ ಎಂದು ಕೇಳಿದೆ.

No rains, waterbodies river dried up, BJP tweets says its all becuase of the fate of CM Siddaramaiah.