ಬ್ರೇಕಿಂಗ್ ನ್ಯೂಸ್
29-06-23 09:22 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 29: ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಡಿಯೋ ಬಿಟ್ರಲ್ಲಾ.. ಜಗದೀಶ್ ಶೆಟ್ಟರ್, ಈಶ್ವರಪ್ಪ ಎಲ್ರನ್ನೂ ತೆಗಿಯೋದು ಅಂತ. ಹಾಗೇ ಮಾಡಿದ್ರಲ್ಲಾ.. ಎಲ್ಲರನ್ನೂ ಮುಗಿಸಿ ಬಿಟ್ಟರು. ಅಧಿಕಾರದಲ್ಲಿದ್ದಾಗಲೇ ಆಡಿಯೋ ಬಿಟ್ಟಿದ್ದರು ಎಂದು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗ್ಗೆ ಮಾಜಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸೋಲಲು ಕೆಲವರ ತಪ್ಪು ನಿರ್ಧಾರಗಳೇ ಕಾರಣ. ಹಿರಿಯರನ್ನು ಬಿಟ್ಟು ಸುಧಾಕರ್ ಗೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮಾಡಿದ್ರು. ಯಾವ ಅರ್ಹತೆಯಿದೆಯೆಂದು ಮಾಡಿದ್ದರು. ಕೆಲವು ನಾಯಕರ ಧೋರಣೆಗಳು, ಕಾಂಗ್ರೆಸಿನ ಬಿಟ್ಟಿ ಭಾಗ್ಯಗಳಿಂದಾಗಿ ಪಕ್ಷಕ್ಕೆ ಹೀನಾಯ ಸೋಲಾಗಿದೆ ಎಂದು ಹೇಳಿದರು.
ಯಡಿಯೂರಪ್ಪ ಏನು ನಡೆಯೋಕೆ ಆಗದ ಸ್ಥಿತಿಗೆ ತಲುಪಿದ್ದಾರೆಯೇ.. ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರು. ಅವರನ್ನು ಮುಖ್ಯಮಂತ್ರಿಯಾಗಿದ್ದಾಗಲೂ ಮೂವರು ಡಿಸಿಎಂ ಮಾಡಿ, ಅಧಿಕಾರ ಚಲಾಯಿಸದಂತೆ ಕಟ್ಟಿ ಹಾಕಿದ್ದರು. ರಾಜ್ಯದಲ್ಲಿ ಲಿಂಗಾಯತ, ವೀರಶೈವ, ದಲಿತ, ಒಂದಷ್ಟು ಹಿಂದುಳಿದ ವರ್ಗದ ಮತಗಳಿರುವುದು. ಇವರನ್ನು ಬಿಟ್ಟು ಏನೇ ಮಾಡಿದ್ರೂ ಗೆಲ್ಲೋಕೆ ಸಾಧ್ಯವಿಲ್ಲ. ಇದು ಗುಜರಾತ್, ಉತ್ತರ ಪ್ರದೇಶ ಅಲ್ಲ ಎಂದಿದ್ದಾರೆ.
ಮೋದಿಯವರು ವಿಶ್ವನಾಯಕ. ಅವರ ಬಗ್ಗೆ ಅಪಾರ ಗೌರವ ಇದೆ. ಅಮಿತ್ ಷಾ ಬಗ್ಗೆಯೂ ಗೌರವ ಇದೆ ಎಂದು ಹೇಳಿದ ಅವರನ್ನು ನಿಮ್ಮ ಮೇಲೆ ಪಕ್ಷದಿಂದ ನೋಟೀಸ್ ಕಳಿಸುವ ಸಾಧ್ಯತೆ ಇದೆ ಎಂದು ಕೇಳಿದ್ದಕ್ಕೆ, ನೋಟೀಸ್ ಕೊಡಲಿಯಪ್ಪಾ.. ಇವರು ಅಧಿಕಾರದಲ್ಲಿದ್ದಾಗಲೇ ಪಕ್ಷದ ವಿರುದ್ಧ ಹೇಳಿಕೆ ಕೊಟ್ಟವರಿಗೆ ಏನು ಮಾಡಿದ್ದರು. ಅಧಿಕಾರ ಇದ್ದಾಗಲೇ ಏನೂ ಮಾಡೋಕೆ ಆಗಿಲ್ಲ. ಈಗ ನೋಟೀಸ್ ಕೊಟ್ಟು ಏನು ಮಾಡಕ್ಕಾಗುತ್ತೆ ಎಂದರು.
ನೀವು ಕಾಂಗ್ರೆಸ್ ಹೋಗುತ್ತೀರಾ ಎಂಬ ಪ್ರಶ್ನೆಗೆ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಯಾಕೆ ಕಾಂಗ್ರೆಸ್ ಹೋಗಬೇಕು. ಡಿಕೆಶಿ, ಸಿದ್ದರಾಮಯ್ಯ ಜೊತೆಗೆ ಸಂಪರ್ಕ ಹೊಂದಿದ್ದೇನೆಂದು ಕಾಂಗ್ರೆಸಿಗೆ ಹೋಗುತ್ತೇನೆಂದು ಅರ್ಥ ಮಾಡ್ಕೊಬೇಕಿಲ್ಲ. ನನಗೆ ಮೊದಲಿನಿಂದಲೂ ರಾಜಕೀಯ ಮೀರಿದ ಸ್ನೇಹ ಇದೆ. ಹೊನ್ನಾಳಿಗೆ ಎರಡು ಬಾರಿ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡಿದ್ದೇನೆ. ಡಿಕೆಶಿ ಜೊತೆಗೆ ಆಪ್ತವಾಗಿ ಮಾತನಾಡಿದ್ದೂ ಇದೆ. ಮೊನ್ನೆ ಚುನಾವಣೆ ಬಳಿಕ ಶಾಮನೂರು ಅವರ ಜೊತೆಗೂ ಮಾತನಾಡಿದ್ದೆ. ಹಾಗಂತ, ನಾನು ಕಾಂಗ್ರೆಸ್ ಹೋಗುತ್ತೇನೆಂದು ಅರ್ಥ ಅಲ್ಲ ಎಂದರು. ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಸಂಸತ್ ಟಿಕೆಟ್ ಪಡೆಯಲು ಪಕ್ಷದಿಂದ ಕೇಳಿದ್ದೇನೆ. ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದರು. ಕಾಂಗ್ರೆಸಿನಿಂದಲಾ ಎಂಬ ಪ್ರಶ್ನೆಗೆ, ಯಾಕೆ ಹಾಗಂತೀರಿ, ನಾನು ಬಿಜೆಪಿ ಟಿಕೆಟ್ ಕೇಳಿದ್ದು ಎಂದು ಮರು ಪ್ರಶ್ನೆ ಹಾಕಿದರು.
ರೇಣುಕಾಗೆ ಶಿಸ್ತು ಸಮಿತಿ ನೋಟೀಸ್
ಮಧ್ಯಾಹ್ನ ಹೊನ್ನಾಳಿಯಲ್ಲಿ ಪಕ್ಷದ ನಾಯಕರ ಬಗ್ಗೆ ಟೀಕಿಸಿದ್ದ ರೇಣುಕಾಚಾರ್ಯ ವಿರುದ್ಧ ರಾಜ್ಯ ಬಿಜೆಪಿ ನೋಟೀಸ್ ಜಾರಿ ಮಾಡಿದೆ. ಪಕ್ಷದ ಶಿಸ್ತು ಸಮಿತಿಯ ಲಿಂಗರಾಜ್ ಪಾಟೀಲ್ ನೋಟೀಸ್ ನೀಡಿ, ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಜರುಗಿಸಬಾರದು. ಈ ಬಗ್ಗೆ ಹತ್ತು ದಿನದ ಒಳಗೆ ಲಿಖಿತ ಉತ್ತರ ನೀಡಬೇಕು ಎಂದು ತಿಳಿಸಿದ್ದಾರೆ. ಆದರೆ ನೋಟೀಸ್ ಬೆನ್ನಲ್ಲೇ ರಾಜ್ಯದ ಹಲವು ಕಡೆಯಿಂದ ವಿರೋಧವೂ ಕೇಳಿಬಂದಿದೆ. ಬಿಎಸ್ವೈ ಫ್ಯಾನ್ಸ್ ಸೇರಿದಂತೆ ಬಿಜೆಪಿ ಕಾರ್ಯಕರ್ತರೇ ಜಾಲತಾಣದಲ್ಲಿ ನೋಟೀಸ್ ಬಗ್ಗೆ ಕಿಡಿಕಾರಿದ್ದಾರೆ. ವರ್ಷಾನುಗಟ್ಟಲೆ ಪಕ್ಷದ ವಿರುದ್ಧ ಟೀಕೆ ಮಾಡಿದ್ದ ಯತ್ನಾಳ್ ಮೇಲೆ ನೋಟೀಸ್ ನೀಡದವರು ಈಗ ರೇಣುಕಾ ಮೇಲೆ ಯಾಕೆ ನೋಟೀಸ್ ನೀಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
The BJP on Thursday issued a show-cause notice to former minister MP Renukacharya after he criticised the party's leadership and even called for state president Nalin Kumar Kateel's resignation for the Assembly poll debacle.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm