ಗೃಹಜ್ಯೋತಿಗೆ ಒಂದು ವಾರದಲ್ಲೇ 51 ಲಕ್ಷಕ್ಕೂ ಅಧಿಕ ಜನರಿಂದ ನೋಂದಣಿ ; ಅಪ್ಲಿಕೇಶನ್ ಗೆ ಕೊನೇ ದಿನಾಂಕ ಇಲ್ಲ ಎಂದ ಇಲಾಖೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

27-06-23 11:16 am       Bangalore Correspondent   ಕರ್ನಾಟಕ

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ, ಪ್ರತಿ ಮನೆಗೆ ಮಾಸಿಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ಆರಂಭಗೊಳ್ಳುವ ಮೊದಲೇ ಭರ್ಜರಿ ಸ್ಪಂದನೆ ಸಿಕ್ಕಿದೆ.

ಬೆಂಗಳೂರು, ಜೂನ್ 27: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ, ಪ್ರತಿ ಮನೆಗೆ ಮಾಸಿಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ಆರಂಭಗೊಳ್ಳುವ ಮೊದಲೇ ಭರ್ಜರಿ ಸ್ಪಂದನೆ ಸಿಕ್ಕಿದೆ. ಅರ್ಥಾತ್, ಈ ಯೋಜನೆ ಸಲುವಾಗಿ ನೋಂದಣಿ ಆರಂಭವಾಗಿದ್ದು, ಅದು ಈಗ ಅರ್ಧ ಕೋಟಿಗೂ ಅಧಿಕವಾಗಿದೆ.

ಜುಲೈ ತಿಂಗಳ ಬಿಲ್​ಗೆ ಅನ್ವಯವಾಗುವಂತೆ ಈ ಯೋಜನೆ ಜಾರಿಗೆ ಬರಲಿದೆ. ಅಂದರೆ, ಆಗಸ್ಟ್​ನಲ್ಲಿ ಬರುವ ಬಿಲ್​ನಲ್ಲಿ 200 ಯುನಿಟ್​ವರೆಗಿನ ವಿದ್ಯುತ್​ಗೆ ಶೂನ್ಯ ಬಿಲ್ ಇರಲಿದೆ. ಈ ಯೋಜನೆಯ ಫಲಾನುಭವಿ ಆಗಲು ನೋಂದಣಿ ಅಗತ್ಯವಾಗಿದ್ದು, ಜೂ. 18ರಂದು ಪ್ರಕ್ರಿಯೆ ಆರಂಭವಾಗಿದೆ.

ಇದೀಗ ಒಂದು ವಾರ ಕಳೆಯುವಷ್ಟರಲ್ಲಿ 51 ಲಕ್ಷಕ್ಕೂ ಅಧಿಕ ಮಂದಿ ಗೃಹಜ್ಯೋತಿ ಯೋಜನೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಮನೆ ಮಾಲೀಕರು/ಬಾಡಿಗೆದಾರರು ಸೇರಿ ಎಲ್ಲರೂ ಈ ಯೋಜನೆಯ ಫಲಾನುಭವಿಗಳಾಗಬಹುದು. ಅದಕ್ಕಾಗಿ ಆಧಾರ್​ ನಂಬರ್ ಹಾಗೂ ವಿದ್ಯುತ್​ ಬಿಲ್​ನಲ್ಲಿರುವ ಖಾತೆ ನಂಬರ್ ನಮೂದಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.

ಗೃಹಜ್ಯೋತಿ ಯೋಜನೆಗೆ ಅರ್ಜಿ ನೋಂದಾಯಿಸಲು ಕೊನೆಯ ದಿನಾಂಕ ಇರುವುದಿಲ್ಲ. ಗ್ರಾಹಕರು ಯಾವುದೇ ಆತಂಕ ಇಲ್ಲದೇ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ. ಆದರೆ ಆರಂಭದಿಂದಲೇ ಯೋಜನೆಯ ಪ್ರಯೋಜನ ಪಡೆಯಲು ಬಳಕೆದಾರರು ಆದಷ್ಟೂ ಬೇಗ ನೋಂದಣಿ ಮಾಡಿಸಿಕೊಳ್ಳುವುದು ಉತ್ತಮ.

ಹ್ಯಾಕರ್​ಗಳು ಸೇವಾ ಸಿಂಧು ಹೆಸರಿನಲ್ಲಿ ನಕಲಿ ಆ್ಯಪ್​ಗಳನ್ನು ಸೃಷ್ಟಿಸಿದ್ದು, ನೋಂದಣಿ ವೇಳೆ ಎಚ್ಚರಿಕೆ ವಹಿಸಿ. ಸುರಕ್ಷಿತ ನೋಂದಣಿಗಾಗಿ ಅಧಿಕೃತ ಲಿಂಕ್​ ಬಳಸಿ.

ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ:

https://sevasindhugs.karnataka.gov.in

Following the extension of the 200-unit free scheme by the Delhi government until 2024, the registration process for the Karnataka Gruha Jyothi scheme has commenced. The scheme was one of the five promises made by Congress during the state assembly election and received approval on June 2, 2023, and the registration for the Gruha Jyothi scheme began on June 18, 2023.