ಬ್ರೇಕಿಂಗ್ ನ್ಯೂಸ್
09-06-23 07:11 pm HK News Desk ಕರ್ನಾಟಕ
ತುಮಕೂರು, ಜೂನ್ 9: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರು ಸಾಗಾಣಿಕೆ ಮಾಡುತ್ತಿದ್ದವರನ್ನು ಅಡ್ಡಗಟ್ಟಿ ಪೊಲೀಸರು ಹಣ ಪಡೆಯುತ್ತಿದ್ದ ಘಟನೆ ಬೆಳಕಿಗ ಬಂದಿದೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಎಎಸ್‌ಐ ಮೇಲೆ ಲಂಚ ಪಡೆದ ಆರೋಪ ಮಾಡಲಾಗಿದೆ.
ಹೈವೇಗಳಲ್ಲಿ ಸಾಗುವ ಕಂಟೇನರ್ ಗಳನ್ನು ತಡೆದು ಲಂಚಕ್ಕಾಗಿ ಬೇಡಿಕೆ ಇಡುವ ದೃಶ್ಯಗಳನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಪೊಲೀಸರು ಲಂಚ ಸ್ವೀಕರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಎಎಸ್‌ಐ ಚಿದಾನಂದಸ್ವಾಮಿ, ಜೀಪ್ ಚಾಲಕ ಚಿಕ್ಕಹನುಮಯ್ಯ ಎನ್ನುವವರೇ ಹಣ ವಸೂಲಿ ಮಾಡುವಾಗ ಸಿಕ್ಕಿ ಬಿದ್ದಿರುವ ಪೊಲೀಸ್ ಅಧಿಕಾರಿಗಳಾಗಿದ್ದಾರೆ.

ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಈ ವಿಡಿಯೋ ಮಾಡಿದ್ದು, ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಆರಂಭದಲ್ಲಿ ಏನೂ ಆಗಿಲ್ಲ ಎನ್ನುವಂತೆ ಸುಮ್ಮನಿದ್ದ ಪೊಲೀಸರು, ನಂತರ ತಾವು ಪಡೆದಿದ್ದ ಹಣವನ್ನು ಲಾರಿ ಚಾಲಕನಿಗೆ ವಾಪಸ್ ಕೊಟ್ಟಿದ್ದಾರೆ.
ಎಪಿಎಂಸಿ ಮಾರುಕಟ್ಟೆಗಳನ್ನು ಕುರಿ, ಮೇಕೆಗಳನ್ನು ಖರೀದಿ ಮಾಡಿ, ಸಾಗಾಣೆ ಮಾಡುತ್ತಿರುವುದಕ್ಕೆ ಅಗತ್ಯವಾಗಿ ದಾಖಲೆಗಳು ಇದ್ದರೂ ಹಣ ಯಾಕೆ ವಸೂಲಿ ಮಾಡಿದ್ದೀರಾ ಎಂದು ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೊಲೀಸರು, ನಮ್ಮಿಂದ ತಪ್ಪಾಗಿದೆ ಬಿಟ್ಟುಬಿಡಿ ಅಣ್ಣಾ ಎಂದು ಕ್ಷಮೆ ಕೇಳಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಕಾರ್ಯಕರ್ತರು, ನೀವೂ ರೈತರ ಮಕ್ಕಳೇ ಅಲ್ಲವೇ, ದಿನವೆಲ್ಲಾ ಕಷ್ಟಪಟ್ಟು ದುಡಿದರೂ 200 ರುಪಾಯಿ ಸಿಗಲ್ಲ, ನೀವು ನೋಡಿದ್ರೆ ಈ ರೀತಿ ಸುಲಿಗೆ ಮಾಡ್ತೀದ್ದೀರಿ, ಈ ದುಡ್ಡಲ್ಲಿ ನಿಮ್ಮ ಮನೆಗೆ ತಿಂಡಿ ತೆಗೆದುಕೊಂಡು ಹೋಗ್ತೀರಿ, ಅವರು ನಿಮ್ಮ ಶ್ರಮದ ದುಡಿಮೆಯಲ್ಲಿ ತಿನ್ನುತ್ತಿದ್ದಾರ? ಇನ್ನಾದರೂ ಬದಲಾಗಿ ಎಂದು ಪೊಲೀಸರಿಗೆ ಬುದ್ದಿ ಹೇಳಿದ್ದಾರೆ.
ಈ ಹೆದ್ದಾರಿಯಲ್ಲಿ ಲಾರಿಗಳಿಂದ ಪೊಲೀಸರು 200-300 ರುಪಾಯಿ ಲಂಚ ಪಡೆಯುವುದು ಸಾಮಾನ್ಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗೃಹ ಸಚಿವ ಪರಮೇಶ್ವರ ಅವರ ತವರು ಜಿಲ್ಲೆಯಲ್ಲೇ ಈ ರೀತಿ ಲಂಚಾವತಾರ ಇದ್ದರೆ ಬೇರೆ ಜಿಲ್ಲೆಗಳ ಗತಿಯೇನು ಎಂದು ಸಾರ್ವಜನಿರಕು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಬ್ಬರು ಪೊಲೀಸರು ಅಮಾನತು
ಇನ್ನು ಲಂಚ ಪಡೆದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಎಸ್‌ಐ ಮತ್ತು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ತುಮಕೂರು ಜಿಲ್ಲಾ ಎಸ್‌ಪಿ ರಾಹುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
An Assistant Sub-Inspector and a jeep driver were suspended for allegedly extorting money from truck drivers on the National Highway 48 (NH-48) between Tumakuru and Sira on Friday. The action was taken after a few people questioned them when they were caught accepting bribes.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm