Janardhana Reddy: ಅಕ್ರಮ ಆಸ್ತಿ ಗಳಿಕೆ ; ಜನಾರ್ದನ ರೆಡ್ಡಿಗೆ ಶಾಕ್​, ರೆಡ್ಡಿ ದಂಪತಿ ಒಡೆತನದ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ 

13-06-23 01:01 pm       Bangalore Correspondent   ಕರ್ನಾಟಕ

ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಆದೇಶ ಹೊರಡಿಸುವ ಮೂಲಕ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಕ್​ ನೀಡಿದೆ.

ಬೆಂಗಳೂರು, ಜೂನ್ 13: ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಆದೇಶ ಹೊರಡಿಸುವ ಮೂಲಕ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಕ್​ ನೀಡಿದೆ.

ಶಾಸಕ ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿಗೆ ನ್ಯಾಯಾಲಯ ಆಘಾತ ನೀಡಿದ್ದು, ರೆಡ್ಡಿ ದಂಪತಿ ಒಡೆತನದ 2009ರ ಜನವರಿ ನಂತರ ಖರೀದಿ ಮಾಡಿದ ಆಸ್ತಿಗಳನ್ನು ಜಪ್ತಿ ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

Karnataka High Court upholds RGUHS ordinance on MBBS answer scripts |  Education News

Karnataka: Mining czar Gali Janardhana Reddy's wife is richer than him with  ₹250 crore wealth

ಅರುಣಾ ಲಕ್ಷ್ಮೀ ಹೆಸರಲ್ಲಿ 75ಕ್ಕೂ ಅಧಿಕ ಆಸ್ತಿಗಳಿವೆ. ಬೆಂಗಳೂರು, ಬಳ್ಳಾರಿ ಹಾಗೂ ಆಂಧ್ರದಲ್ಲಿ ರೆಡ್ಡಿ ದಂಪತಿ ಆಸ್ತಿ ಮಾಡಿದ್ದಾರೆ. ಇದೀಗ ರೆಡ್ಡಿ ದಂಪತಿ ಒಡೆತನದ ನೂರಕ್ಕೂ ಅಧಿಕ ಆಸ್ತಿಗಳನ್ನು ಜಪ್ತಿ ಮಾಡುವಂತೆ ನ್ಯಾಯಾಧೀಶ ಜಯಂತ್​ ಕುಮಾರ್ ಅವರು ಆದೇಶ ಮಾಡಿದ್ದಾರೆ.

ಸೈಟ್, ಕಟ್ಟಡ, ಖಾಲಿ ಜಮೀನು ಸೇರಿದಂತೆ ನೂರಕ್ಕೂ ಅಧಿಕ ಆಸ್ತಿಗಳಿವೆ. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ವೇಳೆ ಸಿಬಿಐ ಅಧಿಕಾರಿಗಳು ಆಸ್ತಿಗಳನ್ನು ಗುರುತಿಸಿದ್ದರು. ಸಿಬಿಐ ಪರವಾಗಿ ವಿಶೇಷ ಅಭಿಯೋಜಕ ಗೋವಿಂದನ್ ವಾದಿಸಿದ್ದರು.

interpol: CBI makes social media debut ahead of Interpol General Assembly -  The Economic Times

ಸಿಬಿಐ ನ್ಯಾಯಾಲಯದ ಆದೇಶದಂತೆ, ಆಸ್ತಿಯನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡರೆ ಆಸ್ತಿಯ ಮೇಲೆ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಅವರಿಗೆ ಇರುವ ಎಲ್ಲಾ ಕಾನೂನಾತ್ಮಕ ಹಕ್ಕುಗಳಿಗೆ ತಾತ್ಕಾಲಿಕ ತಡೆ ಬೀಳಲಿದೆ. ಪ್ರಕರಣವು ಇತ್ಯರ್ಥವಾಗುವವರೆಗೂ ಆ ಆಸ್ತಿಗಳ ಮೇಲೆ ಅವರಿಬ್ಬರು ತಮ್ಮ ಹಕ್ಕುಗಳನ್ನು ಚಲಾಯಿಸುವಂತಿರುವುದಿಲ್ಲ. ಆಸ್ತಿಗಳೇನೋ ಅವರ ಹೆಸರಿನಲ್ಲೇ ಮುಂದುವರಿಯುತ್ತವೆ. ಆದರೆ, ಮಾಲೀಕರಾಗಿ ಅವುಗಳನ್ನು ಮಾರಾಟ ಮಾಡುವುದು, ಅವುಗಳಿಂದ ಬಾಡಿಗೆ ಇತ್ಯಾದಿ ಲಾಭಗಳನ್ನು ಮಾಡಿಕೊಳ್ಳುವುದು ಇತ್ಯಾದಿ ಯಾವುದೇ ರೀತಿಯ ಪ್ರಯೋಜನಗಳನ್ನು ರೆಡ್ಡಿ ಹಾಗೂ ಅವರ ಕುಟುಂಬ ಪಡೆಯುವ ಹಾಗಿರುವುದಿಲ್ಲ.

ಸಿಬಿಐ ನ್ಯಾಯಾಲಯವು 77 ಆಸ್ತಿಗಳನ್ನು ಮುುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿದೆಯಾದರೂ, ಈ ಆದೇಶದ ವಿರುದ್ಧ ಕಾನೂನು ಹೋರಾಟ ಮಾಡಲು ಜನಾರ್ದನ ರೆಡ್ಡಿಯವರಿಗೆ ಅವಕಾಶವಿದೆ ಎಂದು ಮೂಲಗಳು ಹೇಳಿವೆ. ಸಿಬಿಐ ನ್ಯಾಯಾಲಯದಲ್ಲೇ ಈ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಹಾಕಬಹುದು, ಇಲ್ಲವೇ ಅವರು ಸಿಬಿಐ ನ್ಯಾಯಾಲಯಕ್ಕಿಂತ ಉನ್ನತ ಮಟ್ಟದ ನ್ಯಾಯಾಲಯಗಳಲ್ಲಿ ಇದನ್ನು ಪ್ರಶ್ನೆ ಮಾಡಬಹುದಾಗಿದೆ.

In a setback to mining baron-turned-politician Gali Janardhana Reddy, a CBI court on Tuesday ordered the seizure of his properties and also those in the name of his wife Gali Aruna Laxmi until criminal cases against them are disposed off. The CBI had submitted a petition before the court seeking seizure of 124 properties belonging to the couple.