ಬ್ರೇಕಿಂಗ್ ನ್ಯೂಸ್
01-07-23 02:16 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 1: ಅನ್ನ, ನೀರಿಲ್ಲದೆ ಮನುಷ್ಯ ಬದುಕುವುದು ಕಷ್ಟ. ಆದರೆ ಅರ್ಜೆಂಟೀನಾದ ಯೋಗ ಸಾಧಕರೊಬ್ಬರು ಬರೋಬ್ಬರಿ 17 ವರ್ಷಗಳಿಂದ ಅನ್ನ, ನೀರು ಸೇವಿಸದೇ ಬದುಕು ನಡೆಸುತ್ತಿದ್ದಾರೆ. ವಿಕ್ಟರ್ ಟ್ರುವಿಯಾನೋ ಎಂಬ ಈ ಸಾಧಕ ಸತತ 17 ವರ್ಷಗಳಿಂದ ನೀರು, ಆಹಾರ ಸೇವಿಸದೆ ಕೇವಲ ಗಾಳಿ ಸೇವನೆಯಿಂದ ಬದುಕುತ್ತಿದ್ದು ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
46 ವರ್ಷದ ಸಾಧಕರನ್ನು ಪತ್ರಿಕೆ ಮಾತನಾಡಿಸಿದ್ದು ಆತನ ಅನುಭವಗಳನ್ನು ದಾಖಲಿಸಿದೆ. ''ನನಗೆ ಹಸಿವು ಎನ್ನುವುದೇ ಗೊತ್ತಿಲ್ಲ. ಹಸಿವಾದರೆ ಖಂಡಿತ ಊಟ ಮಾಡುತ್ತೇನೆ, ಯೋಗದ ಮೂಲಕ ಹಸಿವನ್ನು ಗೆದ್ದಿದ್ದೇನೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಬಾರಿ ಸ್ನಾನ ಮಾಡುವುದು ನನ್ನ ಅಭ್ಯಾಸ. ಬಿಸಿ ನೀರು ಮತ್ತು ತಣ್ಣೀರಿನಿಂದ ಪ್ರತಿ ಬಾರಿ 7 ನಿಮಿಷ ಸ್ನಾನ ಮಾಡುತ್ತೇನೆ. ಬಿಸಿ ನೀರಿನಿಂದ ಸ್ನಾನ ಮಾಡಿದಾಗ ಕೊನೆಯ ಒಂದು ನಿಮಿಷ ತಣ್ಣೀರು ಸ್ನಾನ ಕಡ್ಡಾಯ. ಹೀಗೆ ಮಾಡುವುದರಿಂದ ದೇಹದೊಳಗೆ ನೀರು ಹೋಗುತ್ತದೆ, ಜೀವಿಸುವುದಕ್ಕೆ ಅಷ್ಟು ಸಾಕು' ಎಂದು ವಿಕ್ಟರ್ ಹೇಳಿದ್ದಾರೆ.
''ನಾನು ಆಹಾರ, ನೀರು ಬಿಟ್ಟು 17 ವರ್ಷಗಳಾದವು. ಇದಕ್ಕೂ ಮೊದಲು ಒಂದು ವರ್ಷ ಕೇವಲ ಜ್ಯೂಸ್ ಮತ್ತು ಟೀ ಕುಡಿದು ಬದುಕಿದ್ದೆ. ನಿಧಾನವಾಗಿ ಆಹಾರ ಸೇವಿಸದೆ ಸಮಯ ಕಳೆಯಲಾರಂಭಿಸಿದೆ. ಅದೇ ರೂಢಿಯಾಗಿ ಬಂತು. ನಾಲ್ಕನೇ ವಯಸ್ಸಿನಲ್ಲೇ ವಯಲಿನ್ ನುಡಿಸುವುದನ್ನು ಕಲಿತಿದ್ದೆ. ಚಿಕ್ಕ ವಯಸ್ಸಿನಲ್ಲಿ ನನ್ನ ಪ್ರತಿಭೆ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಬಾಲ್ಯದಲ್ಲಿರುವಾಗ ದೈವಿಕ ಶಕ್ತಿಯುಳ್ಳ ಗುರುಗಳು ರಾತ್ರಿ ವೇಳೆ ನನ್ನ ಕೋಣೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಜೊತೆ ಮಾತನಾಡಲು ಭಯವಾಗುತ್ತಿತ್ತು. ನಂತರ ಅವರ ಬಗ್ಗೆ ಅರ್ಥವಾಯಿತು. ನಾನು ಜೀವನದಲ್ಲಿ ಏನು ಮಾಡಬೇಕೆಂದು ಅವರು ಹೇಳುತ್ತಿದರು. ಆ ಪ್ರಕಾರ ಜೀವನದಲ್ಲಿ ಬದಲಾವಣೆ ಆಗುತ್ತಾ ಬಂದು ಎಂದು ವಿವರಿಸಿದ್ದಾರೆ. ವಿಕ್ಟರ್ ಅವರು 2006ರಿಂದ ಆಹಾರ ಮತ್ತು ನೀರು ಸೇವನೆ ಮಾಡಿಲ್ವಂತೆ.
Victor Truviano The man who lives without food or water for the past 17 years. Victor is nourished by prana, without the need of taking physical food, since more than 17 years
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm