ಬಿಪಿಎಲ್ ಕುಟುಂಬಕ್ಕೆ ಅಕ್ಕಿ ಬದಲು ಹಣ, ಇಂದಿನಿಂದಲೇ ಚಾಲನೆ ; ಮೂರು ತಿಂಗಳಲ್ಲಿ ಒಂದು ಬಾರಿ ಪಡಿತರ ಪಡೆದಿದ್ದರೆ ಮಾತ್ರ ನಗದು !

10-07-23 01:50 pm       Bangalore Correspondent   ಕರ್ನಾಟಕ

ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು, ಜುಲೈ 10: ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಪಡಿತರದಾರರಿಗೆ ಪ್ರತಿ ಸದಸ್ಯನಿಗೆ 5 ಕೇಜಿ ಅಕ್ಕಿ ಬದಲು 170 ರೂ.ನಂತೆ, ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಗೆ ತಕ್ಕಂತೆ ಹಣ ಜಮಾ ಆಗಲಿದೆ. ಆದರೆ ಈ ರೀತಿ ಹಣ ಪಡೆಯಲು ಬಿಪಿಎಲ್ ಕುಟುಂಬಗಳು ಕಳೆದ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಅಕ್ಕಿ ಪಡೆದಿರಬೇಕು ಎನ್ನುವ ನಿಯಮ ವಿಧಿಸಿದೆ.

ಪ್ರತಿ ತಿಂಗಳಿಗೆ ಬಿಪಿಎಲ್ ಪಡಿತರ ಚೀಟಿದಾರರಿಗೆ ರೇಶನ್ ಅಕ್ಕಿ ಸಿಗುತ್ತದೆ. ಈವರೆಗೂ ಪ್ರತಿ ಸದಸ್ಯನಿಗೆ 5 ಕೇಜಿಯಂತೆ ಅಕ್ಕಿ ನೀಡಲಾಗುತ್ತಿತ್ತು. ಅದನ್ನು ಹತ್ತು ಕೇಜಿಗೆ ಏರಿಸುತ್ತೇವೆಂದು ಕಾಂಗ್ರೆಸ್ ಚುನಾವಣೆಗೆ ಮೊದಲೇ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿತ್ತು. ಅದರಂತೆ, ಅಕ್ಕಿ ವಿತರಣೆಗೆ ಕೇಂದ್ರದಿಂದ ಪೂರೈಕೆ ಆಗದೇ ಇರುವುದರಿಂದ ಅಕ್ಕಿ ಬದಲಿಗೆ ಹಣ ನೀಡಲು ಮುಂದಾಗಿದೆ. ಈಗ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಧಾನ್ಯಗಳನ್ನು ಪಡೆದಿರಬೇಕು ಎಂದು ಹೊಸ ಷರತ್ತು ವಿಧಿಸಿದ್ದು, ಆಮೂಲಕ ಅಗತ್ಯ ಇರುವ ಕುಟುಂಬಕ್ಕೆ ಮಾತ್ರ ನಗದು ವರ್ಗಾವಣೆ ಮಾಡುತ್ತೇವೆ ಎನ್ನುವ ಸಂದೇಶ ನೀಡಿದೆ.

 

APL Card In Karnataka| APL Card Karnataka Application| APL CardLink your Aadhaar number with your Bank account | CoverNest Blog

ಹಣ ಪಡೆಯಲು ಪಡಿತರ ಚೀಟಿಯ ಮುಖ್ಯಸ್ಥರ ಆಧಾರ್ ಜೋಡಣೆ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ಜು.10ರಿಂದ ಹಣ ವರ್ಗಾವಣೆ ಶುರುವಾಗಲಿದ್ದು, ಜುಲೈ ಅಂತ್ಯದ ವೇಳೆಗೆ ಎಲ್ಲ ಕುಟುಂಬಗಳಿಗೂ ನಗದು ಜಮಾವಣೆ ಮಾಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಡಿತರ ಚೀಟಿಯಲ್ಲಿ ಕುಟುಂಬ ಮುಖ್ಯಸ್ಥರನ್ನು ನಮೂದಿಸದ ಅಥವಾ ಒಂದಕ್ಕಿಂತ ಹೆಚ್ಚು ಕುಟುಂಬ ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಗಳಿಗೆ ನಗದು ರವಾನೆಯಾಗುವುದಿಲ್ಲ. ಈ ರೀತಿ ಗೊಂದಲ ಇರುವ ಪಡಿತರ ಚೀಟಿದಾರರು ತಮ್ಮ ಕುಟುಂಬ ಮುಖ್ಯಸ್ಥರನ್ನು ನಮೂದಿಸಬೇಕು ಮತ್ತು ಆಧಾರ್, ಬ್ಯಾಂಕ್ ಖಾತೆ ಜೋಡಣೆ ಆಗಿರದೇ ಇದ್ದಲ್ಲಿ ಅವನ್ನು ಈ ತಿಂಗಳ ಒಳಗೆ ಮಾಡಿಸಬೇಕಾಗಿದೆ.

ಈಗಾಗಲೇ ಆಧಾರ್ ಜೋಡಣೆ ಆಗಿರುವವರು ಪಡಿತರದಲ್ಲಿ ಹಣ ಪಡೆಯುವುದಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ. ಬ್ಯಾಂಕ್ ಖಾತೆಗಳ ಮಾಹಿತಿ ನೀಡುವ ಅಗತ್ಯ ಇರುವುದಿಲ್ಲ. ಮಾಹಿತಿ ಪ್ರಕಾರ, 99 ಶೇಕಡಾ ಪಡಿತರ ಚೀಟಿಗಳು ಆನ್ಲೈನ್ ಮತ್ತು ಆಧಾರ್ ಜೋಡಣೆಯಾಗಿದೆ. ಶೇ.82 ಶೇಕಡಾದಷ್ಟು ಅಂದರೆ 1.6 ಕೋಟಿ ಪಡಿತರ ಚೀಟಿಗಳಲ್ಲಿ ಬ್ಯಾಂಕ್ ಖಾತೆ ಜೋಡಣೆಯೂ ಸರಿಯಾಗಿದೆ. ಹೀಗಾಗಿ ನಗದು ವರ್ಗಾವಣೆಗೆ ಮತ್ತೆ ಅರ್ಜಿ ಸಲ್ಲಿಸುವ ಪ್ರಮೇಯ ಬರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

The state has 99% 1.28 crore ration card of Antyodaya Anna Yojana and Priority Households with 82% linked to active bank accounts. "The cash will be transferred to those card holders. The remaining card holders will be intimated to open new accounts," an official statement said on Sunday.