Jain monk murder, Pramod Muthalik: ಜೈನ ಮುನಿ ಹತ್ಯೆ ರಾಜ್ಯಕ್ಕೆ ಕಳಂಕ, ಆರೋಪಿಗಳಿಗೆ ಬುಲ್ಡೋಜರ್ ಹತ್ತಿಸಿ, ಉತ್ತರ ಪ್ರದೇಶ ಮಾದರಿ ಕ್ರಮ ಕೈಗೊಳ್ಳಿ ; ಪ್ರಮೋದ್ ಮುತಾಲಿಕ್ ಆಗ್ರಹ 

11-07-23 02:43 pm       HK News Desk   ಕರ್ನಾಟಕ

ಮುನಿಗಳ ಒಂಟಿತನ ನೋಡಿ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ. ಇದು ಸಾಮಾನ್ಯ ಕೊಲೆ ಅಲ್ಲ.‌‌ ಇದು ಕುರಿ ಕೋಳಿ ಕತ್ತರಿಸುವ ರೀತಿ ಮಾಡಿದ್ದಾರೆ.‌

ಹುಬ್ಬಳ್ಳಿ, ಜುಲೈ 11: ಮುನಿಗಳ ಒಂಟಿತನ ನೋಡಿ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ. ಇದು ಸಾಮಾನ್ಯ ಕೊಲೆ ಅಲ್ಲ.‌‌ ಇದು ಕುರಿ ಕೋಳಿ ಕತ್ತರಿಸುವ ರೀತಿ ಮಾಡಿದ್ದಾರೆ.‌ ತಾಲಿಬಾನ್ ಮಾನಸಿಕ ಸ್ಥಿತಿ ಇರುವಂತವರು ಯಾರು ಎಂಬುದನ್ನು ಸರ್ಕಾರ ಹೊರ ಹಾಕಬೇಕು. ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ಆಗಬೇಕು. ಬುಲ್ಡೋಜರ್ ಮೂಲಕ ಆರೋಪಿಗಳ ಮನೆ ಬೀಳಿಸಿ, ಆಸ್ತಿ ಜಪ್ತಿ ಮಾಡಬೇಕು ಎಂದು ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. 

ಹುಬ್ಬಳ್ಳಿಯ ವರೂರ ನವಗ್ರಹ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿದ ಮುತಾಲಿಕ್, ಮುನಿಗಳ ಹತ್ಯೆ ವಿಚಾರದಲ್ಲಿ ಸುದ್ದಿಗೋಷ್ಟಿ ನಡೆಸಿದರು. ಬಿಜೆಪಿಯವರು ಸಿಬಿಐ ಗೆ ಒಪ್ಪಿಸಲು ಹೇಳ್ತಾ ಇದ್ದಾರೆ.‌ ನಿಮ್ಮ ಪಕ್ಷದ ಇದ್ದಾಗ ಸಿಬಿಐ ಗೆ ಒಪ್ಪಿಸಿದ್ದು ಏನಾಯ್ತು? ನೀವು ಬಾಯಿ ಮುಚ್ಕೊಂಡಿರಬೇಕು. ನಮ್ಮ ಪೊಲೀಸರು ಸಮರ್ಥರಾಗಿದ್ದಾರೆ. ನಮ್ಮ ಸಿಸ್ಟಮ್ ಇಷ್ಟು ದುರ್ಬಲ ಇರುವುದರಿಂದ ಒಂದು ವರ್ಷದಲ್ಲಿ ಜಾಮೀನು ಪಡೆದು ಹೊರ ಬರ್ತಾರೆ. ಅದಕ್ಕಾಗಿ ಇಂಥವರ ಮೇಲೆ ಉತ್ತರ ಪ್ರದೇಶದ ರೀತಿಯಲ್ಲಿ ತುರ್ತಾಗಿ ಶಿಕ್ಷೆ ಜಾರಿ ಮಾಡಬೇಕು. ಯಾವುದೇ ಧರ್ಮ ಜಾತಿ ಇರಲಿ ಅವರಿಗೆ ಶಿಕ್ಷೆ ಕೊಡಲೇ ಬೇಕು. 

Jain Monk Murder Case Karnataka Bjp Demand For Investigation | Karnataka:  जैन मुनि के टुकड़े-टुकड़े कर फेंकी लाश, कर्नाटक बीजेपी बोली- जल्द हो हत्या  की जांच

ಅಹಿಂಸಾವಾದಿಗಳನ್ನು ಕೊಲೆ ಮಾಡಿರುವುದು ಕರ್ನಾಟಕಕ್ಕೆ ದೊಡ್ಡ ಕಳಂಕ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾರನ್ನಾದ್ರೂ ರಕ್ಷಣೆ ಮಾಡಿದ್ರೆ ನಾಳೆ ಇದೇ ಮಚ್ಚು ನಿಮ್ಮ ಮನೆ ಬಾಗಿಲಿಗೆ ಬರುತ್ತೆ ಎಂದರು ಮುತಾಲಿಕ್. 

ವಕೀಲರ ಸಂಘಕ್ಕೆ ಮನವಿ ಕೊಡ್ತೇನೆ. ಆ ಮೂರು ವ್ಯಕ್ತಿಗಳಿಗೂ ಜಾಮೀನು ಕೊಡಬಾರದು. ನೀವು ಅವರ ದುಡ್ಡಿಗೆ ಆಸೆ ಬಿದ್ರೆ ನೀವು ಈ ಕ್ರೌರ್ಯಕ್ಕೆ ಸಾಥ್ ನೀಡಿದಂತೆ ಎಂದು ಹೇಳಿದ ಮುತಾಲಿಕ್, ಕೃತ್ಯದ ಹಿಂದೆ ಉಗ್ರ ಸಂಘಟನೆ ಕೈವಾಡ ಇದೆಯಾ ಎಂಬ ಪ್ರಶ್ನೆಗೆ, ತನಿಖೆಯಿಂದಲೇ ಹೊರಬೀಳಬೇಕು  ಎಂದರು. ಇದರಲ್ಲಿ ಮುಚ್ಚಿಹಾಕುವಂತ ಪ್ರಯತ್ನ ಮಾಡಿದ್ರೆ ಪೊಲೀಸ್ ಇಲಾಖೆಯನ್ನೂ ಬಿಡೋದಿಲ್ಲ.‌ 6 ಲಕ್ಷ ರೂ. ತಗೊಂಡಿದ್ದಕ್ಕೆ ಕೊಲೆ ಆಗಿದೆ ಅಂತಿದ್ದಾರೆ, ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮೂರೂ ಪಕ್ಷದವರು ಮೊದಲು ಬಾಯಿ ಮುಚ್ಚಿಕೊಂಡಿರಬೇಕು. ತನಿಖೆಗೆ ಮುಕ್ತ ಅವಕಾಶ ಕೊಡಬೇಕು. ರಾಜ್ಯ ಪೊಲೀಸರು ತನಿಖೆ ಮಾಡ್ತಾರೆ, ಅವರಿಗೆ ಅರ್ಹತೆ ಇದೆ. ಪೂರ್ಣ ಸ್ವಾತಂರ್ತ್ಯ ಕೊಡಬೇಕು ಅಷ್ಟೆ ಎಂದರು. 

ಹಿಂದೆ ಬಿಜೆಪಿ ಅವರಿದ್ದಾಗ ಜನರಿಗೆ ಸುರಕ್ಷತೆ ಇತ್ತು ಅಂತ ಹೇಳ್ತೀರಾ ಎಂಬ ಪ್ರಶ್ನೆಗೆ, ಬಿಜೆಪಿ ಅವರು ನಾಲಾಯಕರಿದ್ದೀರಿ, ಹೇಳೋಕೆ ನೈತಿಕತೆ ಇಲ್ಲಾ.‌ ಅದಕ್ಕೆ ನಿಮ್ಮನ್ನ ಚುನಾವಣೆಯಲ್ಲಿ ಮಲಗಿಸಿ ಬಿಟ್ಟಿದ್ದಾರೆ. ಇದೇ ಬಿಜೆಪಿ ಸರ್ಕಾರದಲ್ಲಿ ಗೋವನ್ನು ರಕ್ಷಣೆ ಮಾಡಲು ಹೋದ್ರೆ ರೌಡಿ ಶೀಟರ್ ಹಾಕ್ತಾರೆ. ಬಿಜೆಪಿಯವರು ಬೇರೆ ಏನಾದ್ರೂ ನಾಟಕ ಮಾಡ್ತಾರೆ.ವಕಾಂಗ್ರೆಸ್ ನವರು ಇನ್ನೂ ಪಾಠ ಕಲ್ತಿಲ್ಲ, ನಾವು ಕಲಿಸ್ತೀವಿ.‌ ಹಿಂದುಗಳನ್ನು ತುಳಿಯುವುದೇ ನಿಮ್ಮ ಕೆಲಸನಾ ?  ನೀವು ಹಿಂದುತ್ವ, ದೇಶದ ಸುರಕ್ಷತೆ ವಿಷಯದಲ್ಲಿ ಮುಂದೆ ಬರಲ್ಲ, ನಾಳೆ ನಿಮ್ಮ ಮಠಕೂ ಇಂಥದ್ದೇ ಸ್ಥಿತಿ ಬರುತ್ತೆ. ಬೆಳಗ್ಗೆ 5 ಗಂಟೆಗೆ ಕೂಗೋದು ಡಬಲ್. ಅವರ ದರ್ಪಕ್ಕೆ ಕಾಂಗ್ರೆಸ್ ಕುಮ್ಮಕ್ಕೂ ಕೊಡ್ತಾ ಇದೆ ಎಂದರು. 

ಮುಸ್ಲಿಂ ಸಮುದಾಯ ವಿಧಾನ ಸಭೆಯಲ್ಲಿ ನಮಾಜ್ ಮಾಡಲು ಅವಕಾಶ ಕೊಡ್ಬೇಕು ಅಂತ ಕೇಳಿರುವ ವಿಷಯಕ್ಕೆ ಪ್ರಸ್ತಾಪಿಸಿ, ವಿಧಾನಸಭೆಯನ್ನು ಮಕ್ಕಾ ಮದೀನಾ ಅಂತ ತಿಳಿದುಕೊಂಡಿದ್ದೀರಾ?  ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಸಂವಿಧಾನದಲ್ಲಿದ್ದೀರಿ ಅನ್ನೋದನ್ನ ನೆನಪಿಟ್ಟುಕೊಳ್ಳಿ. ನಾವು ಇದರ ಬಗ್ಗೆ ಹೋರಾಟ ಮಾಡ್ತೀವಿ ಎಂದರು.

Jain monk murder, accused house should be destroyed in Bulldozer like Uttar Pradesh format says Pramod Muthalik.