ಕೋಲಾರದಲ್ಲಿ ಬಂಗಾರದ ಬೆಳೆ ಟೊಮೆಟೋಗೆ ಕಳ್ಳತನ ಭೀತಿ ; ರೈತರ ತೋಟ ಮತ್ತು ಮಾರುಕಟ್ಟೆಗೆ ಸಿಸಿಟಿವಿ, ಪೊಲೀಸರ ಭದ್ರತೆ ! 

13-07-23 11:04 pm       HK News Desk   ಕರ್ನಾಟಕ

ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೇಜಿಗೆ 200 ರೂ. ತಲುಪಿದ್ದು ಕಳ್ಳತನದ ಭಯ ಶುರುವಾಗಿದೆ. ದರ ಹೆಚ್ಚಾದ್ದರಿಂದ ಟೊಮೆಟೋ ಕೃಷಿಕರು ಕಳವು ಆತಂಕದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಮಾಡಿಕೊಂಡಿದ್ದಾರೆ.

ಕೋಲಾರ, ಜುಲೈ 13: ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೇಜಿಗೆ 200 ರೂ. ತಲುಪಿದ್ದು ಕಳ್ಳತನದ ಭಯ ಶುರುವಾಗಿದೆ. ದರ ಹೆಚ್ಚಾದ್ದರಿಂದ ಟೊಮೆಟೋ ಕೃಷಿಕರು ಕಳವು ಆತಂಕದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಮಾಡಿಕೊಂಡಿದ್ದಾರೆ. ‌ಕೋಲಾರದ ತರಕಾರಿ ಮಾರುಕಟ್ಟೆಯಲ್ಲಿಯೂ ರಕ್ಷಣೆಗೆ ಪೊಲೀಸರನ್ನು ನೇಮಿಸಲಾಗಿದೆ.

ಕೋಲಾರ ಜಿಲ್ಲೆಯ ಕೆಲವು ತೋಟಗಳಲ್ಲಿ ಈಗಾಗಲೇ ಟೊಮೆಟೊ ಕಳವು ಪ್ರಕರಣ ನಡೆದಿದ್ದು ಕಳವು ತಡೆಯಲು ತೋಟಗಳಲ್ಲಿ ರೈತರು ಹಗಲಿರುಳು ಕಾವಲು ನಿಲ್ಲುತ್ತಿದ್ದಾರೆ. ಕೋಲಾರದ ಟೊಮೆಟೊ ಮಾರುಕಟ್ಟೆಯಲ್ಲಿ ನಿತ್ಯವೂ ಕೋಟ್ಯಾಂತರ ರುಪಾಯಿ ವಹಿವಾಟು ನಡೆಯುತ್ತದೆ. ಟೊಮೆಟೊಗೆ ಬಂಗಾರದ ಬೆಲೆ ಬಂದಿರೋದ್ರಿಂದ ಮಾರುಕಟ್ಟೆಯಲ್ಲಿ ರಕ್ಷಣೆ ಅನಿವಾರ್ಯ ಆಗಿದ್ದು ಬೆಳೆಗಾರರೇ ತಮ್ಮ ಟೊಮೆಟೋ ದಾಸ್ತಾನಿನ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. 

ಹೀಗಾಗಿ ಟೊಮೆಟೊ ಮಾರುಕಟ್ಟೆಯಲ್ಲಿ ಭದ್ರತೆಗಾಗಿ ಸಿಸಿ ಕ್ಯಾಮರಾ ಮತ್ತು ಖಾಸಗಿ ರಕ್ಷಕರನ್ನು ನೇಮಿಸಲಾಗಿದೆ. ಜೊತೆಗೆ, ಪೊಲೀಸರ ಭದ್ರತೆಯನ್ನೂ ಒದಗಿಸಲಾಗಿದೆ. ‌ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳಾಗಿದ್ದು ಈ ಭಾಗದ ರೈತರು ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ದರ ಇಲ್ಲದೇ ಇದ್ದಾಗ ರಸ್ತೆಗೆ ಸುರಿಯುತ್ತಿದ್ದ ರೈತರು ಒಂದೊಂದು ಟೊಮ್ಯಾಟೊ ಕೂಡ ಅಮೂಲ್ಯ ಎನ್ನುವ ರೀತಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಭದ್ರತೆ ನಿಲ್ಲುತ್ತಿದ್ದಾರೆ.

The price of tomatoes in the market has gone up by Rs 200 per kg. The fear of theft has begun. Tomato growers have taken up police security in the wake of fears of theft as the prices have gone up. Police have also been deployed at the vegetable market in Kolar for protection.