ಆನ್‌ಲೈನ್‌ ಆ್ಯಪ್ ಮೂಲಕ ಸಾಲ ; ಬ್ಯಾಂಕ್ ಟಾರ್ಚರ್​ ಗೆ ಬೇಸತ್ತು "ಥ್ಯಾಂಕ್ಸ್ ಗುಡ್​ ಬೈ" ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ 

12-07-23 08:07 pm       Bangalore Correspondent   ಕರ್ನಾಟಕ

ಚೀನಾ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಟಾರ್ಚರ್ ತಾಳದೆ ನೇಣಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಎಚ್​ಎಂಟಿ ಕ್ವಾರ್ಟರ್ಸ್​ನಲ್ಲಿ ನಡೆದಿದೆ.

ಬೆಂಗಳೂರು, ಜುಲೈ 12: ಚೀನಾ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಟಾರ್ಚರ್ ತಾಳದೆ ನೇಣಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಎಚ್​ಎಂಟಿ ಕ್ವಾರ್ಟರ್ಸ್​ನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ತೇಜಸ್ ಎಂದು ಗುರುತಿಸಲಾಗಿದ್ದು, ಸ್ನೇಹಿತ ಮಹೇಶ್​ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ‌ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋನ್ ಕೊಟ್ಟವರು ತೇಜಸ್ ಗೆ ಇಎಂಐ ಕಟ್ಟುವಂತೆ ಟಾರ್ಚರ್​ ನೀಡುತ್ತಿದ್ದರಂತೆ.

ತೇಜಸ್ ಟಾರ್ಚರ್ ತಾಳದೆ ಡೆತ್ ನೋಟ್ ಬರೆದಿಟ್ಟು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ತಾಯಿಯ ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

‘ಅಪ್ಪ ಅಮ್ಮ ನನ್ನನ್ನ ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ’ ‘ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ, ಇದು ನನ್ನ ಕೊನೆ ತೀರ್ಮಾನ’ ‘ಥ್ಯಾಂಕ್ಸ್ ಗುಡ್​ ಬೈ’ ಎಂದು ಡೆತ್ ನೋಟ್​ ಬರೆದಿಟ್ಟು ತೇಜಸ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಗೆ ತೇಜಸ್ ಪೋಷಕರು ದೂರು ನೀಡಿದಿದ್ದಾರೆ.

In a tragic incident, a student, who had taken a loan through a Chinese app, committed suicide by hanging himself at hmt quarters in Bengaluru on Wednesday. The student, identified as Tejas, had taken loans for his friend Mahesh through Silspey, Kisat and Kotak Mahindra. But for the past one year, his friend Mahesh has not paid the EMI. In this context, the lenders were harassing Tejas to pay the EMI.