ಬ್ರೇಕಿಂಗ್ ನ್ಯೂಸ್
01-07-23 11:06 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 1: ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿ 13 ಬಜೆಟ್ ಗಳನ್ನು ರೆಡಿ ಮಾಡಿದ್ದ ಐಎಎಸ್ ಅಧಿಕಾರಿ ಐಎಸ್ ಎನ್ ಪ್ರಸಾದ್ ನಿವೃತ್ತಿಯಾಗಿದ್ದಾರೆ.
37 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾರ್ಯ ನಿರ್ವಹಿಸಿದವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7 ರಂದು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗೂ ಒಂದು ವಾರ ಮುಂಚೆ ಪ್ರಸಾದ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಮೂರು ಸರ್ಕಾರಗಳ ಅವಧಿಯಲ್ಲಿ 13 ಬಜೆಟ್ ಗಳಿಗಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
1986ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಪ್ರಸಾದ್ ಕೊನೆಯದಾಗಿ 14ನೇ ಬಜೆಟ್ ಗೂ ಕೆಲಸ ಮಾಡಿದ್ದಾರೆ. ಜುಲೈ 7 ರಂದು ಮಂಡನೆಯಾಗಲಿರುವ ಬಜೆಟ್ ಕಾಂಗ್ರೆಸ್ ಸರ್ಕಾರಕ್ಕೆ ಸವಾಲಾಗಲಿದೆ. ಐದು ಗ್ಯಾರಂಟಿಗಳನ್ನು ಪೂರೈಸಲು ಸರ್ಕಾರಕ್ಕೆ ಸುಮಾರು 50 ಸಾವಿರ ಕೋಟಿ ರು. ಅಗತ್ಯವಿದೆ. ಹೀಗಾಗಿ ಸಿದ್ದರಾಮಯ್ಯ, ಈ ಹಿಂದೆ ಬಜೆಟ್ ತಯಾರಿಸಿ ಅಪರಿಮಿತ ಅನುಭವ ಇರುವ ಪ್ರಸಾದ್ ಸಲಹೆ ಪಡೆದಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ 3.09 ಲಕ್ಷ ಕೋಟಿ ಬಜೆಟ್ಗಿಂತ ಈ ಬಾರಿಯದ್ದು ಗಾತ್ರದಲ್ಲಿ ಶೇ.8ರಷ್ಟು ಹೆಚ್ಚಿದೆ. ಬಜೆಟ್ ಗಾತ್ರ 3.35 ಲಕ್ಷ ಕೋಟಿ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಘೋಷಿಸಿದ್ದರು. ಪ್ರಸಾದ್ ಅವರು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತ್ಯುತ್ತಮ ಅಧಿಕಾರಿಗಳಲ್ಲಿ ಒಬ್ಬರು. ರಾಜಕಾರಣಿಗಳು, ಇಲಾಖೆಗಳು ಮತ್ತು ಉದ್ಯಮವನ್ನು ಸಮಾನವಾಗಿ ಒಯ್ಯುತ್ತಾರೆ. ಬರ, ಪ್ರವಾಹ ಮತ್ತು ಕೋವಿಡ್ ನಂತಹ ಅತ್ಯಂತ ಸವಾಲಿನ ಸಮಯದಲ್ಲಿ ಆಕಸ್ಮಿಕ ಯೋಜನೆಗಳನ್ನು ರೂಪಿಸಿದ್ದರು.
ತಾವು ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಎಲ್ಲ ಮುಖ್ಯಮಂತ್ರಿಗಳ ವಿಶ್ವಾಸ ಗಳಿಸಿದ್ದರು. ಸಿಎಂ ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟು ಬಜೆಟ್ ಕರಡು ಮಾಡುವಾಗ ಖರ್ಚು, ಲಭ್ಯವಿರುವ ನಿಧಿ ಸಂಗ್ರಹ, ಸಂಪನ್ಮೂಲಗಳು ಮತ್ತು ರಾಜ್ಯದ ಹಣಕಾಸಿನ ಖರ್ಚು- ವೆಚ್ಚದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಿದ್ದರು ಎಂದು ಉದ್ಯಮಿಯೊಬ್ಬರು ತಿಳಿಸಿದ್ದಾರೆ. ಪ್ರಸಾದ್ ಅವರ ಹುದ್ದೆಗೆ 1991 ರ ಬ್ಯಾಚ್ನ ಮತ್ತೊಬ್ಬ ಚಾಣಾಕ್ಷ ಅಧಿಕಾರಿ ಎಲ್ಕೆ ಅತೀಕ್ ಅವರನ್ನು ನೇಮಿಸಲಾಗಿದೆ, ಅತೀಕ್ ಅವರು ಪಿಎಂಒ ಮತ್ತು ವಿಶ್ವಬ್ಯಾಂಕ್ನಲ್ಲಿ ಈ ಹಿಂದೆ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.
The man behind 13 state budgets — Additional Chief Secretary (ACS), Finance, ISN Prasad — superannuated on Friday after a track record of being the finance secretary to chief ministers of all political parties — Congress, BJP and JDS. He stepped down from office after an impeccable career of 37 years in public service and a week before Chief Minister Siddaramaiah is scheduled to present the state budget — his 14th — on July 7. He is an Indian Administrative Service (IAS) officer of the 1986 batch.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm