ಕರ್ನಾಟಕದಲ್ಲಿ ಈ ಬಾರಿಯೂ ಜಲಪ್ರಳಯ ; ಜಗತ್ತಿನಲ್ಲಿ ತಲ್ಲಣ, ಒಂದೆರಡು ದೇಶಗಳು ಮುಚ್ಚಿ ಹೋಗಲಿವೆ - ಕೋಡಿಮಠ ಸ್ವಾಮೀಜಿ ಭವಿಷ್ಯ 

01-07-23 06:21 pm       Bangalore Correspondent   ಕರ್ನಾಟಕ

ಕರ್ನಾಟಕದಲ್ಲಿ ಈ ಬಾರಿ ಮಳೆಯೇ ಆಗಿಲ್ಲ. ಹೆಚ್ಚಿನ ಕಡೆ ಮಳೆಗಾಲ ಬಂದರೂ, ಕುಡಿಯುವ ನೀರಿನ ತತ್ವಾರ ಕಡಿಮೆಯಾಗಿಲ್ಲ. ಹಾಗಿದ್ದರೂ, ಈ ಬಾರಿ ಕರ್ನಾಟಕದಲ್ಲಿ ಜಲಪ್ರಳಯ ಆಗಲಿದೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ಬೆಂಗಳೂರು, ಜುಲೈ 1: ಕರ್ನಾಟಕದಲ್ಲಿ ಈ ಬಾರಿ ಮಳೆಯೇ ಆಗಿಲ್ಲ. ಹೆಚ್ಚಿನ ಕಡೆ ಮಳೆಗಾಲ ಬಂದರೂ, ಕುಡಿಯುವ ನೀರಿನ ತತ್ವಾರ ಕಡಿಮೆಯಾಗಿಲ್ಲ. ಹಾಗಿದ್ದರೂ, ಈ ಬಾರಿ ಕರ್ನಾಟಕದಲ್ಲಿ ಜಲಪ್ರಳಯ ಆಗಲಿದೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ಈ ಬಾರಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ, ಸ್ಥಿರ ಸರ್ಕಾರ ರಚನೆಯಾಗಲಿದೆ ಎಂದು ಚುನಾವಣಾ ಪೂರ್ವದಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಮತ್ತೆ ಭವಿಷ್ಯ ಹೇಳಿದ್ದಾರೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರಲಿದೆ. ಜಲಪ್ರಳಯ ಆಗುವ ಲಕ್ಷಣ ಇದೆ ಎಂದು ನುಡಿದಿದ್ದಾರೆ.

ಜಾಗತಿಕ ಮಟ್ಟದಲ್ಲಿ ದುರಂತ 

ಜಾಗತಿಕ ಮಟ್ಟದಲ್ಲಿ ಮೂರು ಗಂಡಾಂತರಗಳು ನಡೆಯಲಿವೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳಲಿದ್ದಾರೆ. ಒಂದೆರಡು ರಾಷ್ಟಗಳು ಮುಚ್ಚಿ ಹೋಗುವ ಸಾಧ್ಯತೆ ಇದೆ ಎಂದು ಶ್ರೀಗಳು ಹೇಳಿದ್ದಾರೆ. ಜನರ ಅಕಾಲಿಕ ಮೃತ್ಯು ಆಗುವ ಸೂಚನೆ ಇದೆ. ವಿಜಯದಶಮಿಯಿಂದ ಸಂಕ್ರಾಂತಿ ವರೆಗೆ ಜಗತ್ತಿನಲ್ಲಿ ದುರ್ಘಟನೆಗಳು ನಡೆಯಲಿವೆ. ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ವಾಮೀಜಿ ಹೇಳಿದ್ದಾರೆ. 

ಕರುನಾಡಿಗೆ ಕೆಲವೊಂದು ಆಪತ್ತುಗಳು ಇವೆ. ಕೆಲ ಸಾವು ನೋವುಗಳು ಆಗಲಿವೆ. ಆದರೆ, ದೈವ ಕೃಪೆಯಿಂದ ಪಾರಾಗಬಹುದು. ಭಾರತದಲ್ಲಿ ನಾನು ಹೇಳಿದಂತೆ ಒಂದು ಘಟನೆ ಸಂಭವಿಸಲಿದೆ. ತಪ್ಪಿಸುವ ಹೊಣೆಗಾರಿಕೆ ಆಳುವವರ ಕೈಯಲ್ಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಬಡವರಿಗೆ ಗ್ಯಾರಂಟಿ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವತಂತ್ರ ಇರಲಿಲ್ಲವೋ ಅಂಥ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬರುವಂತಾಗಿದೆ ಎಂದವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಹೇಳಿದ್ದಾರೆ.

There has been no rain in Karnataka this year. Though the rainy season has arrived in most places, the availability of drinking water has not diminished. However, the Swamiji of Kodimutt has predicted that there will be a flood in Karnataka this time.