ಪುಕ್ಸಟ್ಟೆ ರೇಷನ್ ಕೊಡೋಕ್ಕೆ ಕೇಂದ್ರ ಸರ್ಕಾರಕ್ಕೆ ಆಗೋಲ್ಲ ; ನಿಮ್ಮ ಕುರ್ಚಿಗಾಗಿ ಉಚಿತ ಅಕ್ಕಿ ಕೊಟ್ರೆ ಹೇಗೆ ? ಕಾಂಗ್ರೆಸ್ ಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ತಿರುಗೇಟು

19-06-23 07:01 pm       HK News Desk   ಕರ್ನಾಟಕ

ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ಪೂರೈಕೆ ಮಾಡುವುದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಆರೋಪಕ್ಕೆ ಮಾಡಿತ್ತು.

ಚಿತ್ರದುರ್ಗ, ಜೂ 19: ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ಪೂರೈಕೆ ಮಾಡುವುದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಆರೋಪಕ್ಕೆ ಮಾಡಿತ್ತು. ಈ ಸಂಬಂಧ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು, ರಾಜ್ಯಗಳು ಕೇಳಿದಂತೆ ಪುಗಸಟ್ಟೆ ರೇಷನ್ ಕೊಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಆಗುವುದಿಲ್ಲ. ಎಫ್‌ಸಿಐಗೆ ರೇಷನ್ ಕೊಡುವ ಕುರಿತು ತನ್ನದೇ ಆದ ಮಾನದಂಡಗಳಿವೆ ಎಂದು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ 140 ಕೋಟಿ ಜನರ ಭವಿಷ್ಯ ನೋಡಬೇಕಿದೆ. ನಿಮ್ಮ ಕುರ್ಚಿಗಾಗಿ, ನಿಮ್ಮ ತೆವಲಿಗಾಗಿ ಉಚಿತವಾಗಿ ಕೊಟ್ಟರೆ ಹೇಗೆ? ಇದು ನಿಮಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Five Congress 'guarantees' in Karnataka may cost state exchequer Rs 50,000  crore

ಬಿಜೆಪಿ ಸರ್ಕಾರ ಯಾವ ಕಾಲದಲ್ಲಿಯೂ ಉಚಿತವಾಗಿ ಯೋಜನೆ ನೀಡುತ್ತೇವೆ ಎಂದು ಹೇಳಿಲ್ಲ. ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಬಗ್ಗೆ ಹಾಗೂ ಪ್ರಧಾನಿ ಮೋದಿ ಬಗ್ಗೆ ಮಾತನಾಡುವುದನ್ನು ಮೊದಲು ಕೈಬಿಡಬೇಕು. ಬದಲಾಗಿ ನೀವು ರಾಜ್ಯದ ಜನರಿಗೆ ಕೊಟ್ಟಿರುವ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ನಾರಾಯಣಸ್ವಾಮಿ ಹೇಳಿದರು.

ನಾನು ಒಬ್ಬ ಬಿಜೆಪಿ ಕಾರ್ಯಕರ್ತ ಎನ್ನುವುದಕ್ಕಿಂತ ದೇಶಭಕ್ತ, ನಮಗೆ ಎಲ್ಲ ಸಮಸ್ಯೆಗಳನ್ನು ಎದುರಿಸಿ ದೇಶ ಕಟ್ಟುವ ಶಕ್ತಿ ಇದೆ, ಕಟ್ಟಿ ತೋರಿಸುತ್ತೇವೆ ಎಂದರು. ಇನ್ನು ಬಿಜೆಪಿ ಸರ್ಕಾರ ಬ್ರಿಟೀಷ್ ಆಡಳಿತ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ,"ಮಧು ಬಂಗಾರಪ್ಪ ಅವರು ರಾಜಕೀಯದ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಯಬೇಕಿದೆ. ಮಾತನಾಡುವ ಮುನ್ನ ಹಿರಿಯರ ಮಾರ್ಗದರ್ಶನ ಪಡೆದು ಮಾತನಾಡಬೇಕು. ಇಲ್ಲವಾದರೆ ಈ ರಾಜಕೀಯ ವ್ಯವಸ್ಥೆಯಲ್ಲಿ ನೀವು ಮುಳುಗುತ್ತೀರಿ ಎಂದು ಟಾಂಗ್ ನೀಡಿದರು.

Minister Narayanaswamy slams Congress over Anna Bhagya scheme, says centre cannot provide it freely. BJP or Modi has never gauranteed of providing free rice.