ಬ್ರೇಕಿಂಗ್ ನ್ಯೂಸ್
15-07-23 04:29 pm HK News Desk ಕರ್ನಾಟಕ
ಹಾಸನ, ಜುಲೈ 15: ಉತ್ತರ ಭಾರತದ ಕಾರ್ಮಿಕರಿಬ್ಬರು ಮಲಗಿದಲ್ಲಿಯೇ ನಿಗೂಢ ರೀತಿಯಲ್ಲಿ ಪ್ರಾಣಬಿಟ್ಟ ಘಟನೆ ಹಾಸನ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ.
ಕೊಠಡಿಯಲ್ಲಿ ಮಲಗಿದ್ದ ಸ್ಥಳದಲ್ಲೇ ಇಬ್ಬರು ಯುವಕರು ಸಾವು ಕಂಡಿದ್ದಾರೆ. ಉದ್ಯೋಗ ಅರಸಿ ಉತ್ತರ ಪ್ರದೇಶದಿಂದ ಬಂದಿದ್ದ ನಬಾಬ್ (24) ಮತ್ತು ರಾಮ್‌ಸಂಜೀವನ್ (30) ಎಂಬವರು ಮೃತರು. ಉತ್ತರ ಪ್ರದೇಶದ ನಯನಪುರ್ ಗ್ರಾಮದ ಯುವಕರು ಕೆಲಸ ಅರಸಿ ಹಾಸನಕ್ಕೆ ಬಂದಿದ್ದು ಎರಡು ದಿನ ಕೆಲಸ ಮಾಡಿ ಜ್ವರದಿಂದ ಬಳಲಿ ಕೆಲಸಕ್ಕೆ ರಜೆ ಮಾಡಿದ್ದರು. ಆಸ್ಪತ್ರೆಗೆ ಹೋಗಿ ಬಂದು ಔಷಧಿ ಸೇವಿಸಿ ಮಲಗಿದ್ದವರು ನಿಗೂಢ ಸಾವನ್ನಪ್ಪಿದ್ದಾರೆ.
ಹನುಮಂತಪುರ ಗ್ರಾಮದ ಮಹೇಶ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ರೂಂ ಪಡೆದು ಯುವಕರು ವಾಸವಿದ್ದರು. ಬುಧವಾರ ರಾತ್ರಿ ಊಟ ಮುಗಿಸಿ ರೂಮಿನಲ್ಲಿ ಮಲಗಿದ್ದ ಇಬ್ಬರು ಯುವಕರು, ಶುಕ್ರವಾರದ ವರೆಗೂ ಕೊಠಡಿ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ಬಾಗಿಲು ಒಡೆದು ಮನೆಯ ಮಾಲೀಕ ಪರಿಶೀಲನೆ ನಡೆಸಿದ್ದು ಯುವಕರು ತಾವು ಮಲಗಿದ‌್ದ ಜಾಗದಲ್ಲಿಯೇ ಸಾವನ್ನಪ್ಪಿದ್ದು ಪತ್ತೆಯಾಗಿದೆ. ಇಬ್ಬರ ಮೂಗಿನಲ್ಲು ರಕ್ತ ಬಂದಿದ್ದು ಒಂದೇ ರೀತಿಯ ಸಾವಿಗೇನು ಕಾರಣ ಎಂದು ಪರಿಶೀಲನೆ ಆಗಬೇಕಷ್ಟೆ.
ಕೊಳೆಯಲಾರಂಭಿಸಿದ್ದ ಮೃತದೇಹಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Hassan two laboures from north found dead as sleeping.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm