ಬ್ರೇಕಿಂಗ್ ನ್ಯೂಸ್
06-07-23 08:58 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 6: ದೇಶದ ಅಷ್ಟೂ ರಾಜ್ಯಗಳ ಪೈಕಿ ಒಬ್ಬ ಮುಖ್ಯಮಂತ್ರಿಯಾಗಿ ಅಥವಾ ಹಣಕಾಸು ಸಚಿವನಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವಜೂಭಾಯ್ ವಾಲಾ ಅವರದ್ದಿದೆ. ಬರೋಬ್ಬರಿ 18 ಬಜೆಟ್ ಮಂಡಿಸಿದ ಹೆಗ್ಗಳಿಕೆ ಅವರದ್ದು. ಅವರನ್ನು ಬಿಟ್ಟರೆ, ಆ ಮಟ್ಟಕ್ಕೆ ಏರಿದ ಇನ್ನೊಬ್ಬ ರಾಜಕಾರಣಿ ಇಲ್ಲ. ಆದರೆ ಅಂಥ ಹೆಗ್ಗಳಿಕೆಯ ಹತ್ತಿರತ್ತಿರ ತಲುಪುತ್ತಿರುವ ಮತ್ತೊಬ್ಬ ಏಕೈಕ ರಾಜಕಾರಣಿ ಕರ್ನಾಟಕದ ಸಿದ್ದರಾಮಯ್ಯ.
ಜನತಾ ಪರಿವಾರದಿಂದ ಕಾಂಗ್ರೆಸಿಗೆ ಬಂದು ಪಕ್ಷದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದಲ್ಲದೆ, ರಾಜ್ಯದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದಾಗ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಿದ್ದರು. 2013ರಿಂದ 18ರ ವರೆಗಿನ ಐದು ವರ್ಷಗಳ ಅವಧಿಯಲ್ಲಿ ಆರು ಬಾರಿ ಬಜೆಟ್ ಮಂಡಿಸಿದ್ದರು. ಅದಕ್ಕೂ ಹಿಂದೆ, ಜನತಾ ಪರಿವಾರದಲ್ಲಿದ್ದಾಗ ಹಣಕಾಸು ಸಚಿವನಾಗಿ ಏಳು ಸಲ ಬಜೆಟ್ ಮಂಡಿಸಿದ್ದ ಅನುಭವಿ ಸಿದ್ದರಾಮಯ್ಯ.
ರಾಜ್ಯದ ಜನರ ಆರ್ಥಿಕ ಸ್ಥಿತಿಗತಿಗಳನ್ನ ಕರಾರುವಕ್ಕಾಗಿ ಲೆಕ್ಕ ಹಾಕಿ, ಬಡವರು ಮತ್ತು ರೈತಪರ ಬಜೆಟ್‌ಗಳನ್ನು ಮಂಡಿಸುವುದು ಇವರ ಹೆಚ್ಚುಗಾರಿಕೆ. ಈವರೆಗೆ, 13 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯ ಇದೀಗ 14ನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.
ಜನತಾ ಪರಿವಾರದಲ್ಲಿದ್ದಾಗ ಮೂವರು ಮುಖ್ಯಮಂತ್ರಿಗಳ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಬಜೆಟ್ ಮಂಡನೆ ಮಾಡಿದ್ದಾರೆ. ಎರಡು ಬಾರಿ ಹೆಚ್.ಡಿ. ದೇವೇಗೌಡ ಅವರು ಸಿಎಂ ಆಗಿದ್ದಾಗ, ಮೂರು ಬಾರಿ ಜೆ.ಹೆಚ್. ಪಟೇಲ್ ಮತ್ತು ಎರಡು ಬಾರಿ ಧರ್ಮ ಸಿಂಗ್ ಸರ್ಕಾರದಲ್ಲಿ ಬಜೆಟ್ ಮಂಡಿಸಿದ್ದರು. ಆನಂತರ, ಕಾಂಗ್ರೆಸ್ ಬಂದು ಎರಡನೇ ಬಾರಿಗೆ ಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿ ಪದವಿಗೇರಿದ್ದಾರೆ. ಜೊತೆಗೆ, ಹಣಕಾಸು ಖಾತೆಯನ್ನೂ ಇಟ್ಟುಕೊಂಡು ಬಜೆಟ್ ಮಂಡಿಸುತ್ತಿದ್ದಾರೆ. ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿ ಆಗಿದ್ದಲ್ಲಿ ವಜೂಭಾಯಿ ವಾಲಾ ಅವರ 18 ಬಜೆಟಿನ ದಾಖಲೆಯನ್ನು ಸರಿಗಟ್ಟಲಿದ್ದಾರೆ.
Karnataka Chief Minister Siddaramaiah will present the state budget Friday, the first since Congress ascended to power in the state following the May 10 election. The second Budget of the 2023-24 fiscal, while announcing the actual allocation required to fulfill the five pre-poll guarantees of Congress, is also expected to focus on increasing revenue generation which is essential to finance the big ticket announcements.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm