ಬ್ರೇಕಿಂಗ್ ನ್ಯೂಸ್
04-07-23 05:14 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 4: ನಟ ಸುದೀಪ್ ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ. ನಾನು ಅವರಿಗೆ ಅಡ್ವಾನ್ಸ್ ಹಣ ನೀಡಿದ್ದೇನೆ, ಯಾವಾಗ ಕೇಳಿದ್ರೂ ನಾಳೆ ಅಂತಾರೆ, ಏನು ಮಾಡಬೇಕು" ಎಂದು ನಿರ್ಮಾಪಕ ಕುಮಾರ್ ಎನ್ನುವವರು ಗಂಭೀರ ಆರೋಪ ಮಾಡಿದ್ದಾರೆ.
ನಾನು ಕೆಸಿಎನ್ ಮೂವೀಸ್‌ನಿಂದ ಬಂದವನು. ನಾನು ಸುದೀಪ್ ಅವರ ಜೊತೆ ರಂಗ ಎಸ್‌ಎಸ್‌ಎಲ್‌ಸಿ, ಮಾಣಿಕ್ಯ, ಮುಕುಂದ ಮುರಾರಿ, ಕಾಶಿ ಫ್ರಂ ವಿಲೇಜ್ ಮುಂತಾದ ಸಿನಿಮಾ ಮಾಡಿದ್ದೇನೆ. ಸ್ವಾತಿ ಮುತ್ತು, ವಿಷ್ಣುವರ್ಧನ ಸೇರಿ ಕೆಲ ಸಿನಿಮಾಗಳ ವಿತರಣೆ ಕೂಡ ಮಾಡಿದ್ದೇನೆ. ಕಳೆದ 8 ವರ್ಷಗಳಿಂದ ನಾನು ನಿಮ್ಮ ಸಿನಿಮಾ ಮಾಡುತ್ತೇನೆ ಅಂತ ಹೇಳಿಕೊಂಡು ಬರುತ್ತಲೇ ಇದ್ದಾರೆ. ನಾವು ಸುದೀಪ್ ಅವರ ಮ್ಯಾನೇಜರ್ ಬಳಿ ಕಾಂಟ್ಯಾಕ್ಟ್ ಮಾಡಿದಾಗಲೂ ಸಿನಿಮಾ ಮಾಡ್ತೀವಿ ಅಂತಲೇ ಹೇಳುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಆದಮೇಲೆ ನಮ್ಮ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ದರು. ನಂದಕಿಶೋರ್ ಅವರಿಗೆ ಹಣ ಕೊಡಿ, ಅವರು ಕಥೆ ಮಾಡಲಿ ಎಂದು ಸುದೀಪ್ ಹೇಳಿದಂತೆ ನಾವು ಮಾಡಿದ್ದೇವೆ. ಈಗ ಸುದೀಪ್ ಅವರು ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ" ಎಂದು ಕುಮಾರ್ ಅವರು ಆರೋಪ ಮಾಡಿದ್ದಾರೆ.
ನಾನು 45 ಸಿನಿಮಾಗಳ ನಿರ್ಮಾಣ ಮಾಡಿದ್ದೇನೆ , 200 ಸಿನಿಮಾ ವಿತರಣೆ ಮಾಡಿದ್ದೇನೆ. ನನ್ನಂತವರಿಗೆ ಈ ರೀತಿ ಸಮಸ್ಯೆ ಆದರೆ ಹೊಸಬರ ಕಥೆ ಏನು? ನಮ್ಮ ಚಿತ್ರರಂಗದಲ್ಲಿ ಹೀಗೆ ಆದರೆ ಏನು ಕಥೆ? ಸಿನಿಮಾ ರಂಗ ಬಾಯಿಮಾತಿನಲ್ಲಿ ನಡೆಯುತ್ತದೆ. ನಮ್ಮಿಂದ ಸುದೀಪ್ ಅವರು ಫುಲ್ ಸೆಟಲ್‌ಮೆಂಟ್ ಮಾಡಿದ್ದಾರೆ. ಸುದೀಪ್ ನನ್ನಿಂದ ಕೆಲ ಜನರಿಗೆ ಕುಮಾರ್ ಅವರು ಹಣ ಕೊಡಿಸಿದ್ದಾರೆ. ಹೀರೋ ಮೇಲಿನ ನಂಬಿಕೆಯಿಂದ ನಾವು ಹಣ ನೀಡುತ್ತೇವೆ. ಆದರೆ ಹೀಗೆ ಮಾಡಿದ್ರೆ ಏನು ಕಥೆ?" ಎಂದು ಕುಮಾರ್ ಅವರು ಆರೋಪ ಮಾಡಿದ್ದಾರೆ.
ನಮ್ಮ ಸಿನಿಮಾಗೆ ಸುದೀಪ್ ಅವರೇ ಮುತ್ತತ್ತಿ ಸತ್ಯರಾಜ್ ಅಂತ ಟೈಟಲ್ ಇಡಿಸಿದ್ದಾರೆ. ನಿಜಕ್ಕೂ ಆ ಟೈಟಲ್ ಬೇರೆಯವರ ಬಳಿ ಇತ್ತು, ಅದನ್ನು ನಾನೇ ಫೈಟ್ ಮಾಡಿ ತಗೊಂಡೆ. ಸುದೀಪ್ ಅವರು ಹೈದರಾಬಾದ್‌ನಿಂದ ರೈಟರ್ ಕರೆಸಿ ಅಂತ ಹೇಳುತ್ತಾರೆ, ನಾವು ಕರೆಸಿದ್ರೆ 1 ವಾರ ಆದರೂ ಅವರನ್ನು ಭೇಟಿ ಮಾಡೋದಿಲ್ಲ.
ನಾವು ಎಷ್ಟೇ ಬಾರಿ ಕಿಚ್ಚ ಸುದೀಪ್ ಅವರನ್ನು ಕಾಂಟ್ಯಾಕ್ಟ್ ಮಾಡಲು ಪ್ರಯತ್ನಪಟ್ಟರೂ ಕೈಗೆ ಸಿಗೋದಿಲ್ಲ. ನಿರ್ಮಾಪಕರು ನಾವು ಎಲ್ಲಿಂದ ದುಡ್ಡು ತಂದಿರುತ್ತೇವೆ ಅಂತ ನಿಮಗೆಲ್ಲ ಗೊತ್ತಿರುತ್ತದೆ, ನಾವೇ ದುಡ್ಡು ಕೊಟ್ಟು ಬೇಡುವ ಸಮಯ ಬಂದಿದೆ" ಎಂದು ಕುಮಾರ್ ಸುದೀಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
'ಒಳ್ಳೆಯತನಕ್ಕೆ ರಾಜಿ ಇಲ್ಲ'; ವಿವಾದದ ಬೆನ್ನಲ್ಲೆ ಕಿಚ್ಚ ಸುದೀಪ್ ಏಕಾಏಕಿ ಟ್ವೀಟ್ ;
ಒಳ್ಳೆಯತನಕ್ಕೆ ರಾಜಿ ಇಲ್ಲ, ಇದನ್ನು ಓದಿ, ತುಂಬ ಚೆನ್ನಾಗಿದೆ ತಿರುಚೋದಿಕ್ಕೆ ಅಥವಾ ದುರ್ಬಳಕೆ ಮಾಡಿಕೊಳ್ಳೋದಿಕ್ಕೆ ನನ್ನ ಒಳ್ಳೆಯತನ ಉಪಕರಣ ಅಲ್ಲ. ಅದು ನಿಜವಾಗಿದ್ದಾಗ ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ" ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿನಮ್ರವಾಗಿರಿ, ಸತ್ಯವಂತರಾಗಿರಿ ಎಂದು ಕೂಡ ಟ್ವೀಟ್ ಮಾಡಿದ್ದಾರೆ.
Read this quote,,, a very good one.💕🤗#GoodnessUncompromised#k46 pic.twitter.com/cOIQ38q00L
— Kichcha Sudeepa (@KicchaSudeep) July 4, 2023
Kichcha Sudeep recently released the teaser for his Kiccha 46 film. While the Kannada star was shooting for the Kalaippuli Thanu-produced film, a controversy erupted thanks to Kannada producer KCN Kumar.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm