‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಿದ ಸಿಎಂ

15-06-23 01:20 pm       Bangalore Correspondent   ಕರ್ನಾಟಕ

ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು, ಜೂ 15: ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಕಥೆಯೊಂದನ್ನು ಆಯ್ದು ನಿರ್ದೇಶಕ ಶಶಾಂಕ್ ಸೋಗಲ್ ಅವರು ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ  ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾವು ನೋಡುಗರ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.

Dare Devil Mustafa' movie...successful performance in second week | Dare  Devil Mustafa : ಕನ್ನಡಿಗರ ಮನ ಗೆದ್ದ 'ಡೇರ್ ಡೆವಿಲ್ ಮುಸ್ತಾಫಾ'...ಎರಡನೇ ವಾರ ಸಕ್ಸಸ್  ಫುಲ್ ಪ್ರದರ್ಶನ!| Entertainment News in Kannada

ಚಿತ್ರದ ತಂಡವು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ತೆರಿಗೆ ವಿನಾಯತಿಗೆ ಮನವಿ ಮಾಡಿತ್ತು. ಕೋಮುಸಾಮರಸ್ಯ ಮತ್ತು ಭಾವೈಕ್ಯತೆಯ ಸಂದೇಶ ಸಾರುವ ಸಿನಿಮಾವನ್ನು ಇನ್ನಷ್ಟು ಜನರು ಮತ್ತು ಶಾಲಾ ಮಕ್ಕಳು ನೋಡಲು ಸಹಕಾರಿಯಾಗುವಂತೆ ಮಾಡಲು ತೆರಿಗೆ ವಿನಾಯತಿ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಹಮತ ಸೂಚಿಸಿದ್ದಾರೆ.

ಚಿತ್ರದಲ್ಲಿ ಆಶಿತ್, ಪೂರ್ಣಚಂದ್ರ ತೇಜಸ್ವಿ, ಆದಿತ್ಯ ಅಶ್ರಿ ಮುಂತಾದ ನಟರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

CM Siddaramaiah declares Daredevil Musthafa Kannada movie tax free in Karnataka. Shashank Sohgal's Kannada film Daredevil Musthafa released in theatres on May 18. The film features Aashith, Mysore Anand, and Aditya Ashree in major roles. It is based on a screenplay by Puranchandra Tejaswi, a prominent novelist.