ಯುಪಿಎ ಒಕ್ಕೂಟ ಇನ್ನು 'ಇಂಡಿಯಾ' ; ದೇಶವೇ ನಮಗೆ ಮುಖ್ಯ ಎಂದು ಸಾರಿದ ವಿಪಕ್ಷಗಳು, ಸಾಧ್ಯವಿದ್ದರೆ ನಮ್ಮನ್ನು ಎದುರಿಸಿ ಎಂದ ಖರ್ಗೆ, ಇಂಡಿಯಾಗೆ ಚಾಲೆಂಜ್ ಮಾಡ್ತೀರಾ ಎಂದ ಮಮತಾ 

18-07-23 08:41 pm       Bangalore Correspondent   ಕರ್ನಾಟಕ

ಲೋಕಸಭಾ ಚುನಾವಣೆ ಗಮನದಲ್ಲಿಟ್ಟು ಬಿಜೆಪಿ ವಿರೋಧಿ 26 ವಿಪಕ್ಷಗಳು ಮಹಾಘಟಬಂಧನ್‌ ಸಭೆಯನ್ನು ಬೆಂಗಳೂರಿನಲ್ಲಿ ಎರಡು ದಿನ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿವೆ.

ಬೆಂಗಳೂರು, ಜುಲೈ 18: ಲೋಕಸಭಾ ಚುನಾವಣೆ ಗಮನದಲ್ಲಿಟ್ಟು ಬಿಜೆಪಿ ವಿರೋಧಿ 26 ವಿಪಕ್ಷಗಳು ಮಹಾಘಟಬಂಧನ್‌ ಸಭೆಯನ್ನು ಬೆಂಗಳೂರಿನಲ್ಲಿ ಎರಡು ದಿನ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿವೆ. ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹೊಸ ಒಕ್ಕೂಟಕ್ಕೆ ಇಂಡಿಯಾ ಎನ್ನುವ ಹೆಸರಿಡಲಾಗಿದೆ ಎಂದು ತಿಳಿಸಿದ್ದಾರೆ. ಇಂಡಿಯಾ ಅನ್ನೋ ಹೆಸರೇ ನಮ್ಮ ಮೊದಲ ಜಯ. ನರೇಂದ್ರ ಮೋದಿ ಸಾಧ್ಯವಾದರೆ 'ಇಂಡಿಯಾ'ವನ್ನು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ. 

INDIA ಎಂದರೆ ಇಂಡಿಯನ್ ನ್ಯಾಶನಲ್ ಡೆವಲಪ್ಮೆಂಟ್ ಇಂಕ್ಲೂಸಿವ್ ಎಲಯನ್ಸ್ ಎಂದು ಖರ್ಗೆ ಹೇಳಿದ್ದಾರೆ. ‌ಈ ಹಿಂದೆ ಯುಪಿಎ ಹೆಸರಲ್ಲಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಇತ್ತು.‌ ಅದನ್ನೀಗ ದೇಶವೇ ನಮಗೆ ದೊಡ್ಡದು ಎನ್ನುವ ರೀತಿ ತೋರಿಸುವ ಸಲುವಾಗಿ ಇಂಡಿಯಾ ಹೆಸರಿಡಲು ವಿಪಕ್ಷಗಳು ನಿರ್ಣಯಕ್ಕೆ ಬಂದಿವೆ. 

Opposition Meeting in Bengaluru LIVE: Oppn Coalition of 26 Parties Named ' INDIA', Next Meet in Mumbai - News18

ನೀವು ಇಂಡಿಯಾಗೆ ಸವಾಲು ಹಾಕಬಹುದೇ ? 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಎನ್‌ಡಿಎ ಮಿತ್ರ ಪಕ್ಷಗಳೇ, ನೀವು ಇಂಡಿಯಾ (ಐಎನ್‌ಡಿಐಎ)ಗೆ ಸವಾಲು ಹಾಕಬಹುದೇ? ಬಿಜೆಪಿಯವರು ಇಂಡಿಯಾಗೆ ಚಾಲೆಂಜ್ ಮಾಡುತ್ತೀರಾ? ನಾವು ನಮ್ಮ ತಾಯ್ನಾಡನ್ನು ಪ್ರೀತಿಸುತ್ತೇವೆ. ಭವಿಷ್ಯದಲ್ಲಿಯೂ ನಿಮ್ಮ ಜೊತೆಗಿದ್ದೇವೆ. ರೈತರ ಜೊತೆಗಿದ್ದೇವೆ, ಪೊಲೀಸರ ಜೊತೆಗಿದ್ದೇವೆ. ದೇಶದ ಜೊತೆಗಿದ್ದೇವೆ ಎಂದು ಇದೇ ವೇಳೆ ಮಾರ್ಮಿಕ ಮಾತುಗಳನ್ನು ಆಡಿದ್ದಾರೆ. 

On Modi's 'for the family' jibe, Uddhav's retort: 'Yes, we are fighting  for...' | Latest News India - Hindustan Times

Pawar joins Oppn's Bengaluru meet, UPA to get new name - Rediff.com

ಮುಂದಿನ ಸಭೆ ಮುಂಬೈನಲ್ಲಿ ; ಠಾಕ್ರೆ 

ನಾವು ದೇಶವನ್ನು ಸುರಕ್ಷಿತವಾಗಿ ಇಡಲು ಬಯಸುತ್ತೇವೆ. ಮುಂದಿನ ಸಭೆಯನ್ನು ಆಗಸ್ಟ್ 6ರಂದು ಮುಂಬೈನಲ್ಲಿ ಮಾಡುತ್ತೇವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. 

Bengaluru: Opposition alliance likely to be named Indian National  Democratic Inclusive Alliance, says report - BusinessToday

ಇವತ್ತಿನ ಸಭೆಯಲ್ಲಿ ಮಹತ್ವದ ಚರ್ಚೆ ಆಗಿದೆ. ದೇಶದ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಬಿಜೆಪಿಯವರು ದೇಶವನ್ನು ಮಾರುತ್ತಿದ್ದಾರೆ, ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ದೇಶದ ಧ್ವನಿಯನ್ನು ಅಡಗಿಸುತ್ತಿರುವವರ ಜೊತೆಗೆ ಹೋರಾಟ ಮಾಡುತ್ತಿದ್ದೇವೆ. ದೇಶಕ್ಕಾಗಿ ಮುಂದೇನು ಮಾಡಬೇಕು ಎಂದು ಚರ್ಚಿಸಲು ಮುಂದಿನ ಸಭೆ ಮಾಡಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು. 

26 ಪಕ್ಷಗಳ ನಾಯಕರು ಸಭೆ ಸೇರಿ ಚರ್ಚಿಸಿದ್ದೇವೆ. ದೇಶದಲ್ಲಿ ಎಲ್ಲರೂ ಆತಂಕದಲ್ಲಿದ್ದಾರೆ. ಹೀಗಾಗಿ ನಾವು ಸೇರಿ ದೇಶವನ್ನು ಮುನ್ನಡೆಸಲು ನಿರ್ಧರಿಸಿದ್ದೇವೆ. ಬಿಜೆಪಿಯವರು ದೇಶ ಮಾರುವ ಒಪ್ಪಂದ ಮಾಡಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ‌

The day 2 of the Opposition parties meeting in Bengaluru has made an important decision regarding the renaming of UPA (United Progressive Alliance). Reports claim that the UPA will now be renamed 'INDIA' or ‘I.N.D.I.A’, the full-form of which will be ‘Indian National Democratic Inclusive Alliance’.