ಶಿವಮೊಗ್ಗ ; ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿ ಹಲ್ಲೆ , ಮನನೊಂದ ಯುವಕ ಆತ್ಮಹತ್ಯೆ, ಪೊಲೀಸರ ವಿರುದ್ಧ ಗರ್ಭಿಣಿ ಹೆಂಡತಿಯಿಂದ ದೂರು !

17-06-23 08:00 pm       HK News Desk   ಕರ್ನಾಟಕ

ಪೊಲೀಸರ ಹಲ್ಲೆಯಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಶಿವಮೊಗ್ಗ, ಜೂ.17: ಪೊಲೀಸರ ಹಲ್ಲೆಯಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಪೊಲೀಸರು ಮಂಜುನಾಥ್ (28) ಠಾಣೆಗೆ ಕರೆಯಿಸಿ ಹಲ್ಲೆ ನಡೆಸಿರುವುದು ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರ ವಿರುದ್ಧ ಹೆಂಡತಿ ಕಮಲಾಕ್ಷಿ ದೂರು ನೀಡಿದ್ದಾರೆ‌.

ಜೂನ್ 11 ರಂದು ಮಂಜುನಾಥ್ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಎದುರು ನಿಂತಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ, ಮಂಜುನಾಥ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯಾವ ಕಾರಣಕ್ಕೆ ಥಳಿಸಿದ್ದರು ಎಂಬುದು ತಿಳಿದುಬಂದಿಲ್ಲ. ಆದರೆ ಕೈ, ಕಾಲು, ಕಪಾಳ, ಬೆನ್ನಿಗೆ ಥಳಿಸಿದ ಸಿಬ್ಬಂದಿ ಆನಂತರ ಮಂಜುನಾಥ್​ ನನ್ನ ಸ್ಟೇಷನ್​ ಗೆ ಕರೆದೊಯ್ದಿದ್ದಾರೆ. ಸಂಜೆ ಹೊತ್ತಿಗೆ ಆತನನ್ನ ಸಹೋದರ ಬಿಡಿಸಿಕೊಂಡು ಮನೆಗೆ ಬಂದಿದ್ದಾರೆ. ಆದರೆ ಈ ಘಟನೆ ನಂತರ ಮಂಜುನಾಥ್​ ಖಿನ್ನತೆಗೆ ಒಳ್ಳಗಾಗಿದ್ರು. ಯಾರೊಂದಿಗೂ ಮಾತನಾಡದೇ ಮಂಜುನಾಥ್​ ಜೂನ್ 15 ರ ರಾತ್ರಿ ತನ್ನ ಪತ್ನಿಗೆ ಮನೆಮುಂದಿನ  ಕೋಣೆಯಲ್ಲಿ ಮಲಗಲು ತಿಳಿಸಿದ್ದಾನೆ. ಆನಂತರ ಹಾಲ್ ​ನಲ್ಲಿ ನೇಣುಬಿಗಿದುಕೊಂಡಿದ್ದಾನೆ. ಜೂನ್ 16 ರ ಬೆಳಗ್ಗೆ ಪತ್ನಿ ಕೋಣೆಯಿಂದ ಹೊರಬಂದಾಗ ವಿಚಾರ ಗೊತ್ತಾಗಿದೆ.

ಮಂಜುನಾಥ್​ಗೆ 2 ವರ್ಷದ ಮಗು ಇದ್ದು, ಪತ್ನಿ ಕಮಲಾಕ್ಷಿ ಗರ್ಭಿಣಿಯಾಗಿದ್ದಾರೆ. ತನ್ನ ಪತಿ ಸಾವಿಗೆ ಪೊಲೀಸರು ನಡೆಸಿದ ಹಲ್ಲೆಯೇ ಕಾರಣ ಎಂದು ಪತ್ನಿ ಕಮಲಾಕ್ಷಿ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Shivamogga 28 year old Man commits suicide, pregnant wife allege of Police torture. The deceased has been identified as Manjunath.