ಬ್ರೇಕಿಂಗ್ ನ್ಯೂಸ್
30-06-23 06:43 pm HK News Desk ಕರ್ನಾಟಕ
ಗದಗ, ಜೂನ್ 30: ಆದರ್ಶ ದಂಪತಿಯಾಗಿ ಬಾಳಿದವರು ಸಾವಿನಲ್ಲೂ ಒಂದಾಗುವುದನ್ನು ಕೇಳಿದ್ದೇವೆ. ಇಲ್ಲೊಬ್ಬ ಹಿರಿಯ ರೈತನ ಸಾವಿನ ಬೆನ್ನಲ್ಲೇ ಆತನ ಎತ್ತು ಕೂಡ ಸಾವು ಕಂಡಿದ್ದು ಅಪರೂಪದ ಘಟನೆ ನಡೆದಿದೆ.
ಗದಗ ತಾಲ್ಲೂಕಿನ ಬೆನಕನಕೊಪ್ಪದಲ್ಲಿ ಘಟನೆ ನಡೆದಿದೆ. ಭೀಮಪ್ಪ ಕಣಗಿನಹಾಳ (90) ಎಂಬ ಹಿರಿಯ ಜೀವ, ರೈತ ನಿನ್ನೆಯಷ್ಟೇ ಸಾವು ಕಂಡಿದ್ದರು. ಭೀಮಪ್ಪ ಸಾವಿನ ಬಳಿಕ ಅಂತ್ಯಸಂಸ್ಕಾರಕ್ಕೆ ರೆಡಿ ಮಾಡುತ್ತಿದ್ದಾಗಲೇ ರೈತನ ಜೊತೆಗೆ ಬಹುಕಾಲ ಇದ್ದ ಎತ್ತು ಕೂಡ ಕೊನೆಯುಸಿರೆಳೆದಿದೆ.
ಕೃಷಿ ಕಾರ್ಯದಲ್ಲಿ ಜೊತೆಗೂಡಿದ್ದ ಎತ್ತು ರೈತನ ಸಾವಿನಲ್ಲೂ ಜೊತೆಯಾಗಿದೆ. ಮಾಲೀಕನ ಸಾವಿನ ಬೆನ್ನಲ್ಲೇ ಎತ್ತು ಕೂಡ ಸಾವನ್ನಪ್ಪಿದ್ದನ್ನ ಕಂಡು ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಎತ್ತು - ರೈತನ ಅಪರೂಪದ ನಂಟು ಕಂಡು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.
ಭೀಮಪ್ಪ ಅವರ ಜಮೀನಿನಲ್ಲೇ ರೈತ ಮತ್ತು ಎತ್ತುವನ್ನು ಅಕ್ಕ-ಪಕ್ಕದಲ್ಲೇ ಇಟ್ಟು ಸಮಾಧಿ ಮಾಡಲಾಗಿದೆ. ಲಿಂಗಾಯತ ವಿಧಿ ವಿಧಾನದಂತೆ ರೈತ ಭೀಮಪ್ಪ ಮತ್ತು ಆತನ ಎತ್ತಿನ ಅಂತ್ಯಸಂಸ್ಕಾರ ಮಾಡಲಾಗಿದೆ. ಅಂತ್ಯಸಂಸ್ಕಾರಲ್ಲಿ ಬೆನಕನಕೊಪ್ಪ ಆಸುಪಾಸಿನ ಗ್ರಾಮಸ್ಥರು ಭಾಗಿಯಾಗಿದ್ದಾರೆ.
Gadag, OX dies soon after its owner dies. Ox died soon aafter its owner Famer Beemapa (90) passed away. Both were cremated in the same place with honours.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm