Separate room for Namaz inside Karnataka Vidhana Soudha: ವಿಧಾನಸೌಧದಲ್ಲಿ ನಮಾಜ್ ಗೆ ಅವಕಾಶ ಮಾಡಿಕೊಡಿ ; ಪರಿಷತ್ ಸಭಾಪತಿಗೆ ಎಂಎಲ್ಸಿ ಫಾರೂಕ್ ಒತ್ತಾಯ

10-07-23 10:58 pm       Bangalore Correspondent   ಕರ್ನಾಟಕ

ವಿಧಾನಸೌಧದಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಿ ಎಂದು ಜೆಡಿಎಸ್ ಪರಿಷತ್ ಸದಸ್ಯ ಫಾರೂಕ್ ಒತ್ತಾಯಿಸಿದ್ದಾರೆ.

ಬೆಂಗಳೂರು, ಜುಲೈ 10: ವಿಧಾನಸೌಧದಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಿ ಎಂದು ಜೆಡಿಎಸ್ ಪರಿಷತ್ ಸದಸ್ಯ ಫಾರೂಕ್ ಒತ್ತಾಯಿಸಿದ್ದಾರೆ. 

ವಿಧಾನಸೌಧದಲ್ಲಿ ನಮಗೆ ನಮಾಜ್‍ಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿಧಾನ ಪರಿಷತ್‍ನಲ್ಲಿ ಸಭಾಪತಿಗಳ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ ಪಾಟೀಲ್, ಸಭಾದ್ಯಕ್ಷರ ಕೊಠಡಿಯಲ್ಲಿ ಸಭೆ ಕರೆದ ವೇಳೆ ನಾಯಕರ ಮಾತುಗಳನ್ನು ಕೇಳಿ, ಅಧ್ಯಕ್ಷರು ಏನು ಅಪೇಕ್ಷೆ ಮಾಡುತ್ತಾರೆ ಎಂದು ಒಂದು ನಿರ್ಣಯ ಮಾಡಲು ಸರ್ಕಾರ ತೀರ್ಮಾನಿಸುತ್ತದೆ ಎಂದರು.  

ಶಾಲಾ ಪಠ್ಯದಲ್ಲಿ ಜಾತ್ಯಾತೀತ ಪಠ್ಯ ತರಬೇಕು ಎಂದ ಅಬ್ದುಲ್ ಜಬ್ಬಾರ್ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಎಂಎಲ್‍ಸಿ ನಾರಾಯಣಸ್ವಾಮಿ, ಯಾರು ಜಾತ್ಯಾತೀತ ಪಠ್ಯ ತಂದಿದ್ದರು. ಯಾರು ಏನು ಸೇರಿಸಿದ್ರು ಅಂತ ಚರ್ಚೆ ಆಗಲಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ಜಬ್ಬಾರ್, ಜಾತ್ಯಾತೀತ ಅಂದ್ರೆ ನಿಮಗೆ ಯಾಕೆ ಚುರ್ ಅನ್ನುತ್ತೆ. ಜಾತ್ಯಾತೀತ ಕಂಡರೆ ಆಗೊಲ್ಲವಾ ಅಂದಿದ್ದಾರೆ. ಇಬ್ಬರನ್ನೂ ಸಭಾಪತಿ ಸಮಾಧಾನ ಪಡಿಸಿದ್ದಾರೆ.

Separate room for Namaz inside Karnataka Vidhana Soudha demands MLC Farooq.