ಬ್ರೇಕಿಂಗ್ ನ್ಯೂಸ್
23-06-23 02:25 pm HK News Desk ಕರ್ನಾಟಕ
ಚಿಕ್ಕಬಳ್ಳಾಪುರ, ಜೂನ್ 23: ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ ಪಾಟೀಲರ ಬಗ್ಗೆ ಪ್ರತಾಪ್ ಸಿಂಹ ಅವರು ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಪ್ರತಾಪ ಸಿಂಹ ಅವರೇ ಬಾಯ್ ಮುಚ್ಕೊಂಡ್ ಇರ್ಬೇಕು ಅಷ್ಟೇ, ನಮಗೂ ಬರುತ್ತೆ ಮಾತನಾಡೋಕೆ ಬರುತ್ತೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ತಾಕತ್ತಿದ್ದರೆ ಬನ್ನಿ ಬಹಿರಂಗ ಚರ್ಚೆಗೆ, ನಿಮ್ಮ ವೈಯಕ್ತಿಕ ವರ್ಚಸ್ಸಿನಿಂದ ನೀವು ಗೆಲ್ಲೋಕೆ ಆಗಿದ್ದೀಯೇನ್ರಿ ಎಂದು ಪ್ರಶ್ನಿಸಿದರಲ್ಲದೇ, ಮಾನ್ಯ ಪ್ರಧಾನಿಗಳ ಹೆಸರು ಹೇಳಿಕೊಂಡೇ ಗೆದ್ದಿದ್ದೀರಾ. ನಿಮ್ಮ ವೈಯಕ್ತಿಕ ವರ್ಚಸ್ಸು ಏನು, ನಿಮ್ಮ ಸಾಧನೆ ಏನ್ ಹೇಳಿ. ನಾನು ನಮ್ಮ ಸಿದ್ದರಾಮಯ್ಯ ಸಾಹೇಬ್ರ ಸಾಧನೆ ಬಗ್ಗೆ ನಾನ್ ಹೇಳ್ತೀನಿ. ತಾಕತ್ತಿದ್ರೆ ಬಹಿರಂಗ ಸಭೆಗೆ ಬನ್ನಿ ಎಂದು ಸಂಸದ ಪ್ರತಾಪ್ ಸಿಂಹಗೆ ಸವಾಲು ಎಸೆದರು.
ಮುಂದುವರಿದು ಮಾತನಾಡಿದ ಪ್ರದೀಪ್ ಈಶ್ವರ್, ಮಾನ್ಯ ಪ್ರತಾಪ್ ಸಿಂಹ ಅವರೇ, ನೀವು ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತಿದ್ರಿ. ಸಂಸದರಾದ ಮೇಲೆ ಓದೋದು ಬಿಟ್ಟು ಬಿಟ್ಟಿದ್ದೀರಿ. ಫುಡ್ ಕಾರ್ಪೊರೇಷನ್ ಇಂಡಿಯಾ ಒಂದು ಗೋಡನ್ ಇದ್ದಂಗೆ ಅಂತ ಹೇಳ್ತೀರಲ್ಲ. ಈ ಸಂಸದರಿಗೆ ತಲೆಗಿಲೆ ಕೆಟ್ಟಿದ್ಯಾ. ಫುಡ್ ಕಾರ್ಪೊರೇಷನ್ ಇಂಡಿಯಾಗೆ ಒಂದು ಇತಿಹಾಸ ಇದೆ, ಅದಕ್ಕೆ ದೊಡ್ಡ ವ್ಯವಸ್ಥೆ ಇದೆ. ಅಲ್ಲಿ ಶೇಖರಣೆಯಾಗುವ ದವಸಧಾನ್ಯ ಬಡವರಿಗೆ ತಲುಪಿಸಬೇಕಾಗಿರೋದು ಅದರ ಜವಾಬ್ದಾರಿ. ಅದೇ ರೀತಿಯಾಗಿ ಫುಡ್ ಕಾರ್ಪೊರೇಷನ್ ಇಂಡಿಯಾ ಅಕ್ಕಿ ಕೊಡ್ತೀವಿ ಅಂತ ಹೇಳಿತ್ತು. ಅದಕ್ಕೆ ಹಣ ಕಟ್ಟಿ ಅಂತ ಹೇಳಿತ್ತು. ಇದನ್ನು ಗೋಡ ಗೋಡನ್ನಾ ಅಂತ ಕರಿತರಲ್ಲ ಸಂಸದರು. ಇಂಥವರೆಲ್ಲ ಸಂಸದರು ಆಗ್ತಾರೆ ಅಲ್ವಾ ಅದೇ ಬೇಜಾರು ನನಗೆ ಎಂದು ಹೇಳಿದರು.
ಇನ್ನು ಬಿಜೆಪಿ ಸಂಸದ ಮುನಿಸ್ವಾಮಿ ಒಂದು ತರ ಚೈಲ್ಡ್ ಆರ್ಟಿಸ್ಟ್ ಇದ್ದಂಗೆ ಎಂದು ವ್ಯಂಗ್ಯವಾಡಿದ ಶಾಸಕ ಪ್ರದೀಪ್ ಈಶ್ವರ್, ಮುನಿಸ್ವಾಮಿ ಅಲ್ಲ ಅವರು ‘ಮನಿ’ ಸ್ವಾಮಿ. ನಾನು ಅವರನ್ನು ಮನಿಸ್ವಾಮಿ ಅನ್ಕೊಂಡೆ. ಚಿಂತಾಮಣಿ ಹಾಗೂ ಕೋಲಾರದ ಪ್ರಭಾವಿ ನಾಯಕರು ಮನಸ್ಸು ಮಾಡಲಿಲ್ಲ ಅಂದಿದ್ರೆ ಹೇಗೆ ಎಂಪಿ ಆಗ್ತಿದ್ರು. ಅವರು ಒಂದ್ತಾರ ಚೈಲ್ಡ್ ಆರ್ಟಿಸ್ಟ್ ಬಹಳ ಬೇಜಾರಾಗುತ್ತೆ. ಒಬ್ಬ ಎಂಪಿ ಹೇಗೆ ಇರಬೇಕು ಅನ್ನುವುದು ಗೊತ್ತಿಲ್ಲ ಅವರಿಗೆ. ಮುನಿಶಾಮಣ್ಣ ನನಗೆ 5 ವರ್ಷಕ್ಕೆ ಇರೋದು ಹಬ್ಬ, ನಿಮಗೆ ಮುಂದಿನ ವರ್ಷವೇ ಇದೆ ಹಬ್ಬ ಎಂದು ವಾಗ್ದಾಳಿ ನಡೆಸಿದರು
ಇನ್ನು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಇದೆ ಎಂದು ಅಚ್ಚರಿಯ ಹೇಳಿಕೆ ನೀಡಿದ ಶಾಸಕ ಪ್ರದೀಪ್ ಈಶ್ವರ್, ಈ ವಿಚಾರ ನಮಗೂ ಗೊತ್ತು ಇಡೀ ಕರ್ನಾಟಕಕ್ಕೆ ಗೊತ್ತು. ಖಾತೆ ವಿಚಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೀತಿದೆ. ಅಧಿಕಾರಿಗಳ ಕಳ್ಳಾಟದಿಂದ ಬೇಸತ್ತು ಜನ ಲಂಚ ಕೊಟ್ಟು ಖಾತೆ ಮಾಡಿಕೊಳ್ಳುತ್ತಿದ್ದಾರೆ. ಅದಿಲ್ಲ ಇದಿಲ್ಲ ಅಂತ 20 ಸಾರಿ ಕಛೇರಿ ಬಳಿ ಸುತ್ತಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಟಾರ್ಚರ್ ನಿಂದ ಬೇಸತ್ತು ಅಷ್ಟೊ ಇಷ್ಟೊ ಕೊಟ್ಟು ಕೆಲಸ ಮಾಡಿಸಿಕೊಳ್ತಾವ್ರೆ. ಒಂದು ಖಾತೆ ಮಾಡಿಕೊಡಲು 40-50 ಸಾವಿರ ಕಿತ್ತುಕೊಳ್ಳುತ್ತಿದ್ದಾರೆ. ಬಡವರು, ಕೂಲಿ ಮಾಡುವವರು ಎಲ್ಲಿಂದ ತಂದು ಲಂಚ ಕೊಡುವುದಕ್ಕೆ ಸಾಧ್ಯ. ಭ್ರಷ್ಟಾಚಾರಕ್ಕೆ ಒಂದಷ್ಟು ಜನ ಸೂತ್ರಧಾರರು ಇದ್ದಾರೆ. ಅವರಿಗೆಲ್ಲಾ ಕಡಿವಾಣ ಹಾಕುತ್ತಿದ್ದೇನೆ. ಈಗಾಗಲೇ ನಗರಸಭೆ ಖಾತೆ ವಿಭಾಗದಲ್ಲಿ ಇರುವವರನ್ನು ವರ್ಗಾವಣೆ ಮಾಡಿದ್ದೇನೆ ಎಂದರು.
MLA Pradeep Eshwar slams Pratap Simha says Shut your mouth, BJP MP Muniswamy is a Money swamy. Pratap Simha even i know to talk well. Read Newspaper eveyday like you did being a Journalist he slammed.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm