H. D. Kumaraswamy: ಬಜೆಟ್​ ಹೆಸರಿನಲ್ಲಿ ರಾಜ್ಯದ ಜನತೆಯ ಕಿವಿ ಮೇಲೆ ಹೂ ಇಟ್ಟಿದ್ದಾರೆ ; ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್ ಎಂದ ಎಚ್​.ಡಿ. ಕುಮಾರಸ್ವಾಮಿ

07-07-23 10:55 pm       Bangalore Correspondent   ಕರ್ನಾಟಕ

ಕಳೆದ ಬಾರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್‌ಗೆ ಕಾಂಗ್ರೆಸ್ ನವರು ಕಿವಿಯಲ್ಲಿ ಚೆಂಡು ಹೂ ಇಟ್ಕೊಂಡು ಬಂದಿದ್ದರು.

ಬೆಂಗಳೂರು, ಜು 7: ಕಳೆದ ಬಾರಿ ಬಸವರಾಜ ಬೊಮ್ಮಾಯಿ ಅವರ ಬಜೆಟ್‌ಗೆ ಕಾಂಗ್ರೆಸ್ ನವರು ಕಿವಿಯಲ್ಲಿ ಚೆಂಡು ಹೂ ಇಟ್ಕೊಂಡು ಬಂದಿದ್ದರು. ಈಗ ಆರು ಕೋಟಿ ಜನರ ಕಿವಿಗೆ ಇವರೇ ಹೂ ಇಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ಅನ್ನು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಬಜೆಟ್ ಮಂಡನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‌ಡಿಕೆ, ಇವತ್ತಿನ ಬಜೆಟ್ ಟೀಕೆ ಮಾಡುವ ಬಜೆಟ್ ಆಗಿದೆ. ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್ ಎಂದರು.

ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಮತ್ತು ಹಿಂದಿನ ರಾಜ್ಯ ಬಿಜೆಪಿ ಸರಕಾರವನ್ನು ನಿಂದಿಸಲು ಮೀಸಲಾದ ಬಜೆಟ್ ಇದು. ರಾಜಕೀಯ ಹೇಳಿಕೆಗಳಿಗೆ ಸೀಮಿತವಾದ ಬಜೆಟ್ ಹಾಗೂ ಅನೇಕ ಎಟಿಎಮ್ ಗಳನ್ನು ತುಂಬಿಸಿಕೊಳ್ಳಲು ಮಾಡಲಾದ ಬಜೆಟ್ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದರು.

Karnataka Budget 2023 Highlights: CM Siddaramaiah's budget speech lasted  for 2 hour 50 minutes | News9live

ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಲೆಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪನೆ ಮಾಡಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ ಇದು ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ ಅತ್ಯಂತ ಪ್ರಮುಖವಾದದ್ದು. ಹೀಗಾಗಿ ಈ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಈಗ ಆರ್ಥಿಕ ಶಿಸ್ತನ್ನ ಹಾಳುಮಾಡಿದ್ದಾರೆ. ಈ ಬಾರಿ 3 ಲಕ್ಷ 28 ಸಾವಿರ ಕೋಟಿ ಬಜೆಟ್​ನಲ್ಲಿ ಎರಡುವರೆ ಲಕ್ಷ ಕೋಟಿ ರೆವೆನ್ಯೂ ಎಕ್ಸ್​ಪೆಂಡಿಚರ್​, 27 ಸಾವಿರ ಕೋಟಿ ಸಾಲ ಮರುಪಾವತಿಗೆ ಇಟ್ಟುಕೊಂಡಿದ್ದಾರೆ. 85 ಸಾವಿರ ಕೋಟಿ ಸಾಲ ಎತ್ತುತ್ತಾರೆ. ಹಿಂದಿನ ಸರ್ಕಾರ ಆರ್ಥಿಕ ಶಿಸ್ತನ್ನ ಹಾಳುಮಾಡಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ಎಫರ್ಟ್ ಇಲ್ಲದೆ ರಾಜ್ಯದ ಜನತೆ ಖಜಾನೆ ತುಂಬಿದ್ದಾರೆ.

ಕೆಟ್ಟ ಆಡಳಿತದಲ್ಲೂ ಈ ಜನತೆಯನ್ನ ಅಭಿನಂಧಿಸುತ್ತೇನೆ. ಕೋವಿಡ್ ಸಮಸ್ಯೆಯಲ್ಲೂ, ಜನ ಹಣ ತುಂಬಿಸಿಕೊಟ್ಟಿದ್ದಾರೆ. ಆದಾಯ ಹೆಚ್ಚಿಸಲು ಅಬಕಾರಿ ಒಂದನ್ನ ಹಿಡಿದುಕೊಂಡಿದ್ದಾರೆ. ಅಬಕಾರಿ ಸುಂಕ ಹೆಚ್ಚಿಸಿದ್ದಾರೆ, ಅನ್ನಭಾಗ್ಯ ಅಕ್ಕಿಗೆ ಹಣಕೊಡಲು ಹೊರಟ್ಟಿದ್ದಿರಲ್ಲ, ಆ ದುಡ್ಡು ಇದಕ್ಕೆ ಹೋಗುತ್ತೆ. ಹಣವನ್ನ ಮನೆಗೆ ತೆಗೆದುಕೊಂಡು ಹೋಗ್ತಾನೊ ಇನ್ನೆಲ್ಲಿ ತಗೊಂಡುಹೋಗ್ತಾನೊ ಗೊತ್ತಿಲ್ಲ.

ಆನ್​ಲೈನ್​ ಗೇಮಿಂಗ್​ನಲ್ಲಿ 65 ಲಕ್ಷ ಕಳೆದುಕೊಂಡಿದ್ದಾರಲ್ಲ ಅನ್ನಭಾಗ್ಯದ ದುಡ್ಡು ಅದಕ್ಕೆ ಹೋಗುತ್ತೋ ಏನೋ ನಾ ಕಾಣೆ. ಇವರು 1995ರಿಂದ ಮಂಡಿಸಿರುವ 13 ಬಜೆಟ್ ಅನ್ನು ಅಧ್ಯಯನ ಮಾಡ್ತಿದ್ದೇನೆ. ದುಡಿಯುವ ಕೈಗೆ ಸ್ವಾವಲಂಬಿಯಾಗಲು ಬದಕಲಿಕ್ಕೆ, ಲಾಂಗ್ ಟರ್ಮ್ ಯೋಜನೆ ಏನು ಕೊಟ್ಟಿದ್ದೀರ. ನಿಮ್ಮ ಯಾವ ಗ್ಯಾರಂಟಿಗೂ ನನ್ನ ತಕರಾರಿಲ್ಲ, ಇನ್ನು ಎರಡು ಜ್ಯೋತಿ ಕೊಡಿ ನಮದ್ದೇನು ತಕರಾರಿಲ್ಲ.

HD Kumaraswamy slams Budget 2023, says its a copy paste budget, cheating people. Former CM HD Kumaraswamy Reaction after the Congress Government Announcing Karnataka Budget 2023.