ಬ್ರೇಕಿಂಗ್ ನ್ಯೂಸ್
14-07-23 06:17 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 14: ದೇಶದಲ್ಲಿ ಬಿಜೆಪಿ ಅವನತಿ ಕರ್ನಾಟಕದಿಂದಲೇ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ ಮಂಕಾಗಿದೆ ಎನ್ನುವುದನ್ನು ವಿಧಾನಸಭೆ ಚುನಾವಣೆಯಲ್ಲಿ ನಿರೂಪಿಸಿದ್ದಾರೆ. ಮೋದಿಯವರು ರಾಜ್ಯದ ಯಾವ ಜಿಲ್ಲೆಯಲ್ಲಿ ಪ್ರಚಾರ ಮಾಡಿದ್ದರೋ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿದೆ. ಇನ್ನು ಮುಂದೆ ರಾಜ್ಯದ ಬಿಜೆಪಿ ನಾಯಕರು ಮೋದಿ ಮೇಲೆ ಅವಲಂಬಿತರಾಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿ ಮಾತು ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕಾಗಿ ಒಂದೇ ತಿಂಗಳ ಅಂತರದಲ್ಲಿ 28 ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ. ಯಾವ ಪ್ರಧಾನಿ ಕೂಡ ರಾಜ್ಯದ ಚುನಾವಣೆಗೆ ಇಷ್ಟು ಮಹತ್ವ ನೀಡಿದ ನಿದರ್ಶನ ಇಲ್ಲ. ಆದರೆ ಮೋದಿ ಪ್ರವಾಸ ಮಾಡಿದ ಕಡೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರು.
ಮೋದಿ ಬಗ್ಗೆ ದೇಶದಲ್ಲಿ ಪಾಪ್ಯುಲಾರಿಟಿ ಇದೆ. ಅದರಲ್ಲಿ ಯಾವುದೇ ಡೌಟ್ ಇಲ್ಲ. ಆದರೆ ಅದು ಈವಾಗ ಮಂಕಾಗಿದೆ. ರಾಜ್ಯದಿಂದಲೇ ಶುರುವಾಗಿದೆ ನಿಮ್ಮ ಅವನತಿ. ನರೇಂದ್ರ ಮೋದಿ ಹೊಗಳುವುದು ಬಿಟ್ಟರೆ ಬಿಜೆಪಿಗೆ ಏನಿದೆ ಕೆಲಸ ? ಎಂದು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಕಾಂಗ್ರೆಸ್ ನಲ್ಲಿ ಎರಡು ಬಾರಿ ಸಿಎಂ ಆಗಲು ಅವಕಾಶ ಸಿಕ್ತು, ಅದಕ್ಕಾಗಿ ಪಕ್ಷಕ್ಕೆ ಋಣಿ ಆಗಿದ್ದೇನೆ ಎಂದರು.
ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತು ಸಿದ್ಧಾಂತ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿರುವ ಕಾರಣದಿಂದ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಬೇಕಾಯಿತು ಎಂದರು.
"ಮನುಷ್ಯ ಜಾತಿ ತಾನೊಂದೇ ವಲಂ" ಎನ್ನುವ ಕವಿ ಪಂಪ ಕನ್ನಡ ಸಂಸ್ಕೃತಿಯನ್ನು ಅರಳಿಸಿದರು. ಪಂಪ, ಬಸವಣ್ಣ ಹೀಗೆ ಮಹಾನುಭಾವರ ಹೆಸರನ್ನು ಪ್ರಸ್ತಾಪಿಸಿ ಇವರೆಲ್ಲರ ಆಶಯಗಳೇ ನಮ್ಮ ಸಂವಿಧಾನದಲ್ಲಿದೆ. ಆದರೆ ತಾನು ಮಾತ್ರ ಶ್ರೇಷ್ಠ ಎನ್ನುವ ಹಿಟ್ಲರ್ ಒಬ್ಬ ಮತಾಂಧ. ಆತ ಮನುಷ್ಯ ವಿರೋಧಿ. ಹಿಟ್ಲರ್ ತನ್ನ ತಿಕ್ಕಲುತನದಿಂದ ಹೇಗೆ ಮನುಷ್ಯರ ಮಾರಣ ಹೋಮಕ್ಕೆ ಕಾರಣನಾದ ಎಂದು ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಮಾತಿಗೆ ಅಡ್ಡಿಪಡಿಸಿದರು. ಈ ವೇಳೆ ಮುಖ್ಯಮಂತ್ರಿ, 'ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು?" ಎಂದು ಪ್ರಶ್ನಿಸಿದರು.
ನಾನು ಮಾತಾಡುವಾಗ ಯಾರೂ ದಾರಿ ತಪ್ಪಿಸಲು ಸಾದ್ಯವಿಲ್ಲ. ಈ ಚುನಾವಣೆಯಲ್ಲಿ ಜನ ಕೋಮುವಾದದ ವಿರುದ್ದ, ಭ್ರಷ್ಟಾಚಾರದ ವಿರುದ್ದ, ಬೆಲೆ ಏರಿಕೆ ವಿರುದ್ದ ಮತ ಕೊಟ್ಟಿದ್ದಾರೆ. ನಮ್ಮ ಐದು ಗ್ಯಾರಂಟಿಗಳ ಪರ ಮತ ನೀಡಿದ್ದಾರೆ. ನೀವು ಪ್ರಣಾಳಿಕೆ ಕೊಟ್ಟಿದ್ದೀರಿ, ಜೆಡಿಎಸ್ ಕೂಡ ಪಂಚರತ್ನಗಳನ್ನು ಹೇಳಿಕೊಂಡು ಹೋದ್ರು. ಕುಮಾರಸ್ವಾಮಿ 123 ಸ್ಥಾನ ಬರಲಿಲ್ಲ ಅಂದ್ರೆ ಪಾರ್ಟಿ ವಿಸರ್ಜನೆ ಮಾಡ್ತೀನಿ ಅಂತ ಹೇಳಿದ್ದರು. ಪಾಪ ಅವರು 19 ಸ್ಥಾನಕ್ಕೆ ಬಂದು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
BJP is on the way to decline in India. It started from Karnataka itself. Modi wave, Modi influence is fading. Chief Minister Siddaramaiah lashed out at the BJP saying that wherever Prime Minister Narendra Modi campaigned heavily in Karunad, the BJP lost miserably.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm