Pratap Simha: ಪ್ರವೀಣ್‌ ನೆಟ್ಟಾರು, ಹರ್ಷ ಕೊಲೆಯಾದಾಗ ಏನ್ ಕ್ರಮ ತಗೊಂಡ್ರು ; ಯಡಿಯೂರಪ್ಪ ನಂತರ ಬಂದವರು ಮಾಡಿದ್ದೇನು? ಬೊಮ್ಮಾಯಿ ಹೆಸರೆತ್ತದೆ ಪ್ರತಾಪ್‌ ಸಿಂಹ ಕೆಂಡಾಮಂಡಲ 

17-06-23 01:52 pm       HK News Desk   ಕರ್ನಾಟಕ

ಯಡಿಯೂರಪ್ಪ ಪ್ರಯತ್ನದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಅವರ ನಂತರ ಬಂದವರು ಮಾಡಿದ್ದೇನು ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.

ಮೈಸೂರು, ಜೂ 17:  ಯಡಿಯೂರಪ್ಪ ಪ್ರಯತ್ನದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಅವರ ನಂತರ ಬಂದವರು ಮಾಡಿದ್ದೇನು ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪ್ರವಾಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಒಬ್ಬರೇ ಪರಿಸ್ಥಿತಿ ನಿಭಾಯಿಸಿದರು. ಕೋವಿಡ್‌ ವೇಳೆ ಜನರ ಪ್ರಾಣ ಉಳಿಸಲು ಇಡೀ ಸರ್ಕಾರ ಪ್ರಯತ್ನಿಸಿತು. ಕಷ್ಟದ ಸಂದರ್ಭಗಳಲ್ಲಿ ಯಡಿಯೂರಪ್ಪ ರಾಜ್ಯ ಕಾಪಾಡಿದ್ದಾರೆ. ಆದರೆ ಅವರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಎಂದು ಬೊಮ್ಮಾಯಿ ಹೆಸರೆತ್ತದೆ ಪ್ರಶ್ನಿಸಿದರು.

Karnataka assembly elections: In U-turn, BS Yediyurappa says son won't  contest from Varuna | Bengaluru News - Times of India

ಯಡಿಯೂರಪ್ಪ ನಂತರ ಬಂದವರು ಕಾರ್ಯಕರ್ತರ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಹಿಂದೂ ಮುಖಂಡರಾದ ಪ್ರವೀಣ್‌ ನೆಟ್ಟಾರು, ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಉತ್ಸಾಹ ಕಾಣಿಸಲಿಲ್ಲ ಎಂದ ಪ್ರತಾಪ್‌ ಸಿಂಹ ನಾನು ಜನರ ಆಕ್ರೋಶ, ಕಾರ್ಯಕರ್ತರ ನೋವಿಗೆ ಧ್ವನಿಯಾಗಿದ್ದೇನೆಯೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು.

MP Pratap Simha lacks political maturity, says Karnataka CM Siddaramaiah |  Bengaluru - Hindustan Times

ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ಗ್ಯಾರಂಟಿಗೆ ಬೇಕಾದ 59 ಸಾವಿರ ಕೋಟಿ ಹಣ ಎಲ್ಲಿಂದ ತರುತ್ತೀರಾ? ನನ್ನನ್ನು ಎಳಸು ಎಂದರೂ ಬೇಸರವಿಲ್ಲ, ನನ್ನ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರೆ ಸಾಕು. ಹಣಕಾಸು ಬಗ್ಗೆ ತಿಳಿದ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದ್ರಿ? ನನ್ನನ್ನ ಚೈಲ್ಡ್ ಅಂತಾನೆ ಕರೆಯಿರಿ ಬೇಜಾರು ಇಲ್ಲ, ಆದರೆ ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡುವುದು ಹೇಗೆ ತಿಳಿಸಿ?” ಎಂದು ಆಗ್ರಹಿಸಿದರು.

If a Dalit is not made deputy CM, it will spell trouble for Congress, warns  Parameshwara | Bangalore News, The Indian Express

ಜಿ. ಪರಮೇಶ್ವರ್‌ರನ್ನು ಮುಗಿಸಿ ಸಿಎಂ ಆದರಲ್ಲ. ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ. ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಹಕರಿಸಿದ ಹೆಚ್ ಡಿ ದೇವೇಗೌಡರನ್ನ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ ಅದು ನನಗೆ ಬೇಡ” ಎಂದು ಲೇವಡಿ ಮಾಡಿದ್ದಾರೆ.

PM Modi To Address Sold-Out Diaspora Event In Washington

BJP Questions Surjewala's Presence In meeting Of DCM Shivakumar And State  Officials

Not averse to investment from Adani Group: Karnataka industries minister MB  Patil | Bangalore News, The Indian Express

ಅಕ್ಕಿ ಕೊಡುವ ಘೋಷಣೆ ಮಾಡುವ ಮುನ್ನ ಮೋದಿ ಅವರನ್ನು ಕೇಳಿದಿರಾ? ಕಾಂಗ್ರೆಸ್ ಅಧಿಕಾರಕ್ಕೆ ತರಲು ಡಿಕೆಶಿ ಪ್ರಮುಖ ಪಾತ್ರ ವಹಿಸಿದರು. ಆದರೆ ಈಗ ಡಿಕೆಶಿ ವಿರುದ್ಧ ಎಂ ಬಿ ಪಾಟೀಲ್ ರನ್ನು ಛೂ ಬಿಟ್ಟಿದ್ದೀರಿ. ಇದನ್ನೆಲ್ಲಾ ಮೆಚ್ಯೂರಿಟಿ ಎನ್ನುವುದಾದರೆ ಈ ರೀತಿಯ ಪ್ರಬುದ್ಧತೆ ನಿಮ್ಮಿಂದ ನನಗೆ ಬೇಡ” ಎಂದರು.

Mysuru BJP MP Pratap Simha indirectly slammed former Karnataka CM Basavaraj bommai for his governance. What measures did bommai take in the murder of Praveen nettaru or harsha murder in Shivamogga.