ಬ್ರೇಕಿಂಗ್ ನ್ಯೂಸ್
01-07-23 02:56 pm HK News Desk ಕರ್ನಾಟಕ
ಬೆಂಗಳೂರು, ಜುಲೈ 1: ಬಿಜೆಪಿ ಶಿಸ್ತು ಸಮಿತಿಯ ನೋಟಿಸ್ ಬೆನ್ನಲ್ಲೇ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ರೇಣುಕಾಚಾರ್ಯ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾನು ಪಕ್ಷಕ್ಕೆ ಏನು ಮಾಡಿಲ್ಲವಾ? ನನಗೆ ಸಿಟ್ಟು ಇತ್ತು. ಹಾಗಾಗಿ ಬಹಿರಂಗವಾಗಿ ಹೇಳಿದ್ದೇನೆ. ಶಿಸ್ತು ಸಮಿತಿ ನನಗೆ ಮಾತ್ರ ನೋಟಿಸ್ ನೀಡಿದ್ಯಾಕೆ? ಪಕ್ಷದಲ್ಲಿ ಶಿಸ್ತು ಸಮಿತಿ ಇದೆ ಅನ್ನೋದೇ ನಿನ್ನೆ ಗೊತ್ತಾಗಿದೆ ಎಂದು ಬಿಎಸ್ವೈ ಮುಂದೆ ರೇಣುಕಾಚಾರ್ಯ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ, ಬಿಎಸ್ವೈ ಅಂಥವರನ್ನ ಷಡ್ಯಂತ್ರ ಮಾಡಿ ಎರಡು ಬಾರಿ ಅಧಿಕಾರದಿಂದ ಕೆಳಕ್ಕಿಳಿಸಿದ್ರು. ಕಾಂಗ್ರೆಸ್ - ಜೆಡಿಎಸ್ನವರು ಯಡಿಯೂರಪ್ಪ, ಮೋದಿ ನೋಡಿ ಬಂದಿದ್ದರು. ಅವರನ್ನ ಉಪ ಚುನಾವಣೆಗಳಲ್ಲಿ ನಿಲ್ಲಿಸಿ ಗೆಲ್ಲಿಸಿದ್ದು ಯಡಿಯೂರಪ್ಪ. ಅಂತಹ ನಾಯಕರ ವಿರುದ್ಧ ಮಾತಾಡಿದವರಿಗೆ ಪಕ್ಷ ನೋಟಿಸ್ ನೀಡಿಲ್ಲ ಯಾಕೆ ಎಂದು ಗುಡುಗಿದರು.
ಯಡಿಯೂರಪ್ಪ ನಮ್ಮ ನಾಯಕರು, ಗೌರವ ಕೊಡ್ತೀನಿ. ಗನ್ ಇಟ್ಟು ಯಡಿಯೂರಪ್ಪ ಹೇಳಿಸಿದ್ದಾರೆ ಅಂತಾ ಮಾತಾಡ್ತಾರೆ. ಅಂಥ ಕೀಳುಮಟ್ಟಕ್ಕೆ ಯಡಿಯೂರಪ್ಪ ಹೋಗಿಲ್ಲ. ಪಕ್ಷ ಹೀನಾಯ ಸ್ಥಿತಿಗೆ ಬಂದಿರೋದಕ್ಕೆ ಬಿಎಸ್ವೈ ಅವರಿಗೂ ನೋವಿದೆ ಎಂದು ತಿಳಿಸಿದರು. ಅವಮಾನ, ಅಪಮಾನ ಮಾಡಿದರೂ ಪಾಪ ಗೌರವದಿಂದ ಯಡಿಯೂರಪ್ಪವರು ರಾಜೀನಾಮೆ ನೀಡಿದರು. ಅಲ್ಲಿಂದ ನಿರಂತರವಾಗಿ ಅವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸ್ವಪಕ್ಷೀಯರ ವಿರುದ್ಧವೇ ಆರೋಪ ಮಾಡಿದರು.
Renukacharya meets Yediyurappa after BJP notice to Renukacharya for ‘anti-party’ statements within hours.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm