135 ಸೀಟುಗಳ ಅಮಲಲ್ಲಿ ಕಾಂಗ್ರೆಸ್ ಹುಚ್ಚಾಟ ಆಡುತ್ತಿದೆ ; ಖರ್ಗೆ, ಪರಮೇಶ್ವರ್ ಸೋಲಿಸಿದ್ದು, ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡಿದ್ದು ಯಾರು? ಜೆಡಿಎಸ್ ಪ್ರಶ್ನೆ 

14-06-23 07:33 pm       Bangalore Correspondent   ಕರ್ನಾಟಕ

ಕಾಂಗ್ರೆಸ್ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಟ್ವಿಟರ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದು ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? 135 ಸೀಟು ಪಡೆದಿದ್ದೇವೆಂದು ಕಾಂಗ್ರೆಸ್ ಅಮಲಿನಲ್ಲಿ ತೇಲುತ್ತಿದೆ ಎಂದು ಮೊನಚು ಮಾತುಗಳಿಂದ ತಿವಿದಿದ್ದಾರೆ. 

ಬೆಂಗಳೂರು, ಜೂನ್ 14:  ಕಾಂಗ್ರೆಸ್ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಟ್ವಿಟರ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದು ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? 135 ಸೀಟು ಪಡೆದಿದ್ದೇವೆಂದು ಕಾಂಗ್ರೆಸ್ ಅಮಲಿನಲ್ಲಿ ತೇಲುತ್ತಿದೆ ಎಂದು ಮೊನಚು ಮಾತುಗಳಿಂದ ತಿವಿದಿದ್ದಾರೆ. 

ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಖರ್ಗೆ, ಪರಮೇಶ್ವರ್ ಸೋಲಿಸಲು ಹೂಡಿದ ತಂತ್ರ, ಆಡಿದ ಸದಾರಮೆ ಆಟಗಳ ಬಗ್ಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಧೈರ್ಯ ಕಾಂಗ್ರೆಸ್ ಗೆ ಇದೆಯೇ ಎಂದು ಪ್ರಶ್ನೆ ಮಾಡಿದೆ.

135 ಸೀಟುಗಳ ಅಮಲಿನಲ್ಲಿ ತೇಲುತ್ತಿರುವ ಕಾಂಗ್ರೆಸ್ ಪಕ್ಷ, 'ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು'  ಎಂಬಂತೆ ಹುಚ್ಚಾಟ ಆಡುತ್ತಿದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಕಂಡ ಅತಿ ಅಪಮಾನಕರ ಸೋಲನ್ನು ಮರೆತು, ಈಗ ಜಗತ್ತನ್ನೇ ಗೆದ್ದೆ ಎಂದು ಗದೆ ತಿರುಗಿಸುತ್ತಿರುವುದು ವಿಕೃತಿಯ ಪರಮಾವಧಿ. ಜಾತಿ, ಧರ್ಮ ಒಡೆದು, ಮನಸ್ಸುಗಳ ನಡುವೆ ದ್ವೇಷದ ಬೆಂಕಿ ಬಿತ್ತಿ, ಪರಸ್ಪರ ವ್ಯವಹಾರದ ಪರಿಣಾಮವೇ ಈ 135 ಸೀಟು. ಶಿಗ್ಗಾಂವಿ, ವರುಣಾ, ಶಿಕಾರಿಪುರ, ಚಿಕ್ಕಮಗಳೂರು, ಕನಕಪುರ ಕ್ಷೇತ್ರ ಸೇರಿ ಆಯ್ದ ಜಿಲ್ಲೆಗಳಲ್ಲಿ ನಡೆದ ಅಡ್ಜಸ್ಟ್ ಮೆಂಟ್ ಆಟ ಎರಡೂ ರಾಷ್ಟ್ರೀಯ ಪಕ್ಷಗಳ ನೀತಿಗೆಟ್ಟ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದು ಕಿಡಿಕಾರಿದೆ.

We didn't work like PM Modi, says BJP leader CT Ravi on Karnataka poll loss  | Bengaluru - Hindustan Times

Priyank Kharge male or female? asks MP Pratap Simha

ಅಲ್ಲದೆ, ಬಿಜೆಪಿಯ ಸಿಟಿ ರವಿ, ಸಂಸದ ಪ್ರತಾಪ್ ಸಿಂಹ, ಡಾ.ಜಿ ಪರಮೇಶ್ವರ್ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವ ದಮ್ಮು, ತಾಕತ್ತು ಮುಖ ಮೂತಿಗೆಲ್ಲ ಒಳ ರಾಜಕೀಯದ ಗಲೀಜು ಮೆತ್ತಿಕೊಂಡ ಎರಡೂ ಪಕ್ಷಗಳ ನಾಯಕರಿಗೆ ಇದೆಯಾ? ಹಗಲಲ್ಲಿ ಹಾರಾಟ, ಕತ್ತಲಾದರೆ ಕಳ್ಳಾಟ!! ಕಾರ್ಯಕರ್ತರೇ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಮಂಡ್ಯ ಜಿಲ್ಲೆ ಒಂದರಲ್ಲಿಯೇ ಪ್ರತಿ ಕ್ಷೇತ್ರಕ್ಕೆ ಕಮ್ಮಿ ಎಂದರೂ 10-20 ಕೋಟಿ ವ್ಯಯಿಸಿ ಮತ ವಿಭಜನೆ ಮಾಡಿದ್ದು ಯಾರು? ಒಬ್ಬರನ್ನು ಒಬ್ಬರು ಮೀರಿಸುವಂತೆ ಹಣದ ಹೊಳೆ ಹರಿಸಿದ್ದು ಯಾರು? ಪ್ರಾದೇಶಿಕ ಪಕ್ಷದ ಕತ್ತು ಕೊಯ್ಯಲು ನೀಚ, ನಿಕೃಷ್ಟ ರಾಜಕೀಯ ಮಾಡಿದ್ದು ಯಾರು? ಈಗ ನೀವೇ ಸತ್ಯ ಹೇಳುತ್ತಿದ್ದೀರಿ, ಸತ್ಯದ ಕತ್ತು ಕೊಯ್ಯುವುದು ಸಾಧ್ಯವೇ? ಎಂದು ಜೆಡಿಎಸ್ ಕಿಡಿಕಾರಿದೆ.

MBBS Admission Scam: Former Dy CM G Parameshwara's Family-Run Colleges  Among 4 Institutions That 'Sold' Most Seats

Kharge speaks to Opposition leaders to boost unity | Latest News India -  Hindustan Times

ಅಂತೆಯೇ, 'ಅಡ್ಜಸ್ಟ್ ಮೆಂಟ್ ಇಲ್ಲದಿದ್ದರೆ ಕಳೆದ ಬಾರಿ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿಯಲ್ಲಿ ಸೋತಿದ್ದೇಕೆ? ದಲಿತೋದ್ಧಾರ, ಆಹಿಂದೋದ್ಧಾರ ಎನ್ನುವರು, ಈ ಇಬ್ಬರನ್ನು ಸೋಲಿಸಲು ಹೂಡಿದ ತಂತ್ರಗಳ ಬಗ್ಗೆ, ಆಡಿದ ಸದಾರಮೆ ಆಟಗಳ ಬಗ್ಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಧೈರ್ಯ ಈ ಕಾಂಗ್ರೆಸ್ ಗೆ ಇದೆಯಾ? ಆಪರೇಶನ್ ಕಮಲ; ಇಬ್ಬರು ನಾಯಕರ ಜಂಟಿ ಆಪರೇಶನ್ ಎನ್ನುವುದು ಯಾರಿಗೆ ಗೊತ್ತಿಲ್ಲ? ಇದರ ಅಸಲಿ ಕಥೆ ಗೊತ್ತಿಲ್ಲದಷ್ಟು ಮುಗ್ಧರಾ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು? ಆ ಹೇಸಿಗೆಯಲ್ಲಿ ಬಿದ್ದು ಹೊರಳುತ್ತಿರುವ ಕಾಂಗ್ರೆಸ್ ಆ ಗಲೀಜನ್ನೆಲ್ಲ ಮುಖಕ್ಕೆ ಮೆತ್ತಿಕೊಂಡು ಇತರರಿಗೂ ಮೆತ್ತಲು ಹವಣಿಸುತ್ತಿದೆ! ಛೇ, ಅಸಹ್ಯ!! ವಿಕೃತಿ ವಿನಾಶಕ್ಕೆ ದಾರಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

HD Kumaraswamy Slams Congress government over adjustment politics, Karghe planned for Parmeshwars defeat.