ಬ್ರೇಕಿಂಗ್ ನ್ಯೂಸ್
17-07-23 05:48 pm HK News Desk ಕರ್ನಾಟಕ
ಚಿಕ್ಕಬಳ್ಳಾಪುರ, ಜುಲೈ 17: ಎರಡು ಸರ್ಕಾರಗಳ ಬಗ್ಗೆ ನಮಗೆ ದ್ವಂದ್ವ ನಿಲುವು ಇದೆ. ಕಳೆದ ಸರ್ಕಾರದ ಬಗ್ಗೆಯೂ ನಮಗೆ ಒಳ್ಳೆ ಅಭಿಪ್ರಾಯ ಇತ್ತು. ಆದರೆ 30- 40% ಭ್ರಷ್ಟಾಚಾರ ಮಾಡಿದ ಬಗ್ಗೆ ದಾಖಲೆ ಇದ್ದ ಕಾರಣ ಪ್ರಧಾನ ಮಂತ್ರಿಗಳಿಗೆ ದೂರು ಕೊಡಬೇಕಾಯಿತು. ಕಳೆದ ಸರ್ಕಾರದಲ್ಲಿ ಗುತ್ತಿಗೆದಾರರಿಗೆ 25 ಸಾವಿರ ಕೋಟಿ ಬಾಕಿ ಇರಿಸಿದ್ದಾರೆ. ಅದನ್ನು ಮಾಡಿಸುತ್ತೇವೆಂದು ಈಗಿನ ಸರ್ಕಾರ ಹೇಳಿದೆ. ಪೇಮೆಂಟ್ ಆಗೋದು ತಡ ಆಗಿದೆ ಅಂತ ನೋವಿದೆ. ಯಾವುದೇ ಪಕ್ಷ ಒಳ್ಳೆದು ಮಾಡಿದರೂ ನಮ್ಮ ಬೆಂಬಲ ಇದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ದೇಶದಲ್ಲಿ ಗುತ್ತಿಗೆದಾರರಷ್ಟು ಕಷ್ಟದಲ್ಲಿರೋರು ಯಾರೂ ಇಲ್ಲ. ರಾಜ್ಯದಲ್ಲಿ ಶೇ 85 % ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಅದರಲ್ಲಿ ಶೇ. 15% ಪರವಾಗಿಲ್ಲ, ಅದರಲ್ಲಿ 5% ಅವರದೇ ಮೆಥೆಡ್ ನಲ್ಲಿ ಕೆಲಸ ಮಾಡ್ತಾ ಇದಾರೆ. ಕಳೆದ ಸರ್ಕಾರದಲ್ಲಿ ಯಾರಿಗೂ ಸರಿಯಾಗಿ ಪೇಮೆಂಟ್ ಕೊಡಲಿಲ್ಲ. ಅದರ ವಿರುದ್ಧವೇ ಹೋರಾಟ ಮಾಡಬೇಕಾಯಿತು. ಕಳೆದ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಆ ಬಗ್ಗೆ ಮೂರು ವರ್ಷ ನಿರಂತರವಾಗಿ ಹೋರಾಟ ಮಾಡಬೇಕಾಯಿತು.
ಈಗ ಹೊಸ ಸರ್ಕಾರ ಬಂದಿದೆ ಎಲ್ಲಾ ಮಂತ್ರಿಗಳನ್ನು ಮೀಟ್ ಮಾಡಿದ್ದೇವೆ. ಸಿಎಂ, ಡಿಸಿಎಂ ಎಲ್ಲ ಸಚಿವರನ್ನೂ ಮೀಟ್ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಫೈನಾನ್ಷಿಯಲ್ ಕಂಡಿಷನ್ ತುಂಬಾ ಹದಗೆಟ್ಟಿದೆ ಅಂತ ಹೇಳಿದ್ದಾರೆ. ಪೇಮೆಂಟ್ ಆಗದೆ ಗುತ್ತಿಗೆದಾರರು ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು ಹೆಣಗಾಡುತ್ತಿದ್ದಾರೆ. ಪಿಡಬ್ಲ್ಯೂಡಿ ಮಿನಿಸ್ಟರ್ ಮಾತ್ರ ಬಹಳ ಖಡಾಖಂಡಿತ ಬಿಲ್ ರಿಲೀಸ್ ಮಾಡ್ತೇವೆ ಅಂತ ಹೇಳಿದ್ದಾರೆ. ಐದು ವರ್ಷಗಳ ಪೇಮೆಂಟ್ ಪೂರ್ತಿ ಬಿಲ್ ಪೇ ಮಾಡ್ತೇವೆ ಅಂತ ಹೇಳಿದ್ದಾರೆ. ಇದನ್ನು ಬಿಟ್ಟು ಸಂಘರ್ಷಕ್ಕೆ ನಿಂತರೆ ನಾವು ಸಿದ್ದರಾಗಿದ್ದೇವೆ ಎಂದು ಪರೋಕ್ಷವಾಗಿ ಸಿದ್ದು ಸರ್ಕಾರಕ್ಕೆ ಕೆಂಪಣ್ಣ ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ 25 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಅತಿ ಹೆಚ್ಚು ಬಿಲ್ ಬಾಕಿ ಇದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯವರಿಗೆ ಲೆಕ್ಕ ಸರಿಯಾಗಿ ಸಿಗುತ್ತಿಲ್ಲ. ಡಿಸಿಎಂ ಡಿಕೆಶಿ ಬಾಕಿ ಇರುವ ಬಿಲ್ ಗಳ ಪಟ್ಟಿ ತರಸಿದ್ದಾರೆ. ಕಳೆದ ಸರ್ಕಾರದಲ್ಲಿ ಒಂದು ಕೋಟಿ ರೂಪಾಯಿ ಕೆಲಸಕ್ಕೆ ನೂರು ಕೋಟಿ ರೂಪಾಯಿ ಕೆಲಸ ಮಾಡಿಸಿದ್ದಾರೆ. ಒಬ್ಬ ಗುತ್ತಿಗೆದಾರನಿಗೆ ಏಳುನೂರು ಕೋಟಿ ಬಾಕಿ ಮೊತ್ತ ಕೊಡಬೇಕಾಗಿದೆ. ಡಿಸಿಎಂ ಡಿಕೆ ಶಿವಕುಮಾರ್, ಒಬ್ಬರಿಗೆ ಏಳನೂರು ಕೋಟಿ ಕೊಟ್ಟರೆ ಉಳಿದವರ ಕಥೆ ಏನೆಂದು ಡಿಕೆಶಿ ಕೇಳಿದ್ದಾರೆ.
ಮೂರು ವರ್ಷಗಳಿಂದ ಬಾಕಿ ಮೊತ್ತ ಇದೆ. ಈ ಸರ್ಕಾರ ಇನ್ನೂ ಯಾವುದೇ ಕೆಲಸಗಳನ್ನ ಪ್ರಾರಂಭ ಮಾಡಿಲ್ಲ. ಹಳೆ ಸರ್ಕಾರದ ಕೆಲಸಗಳ ಬಾಕಿ ಮೊತ್ತ ಬಿಟ್ಟರೆ ಸಾಕಾಗಿದೆ. 40 ಶೇ. ಕಮಿಷನ್ ದಾಖಲೆ ಸಿಕ್ಕಿದ ಮೇಲೆ ಹೋರಾಟ ಮಾಡಲು ಪ್ರಾರಂಭಿಸಿದ್ದು. ಅವರಿಗೆ ಇಷ್ಟ ಬಂದಹಾಗೆ ನಡೆದುಕೊಂಡರು, ರೂಲ್ಸ್ ರೆಗ್ಯೂಲೇಷನ್ ಫಾಲೋ ಮಾಡಲಿಲ್ಲ. ಇದರ ಬಗ್ಗೆ ಬಿಜೆಪಿ ಮುಖ್ಯಮಂತ್ರಿಗಳಿಗೆ ಕೇಳಿದ್ದೆವು, ಕರೆದು ಮಾತಾಡಿ ಅಂತ. ಆದರೆ ನನ್ನನ್ನು ರಾತ್ರಿ ಎರಡು ಗಂಟೆಗೆ ಹಿಡಿದೊಯ್ದು ಜೈಲಲ್ಲಿ ಇಟ್ಟಿದ್ರು. ಅವರು ಜೈಲಿಗೆ ಹಾಕಿದ್ರು ನಾನೇನು ಅವರಿಗೆ ವಿರುದ್ಧವಾಗಿರಲಿಲ್ಲ.
ಹೂ ಈಸ್ ಕೆಂಪಣ್ಣ ಎಂದು ಕೇಳಿದ್ದ ಮಾಜಿ ಸಚಿವ ಸುಧಾಕರ್ ಟೀಕೆಯ ಕುರಿತ ಪ್ರಶ್ನೆಗೆ, ಸುಧಾಕರ್ ಏನು ಮಾಡಿದ್ದಾರೋ ಅದನ್ನು ಅನುಭವಿಸುತ್ತಿದ್ದಾರೆ. ನಮ್ಮ ಗುತ್ತಿಗೆದಾರರಿಗೂ ಹೆದರಿಸಿದ್ದರು. ಅಧಿಕಾರಿಗಳಿಗೂ ಹೆದರಿಸಿದ್ದರು. ಹೋರಾಟ ಮಾಡೊವಾಗ ನಾವ್ ಯಾರಿಗೂ ಹೆದರಿಕೊಳ್ಳಲಿಲ್ಲ. ಡಬಲ್ ಗೇಮ್ ಆಡೋರು ನಮ್ಮಲ್ಲೂ ಇದಾರೆ, ರಾಜಕಾರಣದಲ್ಲೂ ಇದಾರೆ. ಮೀರ್ ಸಾದಿಕರು ಎಲ್ಲಾ ಕಡೆ, ಎಲ್ಲಾ ಕಾಲದಲ್ಲೂ ಇದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೂ ಕಮಿಷನ್ ವಿಚಾರದ ಬಗ್ಗೆ ಹೇಳಿದ್ದೆವು. ಗವರ್ನರ್ ಗೂ ಹೇಳಿದ್ವಿ, ಕೊನೆಗೆ ಪ್ರಧಾನಿಗಳಿಗೆ ದೂರು ಕೊಡಬೇಕಾಗಿ ಬಂದಿತ್ತು. ಇದನ್ನೇ ಬಿಜೆಪಿಯವರು ತಪ್ಪಾಗಿ ಅರ್ಥೈಸಿಕೊಂಡು ಈಗ ಅನುಭವಿಸುತ್ತಿದಾರೆ. ಯಾರಾದ್ರೂ ಗುತ್ತಿಗೇದಾರರ ಬಳಿ ಕಮಿಷನ್ ಬೇಡಿಕೆ ಇಟ್ರೆ ಕಾಂಗ್ರೆಸ್ ಸರ್ಕಾರದ ವಿರುದ್ದವಾಗಿಯೂ ಹೋರಾಟ ಮಾಡುತ್ತೇವೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೆಲವು ಕೆಲಸಗಳನ್ನು ನಿಲ್ಲಿಸಿದ್ದಾರೆ. ಕೋಡ್ ಆಫ್ ಕಂಡಕ್ಟ್ ಇದ್ದಾಗ ವಿಪರೀತ ಕೆಲಸಗಳನ್ನು ಮಂಜೂರು ಮಾಡಿದ್ದಾರೆ. ಅವುಗಳನ್ನೆಲ್ಲ ನಿಲ್ಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಹೋರಾಟದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಂದರೆ,ಲ ಮೂರ್ಖರಾಗುತ್ತೇವೆ. ಮಾಜಿ ಸಚಿವ ಡಾ.ಕೆ. ಸುಧಾಕರ್ ಬಗ್ಗೆ ಮಾತಾಡಕ್ಕೆ ಇಷ್ಟಪಡಲ್ಲ. ಸತ್ತ ಹಾವಿನ ಮೇಲೆ ದೊಣ್ಣೆ ಪ್ರಹಾರ ಮಾಡೋದು ಬೇಡ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕ್ತೇನೆ ಎಂದು ಹೇಳಿದ್ದರು. ನಿನಗೆ ತಾಕತ್ತಿದ್ದರೆ ಡಿಫರ್ಮೇಷನ್ ಕೇಸ್ ಹಾಕಿ ನೋಡೋಣ ಅಂತ ಹೇಳಿದ್ದೆ. ಇದುವರೆಗೂ ಸುಧಾಕರ್ ಕೇಸ್ ಹಾಕಿಲ್ಲ ಎಂದರು.
BJP government has bills pending of 25 thousand crores says to contractors in Karnataka says Kempanna.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm