ಬ್ರೇಕಿಂಗ್ ನ್ಯೂಸ್
28-06-23 10:57 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 28: ಅಕ್ಕಿ ಆಗದಿದ್ದರೆ, ಅದರ ಬದಲು ಹಣ ಕೊಡಿ ಎಂದು ಬಿಜೆಪಿ ನಾಯಕರು ಢಂಗುರ ಸಾರಿದ್ದರು. ರಾಜ್ಯ ಸರಕಾರ ಅಕ್ಕಿ ಕೊಡಿ ಎಂದು ಕೇಂದ್ರ ಸರಕಾರಕ್ಕೆ ದುಂಬಾಲು ಬಿದ್ದರೂ, ಅಕ್ಕಿ ಕೊಡಲ್ಲ ಎಂದು ಸಾರಿದ್ದರು ಕೇಂದ್ರ ನಾಯಕರು. ಆದರೆ, ಇದೀಗ ಸಿಎಂ ಸಿದ್ದರಾಮಯ್ಯ ಅಕ್ಕಿ ಕೊಡದಿದ್ದರೆ ಬೇಡ, ನಾವು ಹಣವನ್ನೇ ಜನರಿಗೆ ನೀಡುತ್ತೇವೆ ಎಂದು ಹೊಸ ಅಸ್ತ್ರ ಹೆಣೆದಿದ್ದಾರೆ. ಬಿಜೆಪಿ ರಾಜಕೀಯಕ್ಕೆ ಆಮೂಲಕ ಸಿದ್ದರಾಮಯ್ಯ ಪ್ರತ್ಯಸ್ತ್ರ ಹೂಡಿದ್ದಾರೆ.
ರಾಜ್ಯದಲ್ಲಿ ಹತ್ತು ಕೇಜಿ ಅಕ್ಕಿ ಕೊಡುವುದಾಗಿ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿತ್ತು. ಆದರೆ ಅಕ್ಕಿಯನ್ನು ಕೇಂದ್ರ ಸರಕಾರದ ಗೋದಾಮಿನಿಂದ ಕೊಡಬೇಕಿದ್ದರಿಂದ ಕಡಿಮೆ ದರದ ಅಕ್ಕಿ ರಾಜ್ಯ ಸರಕಾರಕ್ಕೆ ಸಿಕ್ಕಿರಲಿಲ್ಲ. ಫುಡ್ ಕಾರ್ಪೊರೇಶನ್ ಸಂಸ್ಥೆಯವರು ಅಕ್ಕಿ ಕೊಡಬಹುದು ಎಂದಿದ್ದರೂ, ಆನಂತರ ಕೇಂದ್ರ ಸರಕಾರ ಅದಕ್ಕೆ ಅಡ್ಡಗಾಲು ಹಾಕಿದ್ದು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿಯೇ ಅಕ್ಕಿ ಸಿಗುತ್ತಾ ಎಂದೂ ಆಬಳಿಕ ರಾಜ್ಯ ನಾಯಕರು ತಡಕಾಡಿದ್ದೂ ಆಗಿತ್ತು. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಪಡೆಯುವುದಿದ್ದರೆ, ಹೆಚ್ಚು ಹಣ ಬೇಕು. ಅಷ್ಟೇ ಅಲ್ಲ, ಎರಡು ಮೆಟ್ರಿಕ್ ಟನ್ನಷ್ಟು ಅಕ್ಕಿ ಒಂದೇ ಕಡೆ ಸಿಗೋದಿಲ್ಲ ಎನ್ನುವುದು ತಿಳಿಯುತ್ತಲೇ ಬಿಜೆಪಿ ನಾಯಕರ ಮಾತಿಗೆ ಕಿವಿಯಾಗಿದ್ದರು ಸಿದ್ದರಾಮಯ್ಯ.
ಅಕ್ಕಿಗಾಗಿ ಗೋಗರೆಯುವುದು, ಮುಕ್ತ ಮಾರುಕಟ್ಟೆಯಲ್ಲಿ ತಡಕಾಡುವುದೇ ಬೇಕಿಲ್ಲ, ಅದರ ಬದಲು ಬಿಪಿಎಲ್ ಕುಟುಂಬಗಳಿಗೆ ಹಣ ಹಾಕುವುದೇ ಲೇಸು ಅನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಸಿದ್ದರಾಮಯ್ಯ. ಆಮೂಲಕ ಬಿಜೆಪಿ ನಾಯಕರ ಬಾಯಿ ಮುಚ್ಚಿಸಬಹುದು ಅನ್ನುವ ಸುಲಭದ ಲೆಕ್ಕಾಚಾರ ಮಾಡಿದ್ದಾರೆ. ಜುಲೈ 1ರಿಂದಲೇ ಪ್ರತಿ ಸದಸ್ಯನಿಗೆ ಈಗಾಗಲೇ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ಯಥಾವತ್ ನೀಡಲಾಗುವುದು. ಜೊತೆಗೆ ನಾವು ಹೇಳಿರುವ ರೀತಿಯಲ್ಲೇ ಕುಟುಂಬದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯ ಬದಲು ಹಣವನ್ನು ನೀಡುತ್ತೇವೆ. ಕೇಂದ್ರದಿಂದ ಅಕ್ಕಿ ಖರೀದಿಸುವ 34 ರೂ. ಹಣವನ್ನು ಪ್ರತಿ ಕೆಜಿಯಂತೆ ಕುಟುಂಬದ ಸದಸ್ಯನಿಗೆ ನೀಡುತ್ತೇವೆ ಎಂದು ಹೊಸ ಅಸ್ತ್ರ ಹೂಡಿದ್ದಾರೆ. ಜೂನ್ 28ರಂದು ನಡೆದ ಸಂಪುಟ ಸಭೆಯಲ್ಲಿ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡ ಸಿದ್ದರಾಮಯ್ಯ ಜುಲೈ 1ರಿಂದಲೇ ಈ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ಇತ್ತ ಬಿಜೆಪಿ ಜುಲೈ 1ರಿಂದ ಅಕ್ಕಿ ಸಿಗದೇ ಇದ್ದರೆ ಪ್ರತಿಭಟನೆಗಿಳಿಯುವ ಮಾತಾಡಿತ್ತು. ಮಾಜಿ ಸಿಎಂ ಯಡಿಯೂರಪ್ಪ ಬೆಂಗಳೂರಿನ ಗಾಂಧಿ ಪ್ರತಿಮೆಯ ಮುಂದೆ ಒಬ್ಬಂಟಿಯಾಗೇ ಸತ್ಯಾಗ್ರಹ ನಡೆಸುವುದಾಗಿ ರಾಜ್ಯ ಸರಕಾರವನ್ನು ಬೆದರಿಸಿದ್ದರು. ಬಿಜೆಪಿ ರಾಜಕೀಯಕ್ಕೆ ಪ್ರತಿತಂತ್ರ ಹೂಡಿರುವ ಸಿದ್ದರಾಮಯ್ಯ, ಎದುರಾಳಿಗಳಿಗೆ ಅಸ್ತ್ರವೇ ಇಲ್ಲದಂತೆ ಮಾಡಿದ್ದಾರೆ. ರಾಜ್ಯದಲ್ಲಿ ಒಂದು ಕೋಟಿ 15 ಲಕ್ಷ ಬಿಪಿಎಲ್ ಕಾರ್ಡ್ ದಾರರಿದ್ದಾರೆ ಎನ್ನುವ ಲೆಕ್ಕಾಚಾರ ಇದ್ದು, ಇವರಿಗೆ ಹಣ ಕೊಡುವ ಲೆಕ್ಕ ಹಾಕಿದರೆ 800 ಕೋಟಿಯಷ್ಟೇ ಆಗುವುದಂತೆ. ಅದನ್ನು ಮ್ಯಾನೇಜ್ ಮಾಡಬಹುದು, ಅಕ್ಕಿ ಸಿಕ್ಕ ಬಳಿಕ ಅಕ್ಕಿಯನ್ನೇ ಕೊಡುತ್ತೇವೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ. ಅಕ್ಕಿ ಬದಲು ಹಣ ಕೊಡುತ್ತೇವೆ ಎಂದರೂ, ಮನೆ ಯಜಮಾನನ ಖಾತೆ ಲಿಂಕ್ ಆಗಿಲ್ಲಾಂದ್ರೆ, ಅದಾಗಬೇಕು. ಹೀಗೆ ಏನಿಲ್ಲಾಂದ್ರೂ ಹಣ ರವಾನಿಸಲು ಇನ್ನೊಂದೆರಡು ತಿಂಗಳು ಬೇಕು. ಅಷ್ಟರ ವರೆಗೆ ಬಿಜೆಪಿ ನಾಯಕರ ಬಾಯಿ ಮುಚ್ಚಿಸಬಹುದು ಅನ್ನುವ ದೂರಗಾಮಿ ಲೆಕ್ಕಾಚಾರವೂ ಕಾಂಗ್ರೆಸ್ ನಾಯಕರದ್ದಿದೆ.
After failing to procure enough rice at a good price from both the states and Central corporations, the Karnataka Cabinet on Wednesday announced that it would pay low income families the cash equivalent to the 5 kg of rice the new regime had promised them, which would add to 5 kg from the Centre. Every BPL person’s account would be credited with Rs 170 per month - going by the Food Corporation of India’s (FCI) standard rate of Rs 34 per kg of rice - from July 1 under the regime’s ambitious Anna Bhagya scheme.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm