ಬ್ರೇಕಿಂಗ್ ನ್ಯೂಸ್
04-07-23 12:18 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 4: ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಚಲನ ಸೃಷ್ಟಿಸಿದ್ದ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡ (ಎಸ್ ಐಟಿ) ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಆರ್ಥಿಕ ಅಪರಾಧ ಘಟಕದ ಎಡಿಜಿಪಿ ಮನೀಶ್ ಖರ್ಭೀಕರ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದ್ದು, ನಾಲ್ವರು ಇತರ ಅಧಿಕಾರಿಗಳು ಈ ತಂಡದಲ್ಲಿದ್ದಾರೆ. ಆರ್ಥಿಕ ಅಪರಾಧ ವಿಭಾಗದ ಡಾ. ಕೆ. ವಂಶಿ ಕೃಷ್ಣ, ಡಿಸಿಪಿ ಡಾ. ಅನೂಪ್ ಎ. ಶೆಟ್ಟಿ, ಆರ್ಥಿಕ ಅಪರಾಧಗಳು ಮತ್ತು ಸೈಬರ್ ಅಪರಾಧ ವಿಭಾಗದ ಎಸ್ಪಿ ಶರತ್ ಈ ತಂಡದಲ್ಲಿದ್ದಾರೆ.
ವಿಶೇಷ ತಂಡ ರಾಜ್ಯದಲ್ಲಿ ನಡೆದಿರುವ ಬಿಟ್ ಕಾಯಿನ್ ಹಗರಣದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಲಿದೆ. ಅಲ್ಲದೆ ಇದೇ ಮಾದರಿಯ ಇತರ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸುವಂತೆ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಬಿಟ್ ಕಾಯಿನ್ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಶ್ರೀಕಿಯನ್ನು ಬಂಧನ ಮಾಡಲಾಗಿತ್ತು. ಜೊತೆಗೆ, ಪ್ರಭಾವಿ ರಾಜಕಾರಣಿಗಳ ನಂಟು ಇರುವ ಆರೋಪ ಕೇಳಿಬಂದಿತ್ತು.
ಮೂರು ವರ್ಷಗಳ ಹಿಂದೆ ಸ್ಯಾಂಡಲ್ವುಡ್ ಡ್ರಗ್ ನಂಟು ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಯಾನೆ ಶ್ರೀಕಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧಿತನ ವಿಚಾರಣೆ ನಡೆಸಿದ ವೇಳೆ ಬಿಟ್ ಕಾಯಿನ್ ದಂಧೆ ಬೆಳಕಿಗೆ ಬಂದಿತ್ತು. 2021ರಲ್ಲಿ ನಗರದ ಕಾಟನ್‌ಪೇಟೆ ಠಾಣೆಯಲ್ಲಿ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗಿತ್ತು. ಇದಲ್ಲದೆ, ವಿವಿಧ ರಾಜ್ಯ ಸರ್ಕಾರಗಳ ಇ ಪ್ರೊಕ್ಯುರ್ಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ ಅದರಿಂದ ಕೋಟ್ಯಂತರ ರೂ. ಕಿತ್ತುಕೊಂಡಿರುವುದು, ಜನಧನ್ ಖಾತೆಗಳಿಂದ ಹಣವನ್ನು ಕಿತ್ತುಕೊಂಡಿರುವ ಆರೋಪವೂ ಕೇಳಿಬಂದಿತ್ತು. ಆದರೆ ಬಿಜೆಪಿ ಸರ್ಕಾರ ಇದರ ಬಗ್ಗೆ ಸಮಗ್ರ ತನಿಖೆ ನಡೆಸದೆ ಮುಚ್ಚಿ ಹಾಕಿತ್ತು.
ಬಿಟ್ ಕಾಯಿನ್ ಹಗರಣ ಬೆಳಕಿಗೆ ಬರುತ್ತಲೇ ರಾಜಕೀಯ ತಿರುವು ಪಡೆದುಕೊಂಡಿತ್ತು. ಹ್ಯಾಕರ್ ಶ್ರೀಕಿಯನ್ನು ಬಳಸಿ ಆಡಳಿತ ಪಕ್ಷದವರು ಭಾರೀ ಮೊತ್ತದ ಹಣ ಲಪಟಾಯಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದರು. ಪುತ್ತೂರು ಮೂಲದ ಬಿಜೆಪಿಯ ಪ್ರಭಾವಿ ರಾಜಕಾರಣಿ, ಆತನ ಪಟಾಲಂ ಭಾರೀ ಹಣ ಗಳಿಸಿದೆ ಎನ್ನುವ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಮೊನ್ನೆಯಷ್ಟೇ ಬಂಧನಕ್ಕೀಡಾದ ಬೆಂಗಳೂರಿನ ತಹಸೀಲ್ದಾರ್ ಅಜಿತ್ ರೈ ಪುತ್ತೂರು ಮೂಲದವನಾಗಿದ್ದು ಆತನಿಗೂ ಬಿಟ್ ಕಾಯಿನ್ ನಂಟು ಇರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾನೆ ಎನ್ನಲಾಗುವ ಅಜಿತ್ ರೈ ಮತ್ತು ಆತನ ಸಹಚರರಿಗೆ ಕೇವಲ ನಾಲ್ಕು ವರ್ಷದಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಎದ್ದಿದೆ. ಕೇವಲ ಭ್ರಷ್ಟಾಚಾರದಲ್ಲಿ ಈ ಪರಿ ಹಣ ಗಳಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಅಧಿಕಾರಿಗಳು ಹೇಳುತ್ತಾರೆ. ಅಜಿತ್ ರೈ ಮತ್ತು ಬಿಜೆಪಿ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದವರಿಗೆ ನೇರ ನಂಟು ಇತ್ತು. ಎರಡು ವರ್ಷಗಳ ಹಿಂದೆ ರಾಜಕಾರಣಿಯೊಬ್ಬರ ನೇತೃತ್ವದ ಧರ್ಮ ನೇಮ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಬಿಜೆಪಿ ಪ್ರಮುಖರಿಗೆ, ಸಚಿವರುಗಳಿಗೆ ಪುತ್ತೂರಿನ ಅಜಿತ್ ರೈ ಮನೆಯಲ್ಲೇ ಆತಿಥ್ಯ ವ್ಯವಸ್ಥೆ ಮಾಡಲಾಗಿತ್ತು ಎಂಬುದನ್ನು ಪುತ್ತೂರಿನ ಸ್ಥಳೀಯರು ಹೇಳುತ್ತಾರೆ.
On the directions of the new Congress government in Karnataka, the state police have constituted a Special Investigation Team (SIT) to reopen the probe into an alleged Bitcoin scam that occurred during the tenure of the previous BJP government between 2019 and 2023.
26-01-25 10:57 pm
HK News Desk
Actor Anant Nag award: ಹಿರಿಯ ನಟ ಅನಂತನಾಗ್ ಪದ್...
25-01-25 11:10 pm
ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟ್ ಹಂಚಿಕೆ ; ಮುಡಾ...
25-01-25 11:00 pm
Padma Shri awards 2025, Karnataka: ಪದ್ಮಶ್ರೀ ಪ...
25-01-25 09:58 pm
Vijayendra, B L Santosh: ರಾಜ್ಯ ಬಿಜೆಪಿ ಬಣ ಸಂಘರ...
25-01-25 06:17 pm
26-01-25 09:37 pm
HK News Desk
ಅಕ್ಬರ್, ಔರಂಗಜೇಬ್ ಬಗ್ಗೆ ಓದುತ್ತೇವೆ, ನಮ್ಮದೇ ವೀರರ...
26-01-25 01:20 pm
ಧ್ವನಿವರ್ಧಕಗಳ ಬಳಕೆ ಯಾವುದೇ ಧರ್ಮದ ಅತ್ಯಗತ್ಯ ಭಾಗವಲ...
25-01-25 11:48 am
ಪರಾಟ ತಿಂದು ಸಿಕ್ಕಿಬಿದ್ದ ನಟ ಸೈಫ್ ಆಲಿ ಖಾನ್ ಹಲ್ಲೆ...
21-01-25 11:02 pm
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
26-01-25 08:18 pm
Mangalore Correspondent
Journalist Guruvappa Balepuni, Mangalore: 'ಬಡ...
26-01-25 07:51 pm
Mangalore, Crime, Court: 2016ರಲ್ಲಿ ವೃದ್ಧ ದಂಪತ...
25-01-25 07:00 pm
Anand Kateel, Yakshagana, Accident Mangalore:...
25-01-25 05:05 pm
Mangalore Kotekar bank robbery, News Update:...
25-01-25 05:03 pm
26-01-25 11:22 pm
Mangaluru Correspondent
Mysuru Prostitution, Crime: ಮೈಸೂರಿನಲ್ಲಿ ಥೈಲ್ಯ...
26-01-25 06:08 pm
Karwar Court, Rape, Crime: ಮದುವೆಯಾಗುವುದಾಗಿ ನಂ...
26-01-25 05:07 pm
St Joseph Vaz church Mudipu, Theft, Mangalore...
25-01-25 10:57 pm
Kotekar bank robbery, Gold recovery, Update:...
24-01-25 10:27 pm