ಬ್ರೇಕಿಂಗ್ ನ್ಯೂಸ್
12-07-23 12:21 pm HK News Desk ಕರ್ನಾಟಕ
ಮಂಡ್ಯ, ಜುಲೈ 12: ಮಂಗಳೂರಿನಲ್ಲಿ ಜಿಪಂ ಸಿಇಓ, ಅಪರ ಜಿಲ್ಲಾಧಿಕಾರಿ ಆಗಿ ಸರಳ ವ್ಯಕ್ತಿತ್ವ ಮತ್ತು ಕರ್ತವ್ಯ ದಕ್ಷತೆಯಿಂದ ಹೆಸರು ಮಾಡಿದ್ದ ಡಾ.ಕುಮಾರ್ ಇದೀಗ ಮಂಡ್ಯದಲ್ಲಿ ಜಿಲ್ಲಾಧಿಕಾರಿಯಾಗಿಯೂ ಜನಪರ ಕೆಲಸದಿಂದ ಗಮನ ಸೆಳೆದಿದ್ದಾರೆ. ನಾಗಮಂಗಲ ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿ, ಅಲ್ಲಿ ಪ್ಲೇಟ್ ಊಟಕ್ಕೆ ದುಬಾರಿ ದರ ಕೀಳುತ್ತಿದ್ದುದನ್ನು ನೋಡಿ ಶಾಕ್ ಆಗಿದ್ದಾರೆ.
ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ, ಸಾಂಬಾರ್ ಅಥವಾ ಒಂದು ಪ್ಲೇಟ್ ಅನ್ನ ಸಾಂಬರ್‌ಗೆ 92 ರು. ಬಿಲ್ ಮಾಡುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿ, ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಕುಂದು ಕೊರತೆಗಳ ಬಗ್ಗೆ ಹೊರರೋಗಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾಗಲೇ ಒಳರೋಗಿಗಳಿಗೆ ನೀಡುತ್ತಿರುವ ಊಟದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಒಳರೋಗಿಗಳ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ, ಆಡಳಿತದ ಖರ್ಚು-ವೆಚ್ಚಗಳ ಕಡತ ಪರಿಶೀಲನೆ ನಡೆಸಿದರು. ಈ ವೇಳೆ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ ಸಾಂಬರ್ ಅಥವಾ ಒಂದು ಪ್ಲೇಟ್ ಅನ್ನ ಸಾಂಬರ್‌ಗೆ 92 ರೂ., ಒಂದು ಬಾಳೆ ಹಣ್ಣಿಗೆ 8 ರು. ಹಾಗೂ ಒಂದು ಮೊಟ್ಟೆಗೆ 10 ರೂ ಬಿಲ್ ಮಾಡುತ್ತಿರುವುದನ್ನು ಕಂಡು ಕಿಡಿಯಾದರು.
ಖಾಸಗಿ ಹೋಟೆಲ್‌ಗಳಲ್ಲೇ ಕನಿಷ್ಠ 40 ರಿಂದ 60 ರು.ಗೆ ಮುದ್ದೆ, ಚಪಾತಿ, ಅನ್ನ ಸಾಂಬರ್, ಒಳ್ಳೆ ಊಟ ಸಿಗುತ್ತದೆ. ಆಸ್ಪತ್ರೆ ಹೊರಗಿನ ಇಂದಿರಾ ಕ್ಯಾಂಟಿನ್‌ನಲ್ಲೂ 10 ರು.ಗೆ ಅನ್ನ ಸಾಂಬರ್ ಸಿಗುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಅನ್ನ-ಸಾಂಬಾರ್ ಗೆ 92 ರೂ. ಮಾಡ್ತಿದ್ದೀರಲ್ರೀ.. ನಾನೂ ಮುದ್ದೆ ತಿನ್ನುವವನೇ. ಒಂದು ಮುದ್ದೆ ತಯಾರಿಗೆ ಹೆಚ್ಚಂದ್ರೆ 10ರಿಂದ 15 ರು. ಖರ್ಚಿರೋದು. ಆದರೆ, ಇಲ್ಲಿ 92 ರೂ. ಮಾಡಿ ಬಡ ರೋಗಿಗಳಿಂದ ಹಣ ಕೇಳುತ್ತಿದ್ದೀರಾ..? ಈ ಊಟದ ಟೆಂಡರ್ ಅನುಮೋದಿಸಿದ್ದು ಯಾರ್ರೀ.. ಎಂದು ಸ್ಥಳದಲ್ಲಿದ್ದ ವೈದ್ಯರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಆಸ್ಪತ್ರೆ ಊಟಕ್ಕೆ ನೀಡಿರುವ ಟೆಂಡರ್ ಅವಧಿ ಕಳೆದ ಮಾರ್ಚ್ ತಿಂಗಳಿಗೆ ಮುಕ್ತಾಯವಾಗಿದ್ದರೂ ಈವರೆಗೂ ಯಾಕೆ ಹೊಸ ಟೆಂಡರ್ ಕರೆದಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ತಡಬಡಾಯಿಸಿದ ಗುಮಾಸ್ತ ಮೋಹನ್, ಇಲಾಖೆಯ ಮೇಲಾಧಿಕಾರಿಗಳಿಂದ ಅನುಮತಿ ಬಂದಿಲ್ಲ. ಹಾಗಾಗಿ ಟೆಂಡರ್ ಕರೆದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು. ಕಡತಗಳ ಪರಿಶೀಲನೆ ನಡೆಸಿದ ಬಳಿಕ ಒಳರೋಗಿಗಳ ಊಟದ ದುಬಾರಿ ವೆಚ್ಚದ ಬಗ್ಗೆ ತನಿಖೆ ನಡೆಸಿ, ಶೀಘ್ರದಲ್ಲಿ ವರದಿ ನೀಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ನಯೀಮುನ್ನೀಸಾ ಅವರಿಗೆ ತಾಕೀತು ಮಾಡಿದರು.
A lump, sambar or a plate of rice sambar, which is given to inpatients at a public hospital in the town, costs Rs 92. Mandya Deputy Commissioner Dr. Kumar, who was shocked to see the bill being paid, reprimanded the doctors at the hospital.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
08-07-26 11:04 pm
HK News Desk
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರದಿಂದ 49.22...
08-07-26 01:17 pm
ರಾಮ ಮಂದಿರ ದೇಣಿಗೆ ಲೂಟಿ ; ಹಿಂದೂ ಸಂಘಟನೆಗಳು ಯಾಕೆ...
07-07-26 11:13 pm
09-07-26 05:34 pm
HK News Staffer
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am
ಅಡುಗೆ ವಿಚಾರದಲ್ಲಿ ಹೆಂಡತಿಯೊಂದಿಗೆ ಜಗಳ ; ಅಡ್ಡ ಬಂದ...
07-07-26 08:07 pm
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm