'ಹೊಸಬರಿಗೆ ಟಿಕೆಟ್' ಐಡಿಯಾ ಕೊಟ್ಟವರನ್ನು ನೇಣಿಗೆ ಹಾಕಿ, ಕಾಲು ಕಡಿಯಿರಿ ಎಂದ ಬಿಜೆಪಿ ಸಂಸದ ಜಿಗಜಿಣಗಿ ; ನೇಣುಗಂಬ ಏರೋರು ಯಾರು ಎಂದು ಕಾಲೆಳೆದ ಕಾಂಗ್ರೆಸ್ 

14-06-23 04:00 pm       Bangalore Correspondent   ಕರ್ನಾಟಕ

ವಿಧಾನಸಭೆ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್‌ ಕೊಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಯಾರು ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರನ್ನು ನೇಣಿಗೆ ಬೇಕಾದರೂ ಹಾಕಿ, ಕಾಲನ್ನಾದರೂ ಕಡಿಯಿರಿ ಎಂದು ಹೇಳಿರುವ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಮಾತಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.

ಬೆಂಗಳೂರು, ಜೂನ್ 14: ವಿಧಾನಸಭೆ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್‌ ಕೊಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಯಾರು ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರನ್ನು ನೇಣಿಗೆ ಬೇಕಾದರೂ ಹಾಕಿ, ಕಾಲನ್ನಾದರೂ ಕಡಿಯಿರಿ ಎಂದು ಹೇಳಿರುವ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಮಾತಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ. ಈಗ ಯಾರನ್ನು ನೇಣಿಗೆ ಹಾಕುವಿರಿ? ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನೆ ಮಾಡಿದೆ. 'ಅಮಿತ್ ಷಾರವರನ್ನೋ? ಬಿ.ಎಲ್ ಸಂತೋಷರನ್ನೋ ? ಪ್ರಹ್ಲಾದ್ ಜೋಶಿಯವರನ್ನೋ ? ಮೋದಿಯವರನ್ನೋ? ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ?' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Yediyurappa says no to cabinet-rank perks offered by Bommai govt |  Bengaluru - Hindustan Times

ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ, ಬೊಮ್ಮಾಯಿ ಹಾಗೂ  ಬಿ.ಎಸ್ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿರುವ ಪ್ರತಾಪ್ ಸಿಂಹ ಹಾಗೂ ಸಿ.ಟಿ ರವಿ  ಅವರ ಹೇಳಿಕೆಗಳ ಹಿಂದಿರುವುದು ಮತ್ತದೇ ಜೋಶಿ, ಸಂತೋಷ್ ಜೋಡಿ. ಸೋಲಿನ ನಂತರ ನಾಪತ್ತೆಯಾಗಿರುವ ಈ ಜೋಡಿ ತೆರೆಯ ಹಿಂದೆ ನಿಂತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. 

CT Ravi: Karnataka's Controversial Hindutva Man is Guiding BJP in Tamil Nadu

BJP MP Pratap Simha hits out at Oppn on Bengaluru-Mysuru expressway toll  row | Bengaluru - Hindustan Times

ರಿಟೈರ್ಡ್ ಹರ್ಟ್ ಆಗಿರುವ ಸಿಟಿ ರವಿ  ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ, ಅವರ ಅರಣ್ಯ ರೋದನಕ್ಕೆ  ಪ್ರತಾಪ್ ಸಿಂಹ ದನಿ ಜೋಡಿಸಿದ್ದಾರೆ. ಇಬ್ಬರಿಗೂ ದಮ್ಮು ತಾಕತ್ತು ಇದ್ದರೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ. ಅಂದಹಾಗೆ ಬಿಜೆಪಿಯೊಂದಿಗೆ ಅಡ್ಜಸ್ಟ್ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ ಸವರಿಕೊಂಡು ನಗುತ್ತಿದ್ದಾರಂತೆ ಅಲ್ಲವೇ ಎಂದು ಟ್ವೀಟ್ ಮಾಡಿದೆ.

ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ.

ಈಗ ಯಾರನ್ನು ನೇಣಿಗೆ ಹಾಕುವಿರಿ @BJP4Karnataka?

ಅಮಿತ್ ಷಾರವರನ್ನೋ?
ಬಿ ಎಲ್ ಸಂತೋಷರನ್ನೊ?
ಪ್ರಹ್ಲಾದ್ ಜೋಶಿಯವರನ್ನೋ ?
ಮೋದಿಯವರನ್ನೋ?
ಬೊಮ್ಮಾಯಿಯವರನ್ನೋ?

ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು?
ಬಿಜೆಪಿಯಿಂದ ಉತ್ತರ… pic.twitter.com/siPebUNZia

— Karnataka Congress (@INCKarnataka) June 14, 2023

Vijayapura MP Ramesh Jigajinagi wants BJP to hang leaders who denied tickets to Seniors, Congress slams on Twitter asking who is the first leader to be hanged. A statement by Ramesh Jigajinagi, MP from Vijayapura, implying that some of BJP leaders were responsible for the party’s debacle in the Karnataka Assembly elections, has created a controversy